ಸಿಎಸ್‌ಆರ್ ಹಣ ಶಿಕ್ಷಣ ಕ್ಷೇತ್ರಕ್ಕೆ ಬಳಕೆಯಾಗಲಿ

| Published : Feb 17 2025, 12:34 AM IST

ಸಾರಾಂಶ

ಸಮಾಜದ ಅಭಿವೃದ್ಧಿಗೆ ಎಲ್ಲವನ್ನೂ ಸರ್ಕಾರದಿಂದ ನಿರೀಕ್ಷಿಸಲು ಆಗುವುದಿಲ್ಲ. ಖಾಸಗಿ ಕಂಪನಿಗಳ ಲಾಭಾಂಶವನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಹೆಣ್ಣು ಮಕ್ಕಳು ಸಹ ಎಲ್ಲಾ ವಿಭಾಗದಲ್ಲಿ ನಿಭಾಯಿಸುವ ಶಕ್ತಿ ಮತ್ತು ಅವಕಾಶಗಳು ಇದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಕೋಲಾರಗ್ರಾಮಾಂತರ ಪ್ರದೇಶ ಬಡ ವಿದ್ಯಾರ್ಥಿಗಳು ಶುಲ್ಕ ಪಾವತಿಸಲು ಸಾಧ್ಯವಾಗದೆ ಕಾಲೇಜು ಶಿಕ್ಷಣದಿಂದ ವಂಚಿತರಾಗುತ್ತಿದ್ದು ಮಲಬಾರ್‌ನಂತಹ ಕಂಪನಿಯು ತನ್ನ ಸಿಎಸ್‌ಆರ್ ಅನುದಾನವನ್ನು ವಿದ್ಯಾರ್ಥಿವೇತನದ ಮೂಲಕ ಅನುಕೂಲ ಮಾಡಿಕೊಟ್ಟಿದೆ. ಇದರ ಸದುಪಯೋಗ ಪಡಿಸಿಕೊಂಡು ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯುವಂತಾಗಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಲಬಾರ್ ಸಂಸ್ಥೆಯಿಂದ ಸಿಎಸ್‌ಆರ್ ಅನುದಾನದಡಿ ಸುಮಾರು ಜಿಲ್ಲೆಯ ೭೨೧ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ೬೧.೬೬ ಲಕ್ಷ ರೂಗಳ ವಿದ್ಯಾರ್ಥಿವೇತನವನ್ನು ವಿತರಿಸಿ ಮಾತನಾಡಿದ ಅವರು ಸಮಾಜದಲ್ಲಿ ಬದಲಾವಣೆ ಶಿಕ್ಷಣದಿಂದ ಮಾತ್ರವೇ ಸಾಧ್ಯ ಎಂದರು.

ಕನಿಷ್ಠ 10 ಪದವಿ ಪಡೆಯಿರಿಜಿಲ್ಲೆಯ ಕೋಲಾರ, ಬಂಗಾರಪೇಟೆ, ಮಾಲೂರು, ಮಾಸ್ತಿ, ಮುಳಬಾಗಿಲು ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿಯರಿಗೆ ಒಟ್ಟು ೬೧ ಲಕ್ಷ ೬೬ ಸಾವಿರ ರು.ಗಳ ವಿದ್ಯಾರ್ಥಿವೇತನ ನೀಡಿದ್ದಾರೆ. ಇದೊಂದು ಒಳ್ಳೆಯ ಕೆಲಸವಾಗಿದೆ. ಆಸ್ತಿ ಏನೂ ಇಲ್ಲದ ಸಮಯದಲ್ಲಿ ಅಂಬೇಡ್ಕರ್ ೫೪ ಪದವಿ ಮಾಡಿದ್ದರು. ಈಗ ಎಲ್ಲ ಸೌಲಭ್ಯ ಇರುವ ನೀವು ಕನಿಷ್ಠ ೧೦ ಡಿಗ್ರಿಯಾದರೂ ಮಾಡಬೇಕು ಎಂದು ತಿಳಿಸಿದರು. ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಎಲ್ಲವನ್ನೂ ಸರ್ಕಾರದಿಂದ ನಿರೀಕ್ಷಿಸಲು ಆಗುವುದಿಲ್ಲ. ಖಾಸಗಿ ಕಂಪನಿಗಳ ಲಾಭಾಂಶವನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಹೆಣ್ಣು ಮಕ್ಕಳು ಸಹ ಎಲ್ಲಾ ವಿಭಾಗದಲ್ಲಿ ನಿಭಾಯಿಸುವ ಶಕ್ತಿ ಮತ್ತು ಅವಕಾಶಗಳು ಇದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿ ಮಲಬಾರ್ ಜೋನಲ್ ಮುಖ್ಯಸ್ಥ ಶರಿಪುದ್ದೀನ್, ಮಹಿಳಾ ಸಬಲೀಕರಣ ಉದ್ದೇಶದಿಂದ ಸರ್ಕಾರಿ ಕಾಲೇಜು ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿವೇತನ ನೀಡುತ್ತಿದ್ದೇವೆ. ಆದಾಯದ ಶೇ ೫ರಷ್ಟು ಹಣ ಸಿಎಸ್‌ಆರ್ ಅನುದಾನದಲ್ಲಿ ನೀಡಲಾಗಿದೆ. ಸಂಸ್ಥೆಯು ಶಿಕ್ಷಣ ಜೊತೆಗೆ ಹಸಿವು ಮುಕ್ತ ಭಾರತ, ಅಜ್ಜಿಮನೆ, ಮಾನವೀಯ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು,ಪಪೂ ಶಿಕ್ಷಣ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಬಾಲಕೃಷ್ಣ, ಬಂಗಾರಪೇಟೆ ಪಿಯು ಕಾಲೇಜು ಪ್ರಾಂಶುಪಾಲ ಸುಬ್ರಹ್ಮಣ್ಯ, ಮಲಬಾರ್ ಸಂಸ್ಥೆಯ ಅಲ್ತಾಫ್, ಸಾಧಿಕ್ ಇದ್ದರು.