ಕಳೆದ ಬಾರಿ ಸಚಿವರಾಗಿದ್ದ ವೇಳೆ ಮಂಜೂರಾಗಿದ್ದ ಈ ಕಾವೇರಿ ನದಿ ಸೇತುವೆ ಕಾಮಗಾರಿಯ ಗುತ್ತಿಗೆದಾರರು ವಹಿಸಿಕೊಂಡಿರುವ ಆಂಧ್ರಪ್ರದೇಶ ಮೂಲದ ಬಿ.ಎಸ್. ಆರ್. ಕನ್ ಸ್ಟ್ರಕ್ಸನ್ ಕಂಪನಿ ಇಂದಿಗೂ ಪೂರ್ಣಗೊಳಿಸದೇ ಸ್ಥಗಿತಗೊಂಡಿದೆ. ಇದಕ್ಕೆ ಗುತ್ತಿಗೆದಾರರು ಮತ್ತು ಎಂಜಿನಿಯರ್ ಬೇಜವಾಬ್ದಾರಿಯೇ ಕಾರಣ. ಈ ಸೇತುವೆ ರಸ್ತೆಗೆ ಮೀನುಗಾರಿಕೆ ಇಲಾಖೆಗೆ ಸೇರಿದ ಕಟ್ಟಡಗಳನ್ನು ಈ ಹಿಂದೆಯೇ ನೆಲಸಮಗೊಳಿಸಿದರೂ ಇಲಾಖೆಯ ಪರ್ಯಾಯ ವ್ಯವಸ್ಥೆ ಕೈಗೊಂಡು ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಎಂದು ಎಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ತರಾಟೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಇಲ್ಲಿಯ ರಾಮನಾಥಪುರ ಸೇತುವೆ ಸಂಪರ್ಕ ರಸ್ತೆ ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಂಡು ಸೇತುವೆ ಕಾಮಗಾರಿ ಮುಗಿಸಿ ವಾಹನಗಳು ಮತ್ತು ಸಾರ್ವಜನಿಕರಿಗೆ ತಿರುಗಾಡಲು ಬೇಗ ಅವಕಾಶ ಕಲ್ಪಿಸುವಂತೆ ಮಾಜಿ ಸಚಿವರು ಹಾಗೂ ಶಾಸಕರಾದ ಎ. ಮಂಜು ಅವರು ಗುತ್ತಿಗೆದಾರ ಮತ್ತು ಎಂಜಿನಿಯರ್‌ಗಳಿಗೆ ತರಾಟೆ ತೆಗುದುಕೊಂಡರು.

ರಾಮನಾಥಪುರದ ಕಾವೇರಿ ನದಿಗೆ ನಿರ್ಮಿಸುತ್ತಿರುವ ಸೇತುವೆಯ ಸ್ಥಳಕ್ಕೆ ಅಗಮಿಸಿ ಪರಿಶೀಲನೆ ಮಾಡಿ ಮಾತನಾಡಿದ ಅವರು, ಈ ಸೇತುವೆ ಮಾರ್ಗ ಹಾಸನದಿಂದ ಅರಕಲಗೂಡು ರಾಮನಾಥಪುರ ಮಾರ್ಗ ಕೇರಳಕ್ಕೆ ಹೋಗುವ ಮುಖ್ಯ ರಸ್ತೆಯಾಗಿದ್ದು, ಈ ಕಾಮಗಾರಿಗೆ ಹಣವಿದ್ದರೂ ಸಹ ನೀವು ಕಾಮಗಾರಿ ಮಾಡಿಸದೇ ಇರುವುದು ಸರಿ ಇಲ್ಲ ಎಂದು ಕೆ.ಆರ್. ಡಿ ಸಿಎಲ್ ಎಂಜಿನಿಯರ್ ಮತ್ತು ಗುತ್ತಿಗೆದಾರರನ್ನು ಕರೆಸಿ ಕಾಮಗಾರಿ ನನೆಗುದಿಗೆ ಬಿದ್ದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಬಾರಿ ಸಚಿವರಾಗಿದ್ದ ವೇಳೆ ಮಂಜೂರಾಗಿದ್ದ ಈ ಕಾವೇರಿ ನದಿ ಸೇತುವೆ ಕಾಮಗಾರಿಯ ಗುತ್ತಿಗೆದಾರರು ವಹಿಸಿಕೊಂಡಿರುವ ಆಂಧ್ರಪ್ರದೇಶ ಮೂಲದ ಬಿ.ಎಸ್. ಆರ್. ಕನ್ ಸ್ಟ್ರಕ್ಸನ್ ಕಂಪನಿ ಇಂದಿಗೂ ಪೂರ್ಣಗೊಳಿಸದೇ ಸ್ಥಗಿತಗೊಂಡಿದೆ. ಇದಕ್ಕೆ ಗುತ್ತಿಗೆದಾರರು ಮತ್ತು ಎಂಜಿನಿಯರ್ ಬೇಜವಾಬ್ದಾರಿಯೇ ಕಾರಣ. ಈ ಸೇತುವೆ ರಸ್ತೆಗೆ ಮೀನುಗಾರಿಕೆ ಇಲಾಖೆಗೆ ಸೇರಿದ ಕಟ್ಟಡಗಳನ್ನು ಈ ಹಿಂದೆಯೇ ನೆಲಸಮಗೊಳಿಸಿದರೂ ಇಲಾಖೆಯ ಪರ್ಯಾಯ ವ್ಯವಸ್ಥೆ ಕೈಗೊಂಡು ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಎಂದು ಎಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ತರಾಟೆ ತೆಗೆದುಕೊಂಡರು.ಅಲ್ಲದೇ ಕಾವೇರಿ ನದಿಗೆ ದೇವಾಲಯದ ರಸ್ತೆಗೆ ಕಿರುಸೇತುವೆ ಈ ಕಾಮಗಾರಿ ನಿಂತುಹೋಗಿದ್ದು ಈ ಕಾವೇರಿ ನದಿ ಸೇತುವೆಗೆ ಅಡ್ಡಲಾಗಿ ದೇವಾಲಯಗಳಿಗೆ ಹೋಗುವ ರಸ್ತೆ ಕಾಮಗಾರಿ ಮತ್ತು ಕಿರುಸೇತುವೆ ಕೆಲಸ ಮುಗಿಸಬೇಕು. ಈ ಕಿರು ಸೇತುವೆ ಸುಮಾರು ಒಂದು ವರ್ಷದಿಂದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಿಂದ ರಾಮೇಶ್ವರ ದೇವಾಲಯಕ್ಕೆ ಹೋಗುವ ಈ ಮಧ್ಯ ಕಿರು ಸೇತುವೆ ಕಾಮಗಾರಿ ಅಪೂರ್ಣಗೊಂಡ ಕಾಮಗಾರಿ ಸೇತುವೆ ಲಕ್ಷಾಂತರ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕುಂಟುತ್ತ ಸಾಗಿದ್ದು ಇದರಿಂದ ಸಂಚರಿಸಲು ಭಕ್ತರು ಪರದಾಡುವಂತೆ ಅಗಿದೆ. ಈ ಕಿರು ಸೇತುವೆ ಮತ್ತು ರಸ್ತೆಯನ್ನು ತ್ವರಿತವಾಗಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಎ. ಮಂಜು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕೆ.ಅರ್. ಡಿ.ಸಿ.ಎಲ್. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಲಕ್ಷ್ಮೀ, ಸಹಾಯಕ ಎಂಜಿನಿಯರ್ ರಾಜು, ಸಾರ್ವಜನಿಕರು ಉಪಸ್ಥಿತರಿದ್ದರು.