ಕಾಂಗ್ರೆಸ್ಸಿನವರು ದ್ವೇಷ ಬಿಟ್ಟು ಅಭಿವೃದ್ದಿ ಕಡೆ ಗಮನ ಹರಿಸಲಿ: ಡಿ.ಎನ್.ಜೀವರಾಜ್

| Published : Jan 29 2025, 01:31 AM IST

ಕಾಂಗ್ರೆಸ್ಸಿನವರು ದ್ವೇಷ ಬಿಟ್ಟು ಅಭಿವೃದ್ದಿ ಕಡೆ ಗಮನ ಹರಿಸಲಿ: ಡಿ.ಎನ್.ಜೀವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ತಾಂಡವಾಡುತ್ತಿದೆ.ಅಭಿವೃದ್ದಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ.ಪಟ್ಟಭದ್ರ ಹಿತಾಸಕ್ತಿಗಳು ಕಾಂಗ್ರೇಸ್ ಮುಖಂಡರುಗಳ ದ್ವೇಷದ ರಾಜಕಾರಣದಲ್ಲಿ ಸಾದಾರಣ ಜನರು ನಲುಗಿ ಹೋಗಿದ್ದಾರೆ.ಕಾಂಗ್ರೇಸ್ಸಿಗರು ದ್ವೇಷದ ರಾಜಕಾರಣ ಬಿಟ್ಟು ಅಭಿವೃದ್ದಿಯ ಕಡೆ ಗಮನ ಹರಿಸಲಿ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಹೇಳಿದರು.

ವ್ಯಾಪಾರಿಗಳ ಮೇಲೆ ದರ್ಪ

ಶೃಂಗೇರಿ: ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ತಾಂಡವಾಡುತ್ತಿದೆ.ಅಭಿವೃದ್ದಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ.ಪಟ್ಟಭದ್ರ ಹಿತಾಸಕ್ತಿಗಳು ಕಾಂಗ್ರೇಸ್ ಮುಖಂಡರುಗಳ ದ್ವೇಷದ ರಾಜಕಾರಣದಲ್ಲಿ ಸಾದಾರಣ ಜನರು ನಲುಗಿ ಹೋಗಿದ್ದಾರೆ.ಕಾಂಗ್ರೇಸ್ಸಿಗರು ದ್ವೇಷದ ರಾಜಕಾರಣ ಬಿಟ್ಟು ಅಭಿವೃದ್ದಿಯ ಕಡೆ ಗಮನ ಹರಿಸಲಿ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಹೇಳಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಪ್ರಜಾಪ್ರಭುತ್ವ ವ್ಯವಸ್ಥೆ ಶೃಂಗೇರಿ ಕ್ಷೇತ್ರದಲ್ಲಿ ಇಲ್ಲದಂತಾಗಿದೆ. ಶಾಸಕರು, ಕಾಂಗ್ರೆಸ್ ಮುಖಂಡರ ಅನುಯಾಯಿಗಳಂತೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದು, ಬಡವರು,ಜನಸಾಮಾನ್ಯರ ಮೇಲೆ ತಮ್ಮ ಅಟ್ಟಹಾಸ ತೋರಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಪಟ್ಟಣದ ಗಾಂಧಿ ಮೈದಾನದಲ್ಲಿ ಬಡವ್ಯಾಪಾರಿಗಳ 9 ಅಂಗಡಿಗಳನ್ನು ನೆಲಸಮಗೊಳಿಸಿ ಅಟ್ಟಹಾಸ ಮೆರೆದಿದ್ದಾರೆ.ಅಧಿಕಾರಿಗಳ ಮೇಲೆ ಒತ್ತಡ ಹಾಕಿಸಿ ರಾತ್ರೋ ರಾತ್ರಿ ನೋಟಿಸ್ ನೀಡಿ, ಬೆಳಿಗ್ಗೆಯೇ ನೆಲಸಮಗೊಳಿಸಿ ಬಿಜೆಪಿಯವರ ಮೇಲೆ ಆರೋಪ ಹೊರಿಸುವ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

ಜೀವನೋಪಾಯಕ್ಕಾಗಿ ಸಣ್ಣ ಅಂಗಡಿ,ಹೋಟೆಲುಗಳನ್ನು ಅವಲಂಬಿಸಿದ್ದ ಸಣ್ಣ ಬಡಪಾಯಿ ವ್ಯಾಪಾರಿಗಳನ್ನು ಬೀದಿಪಾಲು ಮಾಡಿಸಿದ್ದಾರೆ.ಶಾಸಕರು ಜಿಲ್ಲಾದಿಕಾರಿಗಳಿಗೆ ಸೂಚಿಸಬಹುದಿತ್ತಲ್ಲ.ಈ ಅಂಗಡಿಗಳು ನ್ಯಾಯಾಲಯದಲ್ಲಿ ಪ್ರಕರಣ ಇರಲಿಲ್ಲ.ಆದರೂ ಕೂಡ ಜಿಲ್ಲಾದಿಕಾರಿಗ ಆದೇಶ ಎಂದು,ಹೋಳೆ ಕರಾಬ್ ಪ್ರದೇಶ ಅಂತ ತೆರವುಗೊಳಿಸಿದ್ದಾರೆ.ಇದರಿಂದ ಏನು ಸಾಧನೆ ಮಾಡಿದಂತಾಯಿತು.ದ್ವೇಷ ಸಾಧನೆಯಷ್ಟೆ ಎಂದು ಹೇಳಿದರು.

ಕೆಲವರು ಮಠದ ಕಟ್ಟವೂ ಹೊಳೆ ಕರಾಬಿನಲ್ಲಿ ಬರುತ್ತದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಮಠಕ್ಕೆ ಕೋಟ್ಯಂತರ ಭಕ್ತರಿದ್ದಾರೆ. ಮಠದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ ಸಾರ್ವಜನಿಕ ಕ್ಷಮೆಯಾಚಿಸಬೇಕು.ನಾಟಕದ ರಾಜಕಾರಣ ನಿಲ್ಲಿಸಲೀ,ಕ್ಷೇತ್ರದಲ್ಲಿ ಶಾಸಕರು ಕಳೆದ 5 ವರ್ಷಗಳ ಕಾಲ ಅಭಿವೃದ್ಧಿಗೆ ಜೀವರಾಜ್ ಬಿಡುವುದಿಲ್ಲ ಎಂದು ಹೇಳಿಕೊಂಡು ಕಳೆದರು. ಈಗ ಏನು ಹೇಳುತ್ತಾರೆ, ಕ್ಷೇತ್ರದಲ್ಲಿ ಅಭಿವೃದ್ದಿಯಿಲ್ಲ. ಸರ್ಕಾರದ ವೈಫಲ್ಯತೆ ಮುಚ್ಚಿಡಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಶಾಸಕರಾದವರು ಶಾಸಕ ಸ್ಥಾನದ ಘನತೆಗೆ ತಕ್ಕಂತೆ ಇರಬೇಕು ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ತಲಗಾರು ಉಮೇಶ್, ಕಾರ್ಯದರ್ಶಿ ನೂತನ್ ಕುಮಾರ್, ಪಪಂ ಅಧ್ಯಕ್ಷ ವೇಣುಗೋಪಾಲ್, ಉಪಾಧ್ಯಕ್ಷ ಪ್ರಕಾಶ್, ಸದಸ್ಯರಾದ ರಾಧಿಕಾ, ಶ್ರೀವಿದ್ಯಾ.ಪ್ರವೀಣ್, ಮುರುಳಿ, ವಿಜಯ್ ಮತ್ತಿತರರು ಇದ್ದರು.