ಗ್ರಾಮೀಣ ಭಾಗದಲ್ಲಿ ಸಹಕಾರಿ ಸಂಘ ಬಲಗೊಳ್ಳಲಿ

| Published : Dec 21 2023, 01:15 AM IST / Updated: Dec 21 2023, 01:16 AM IST

ಸಾರಾಂಶ

ಧಾರವಾಡ, ಹಾವೇರಿ, ಗದಗ ಜಿಲ್ಲೆಯಲ್ಲಿ 48 ಶಾಖೆಗಳನ್ನು ನಮ್ಮ ಸಂಸ್ಥೆ ಹೊಂದಿದೆ. ಅಧಿಕಾರ ವಹಿಸಿಕೊಂಡ ನಂತರ ಪ್ರತಿ ತಿಂಗಳು ಹೆಚ್ಚು ಜನರನ್ನು ಸದಸ್ಯರನ್ನಾಗಿ ಮಾಡುವ ಗುರಿ ಹೊಂದಿದ್ದೇವೆ. ಸಹಕಾರಿ ಸಂಘಗಳ ಕಟ್ಟಡಕ್ಕೆ ಆದ್ಯತೆ ನೀಡುವುದು. ನಮ್ಮ ಸಂಘದಲ್ಲಿ ಪ್ರತಿಯೊಬ್ಬ ವ್ಯಕ್ತಿ ಪ್ರತಿಯೊಂದು ಕುಟುಂಬವು ಖಾತೆ ಹೊಂದಬೇಕು ಎನ್ನುವ ದೂರದೃಷ್ಠಿ

ಪೂರ್ವಭಾವಿ ಸಭೆಯಲ್ಲಿ ಶಿವಕುಮಾರಗೌಡ ಎಸ್ ಪಾಟೀಲ್ ಅಭಿಪ್ರಾಯ

ಡಂಬಳ: ಗ್ರಾಮೀಣ ಭಾಗದಲ್ಲಿ ಕೆಸಿಸಿ ಬ್ಯಾಂಕ್‌ ಮತ್ತು ಸಹಕಾರ ಸಂಘಗಳು ಬಲಗೊಳ್ಳಬೇಕು. ಕೃಷಿ, ವ್ಯಾಪಾರ, ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವುದು ಕೃಷಿ ಪತ್ತಿನ ಸಹಕಾರಿ ಸಂಘದ ಮೂಲ ಉದ್ದೇಶವಾಗಿದೆ. ರೈತರಿಗೆ ರಾಷ್ಟ್ರೀಕೃತ ಬ್ಯಾಂಕಗಿಂತ ಕಡಿಮೆ ಬಡ್ಡಿ ದರದಲ್ಲಿ ಗಣಿಕೀಕೃತ ಮತ್ತು ಪಾರದರ್ಶಕವಾಗಿ ವಿವಿಧ ಯೋಜನೆಯಡಿ ಸಾಲ ನೀಡಿ ಆರ್ಥಿಕ ಸಬಲತೆ ಹೊಂದಲು ಸಹಕಾರ ಸಂಘ ಅತ್ಯಂತ ಮಹತ್ವದ ಪಾತ್ರ ವಹಿಸಲಿದೆ ಎಂದು ಧಾರವಾಡ ಕೆಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ಶಿವಕುಮಾರಗೌಡ ಎಸ್. ಪಾಟೀಲ ಹೇಳಿದರು.

ಡಂಬಳ ಗ್ರಾಮದ ತೋಂಟದಾರ್ಯ ಕಲಾ ಭವನದಲ್ಲಿ ಬುಧವಾರ ಕರ್ನಾಟಕ ಸೆಂಟ್ರಲ್ ಕೋ ಆಫ್ ಬ್ಯಾಂಕ್ ನೂತನವಾಗಿ ಶಾಖೆ ಪ್ರಾರಂಭಿಸುವ ಕುರಿತು ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಧಾರವಾಡ, ಹಾವೇರಿ, ಗದಗ ಜಿಲ್ಲೆಯಲ್ಲಿ 48 ಶಾಖೆಗಳನ್ನು ನಮ್ಮ ಸಂಸ್ಥೆ ಹೊಂದಿದೆ. ಅಧಿಕಾರ ವಹಿಸಿಕೊಂಡ ನಂತರ ಪ್ರತಿ ತಿಂಗಳು ಹೆಚ್ಚು ಜನರನ್ನು ಸದಸ್ಯರನ್ನಾಗಿ ಮಾಡುವ ಗುರಿ ಹೊಂದಿದ್ದೇವೆ. ಸಹಕಾರಿ ಸಂಘಗಳ ಕಟ್ಟಡಕ್ಕೆ ಆದ್ಯತೆ ನೀಡುವುದು. ನಮ್ಮ ಸಂಘದಲ್ಲಿ ಪ್ರತಿಯೊಬ್ಬ ವ್ಯಕ್ತಿ ಪ್ರತಿಯೊಂದು ಕುಟುಂಬವು ಖಾತೆ ಹೊಂದಬೇಕು ಎನ್ನುವ ದೂರದೃಷ್ಠಿ ಹೊಂದಲಾಗಿದ್ದು, ರೈತರಿಗೆ, ದುರ್ಬಲರಿಗೆ ಗ್ರಾಹಕರಿಗೆ ನಮ್ಮ ಸಂಘ ಜನಸ್ನೇಹಿಯಾಗುವ ಮೂಲಕ ಮಾದರಿಯಾಗಲಿದೆ ಎಂದರು.ಕೆಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಮುನಿಯಪ್ಪ, ಪ್ರಧಾನ ವ್ಯವಸ್ಥಾಪಕ ಶಿವಾನಂದ ವಿ. ಹೂಗಾರ ಮಾತನಾಡಿ, ಭಾರತೀಯ ರಿಸರ್ವ ಬ್ಯಾಂಕ್ 17 ಶಾಖೆ ತೆರೆಯಲು ಅನುಮತಿ ನೀಡಿದೆ. ನಮ್ಮ ಬ್ಯಾಂಕ್‌ ಮೂಲಕ ಬೆಳೆ ಸಾಲ, ಟ್ರ್ಯಾಕ್ಟರ್, ಹೈನುಗಾರಿಕೆ, ನೌಕರರಿಗೆ ವೇತನ ಆಧಾರಿತ ಸಾಲ, ವಾಹನ ಸಾಲ, ಬಂಗಾರ ಆಭರಣ ಸಾಲ, ಗೃಹ ನಿರ್ಮಾಣ ಸಾಲ, ಸ್ವ ಸಹಾಯ ಸಂಘಗಳಿಗೆ ಸಾಲ ಸೇರಿದಂತೆ ವಿವಿಧ ಸೌಲಭ್ಯ ಗ್ರಾಹಕರಿಗೆ ನೀಡಲಾಗುತ್ತದೆ.

ಆರ್.ಟಿ.ಜಿ.ಎಸ್. ನೆಫ್ಟ್‌, ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಗಳಿದ್ದು, ಠೇವಣಿಗೆ ಗ್ರಾಹಕರಿಗೆ ಆಕರ್ಷಕ ಬಡ್ಡಿದರ ಹಾಗೂ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗುತ್ತದೆ. ನಮ್ಮ ಬ್ಯಾಂಕ್ ರೈತರ ಅಭಿವೃದ್ಧಿಗೆ, ರೈತರ ಹಿತಾಶಕ್ತಿಗಾಗಿ ಶ್ರಮಿಸುತ್ತದೆ. ಬ್ಯಾಂಕ್ ಸ್ಥಾಪನೆಗೆ ಬಂಡವಾಳ ಅವಶ್ಯವಾಗಿದ್ದು, ಕನಿಷ್ಠ 3 ರಿಂದ 5 ಕೋಟಿ ಠೇವಣಿ ಇಡಬೇಕು. ಹೀಗಾಗಿ ಈ ಭಾಗದಲ್ಲಿ ನೂತನ ಶಾಖೆ ಪ್ರಾರಂಭದಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಲಿದ್ದು, ಸಾರ್ವಜನಿಕರ ಸಹಭಾಗಿತ್ವ ಮಹತ್ವದಾಗಿದ್ದು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ.ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ವೇದಿಕೆಯ ಮೇಲೆ ಗದಗ ಕೆಸಿಸಿ ಬ್ಯಾಂಕ್ ನಿರ್ದೇಶಕ ಸಿ.ಬಿ. ದೊಡ್ಡಗೌಡ, ವಿ.ಟಿ.ಮೇಟಿ, ಬೀರಪ್ಪ ಎಸ್ ಬಂಡಿ, ಬಸವರಾಜ ಪೂಜಾರ, ಎಸ್.ಬಿ. ಹೂಗಾರ, ಮಲ್ಲಣ್ಣ ಯರಾಶಿ, ಮಹೇಶ ಗಡಗಿ, ಬಸವರಡ್ಡಿ ಬಂಡಿಹಾಳ, ಬಶೀರಹಮ್ಮದ, ಹಾಲಪ್ಪ ಕಬ್ಬೇರಹಳ್ಳಿ, ಸುರೇಶ ಗಡಗಿ, ಮರಿಯಪ್ಪ ಸಿದ್ದಣ್ಣವರ, ಬಾಬುಸಾಬ ಮೂಲಿಮನಿ, ಕೆ.ಕೆ. ಬಂಡಿ, ಜಾಕೀರ ಮೂಲಿಮನಿ, ವಿವಿಧ ಗ್ರಾಮಗಳ ಕೃಷಿ ಪತ್ತಿನ ಸಹಕಾರಿ ಸಂಘದ ಪದಾಧಿಕಾರಿಗಳು, ಗ್ರಾಪಂ ಸದಸ್ಯರು, ಮುಂಡರಗಿ ಶಾಖೆಯ ಬ್ಯಾಂಕ ನಿರೀಕ್ಷಕ ಕೆ.ಬಿ. ದೊಡ್ಡಮನಿ, ಮುಂಡರಗಿ ಕೆಸಿಸಿ ಬ್ಯಾಂಕ್‌ ಮುಖ್ಯಾಧಿಕಾರಿ ಎಸ್.ಬಿ. ಕೂಗು, ಮಹಮ್ಮದರಫೀಕ್‌ ನಮಾಜಿ, ಮಹಾಂತೇಶ ಸುರಕೂಡ, ಸುತ್ತಮುತ್ತಲಿನ ಗ್ರಾಮಸ್ಥರು, ಬ್ಯಾಂಕ್ ಸಿಬ್ಬಂದಿ ಶಿಕ್ಷಕ ರಮೇಶ ಕೊರ್ಲಹಳ್ಳಿ ನಿರೂಪಿಸಿ ವಂದಿಸಿದರು.