ಸಾರಾಂಶ
ಉತ್ತರ ಕರ್ನಾಟಕದಲ್ಲಿಯೇ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಇಳಕಲ್ಲಿನ ವಿಜಯ ಮಹಾಂತೇಶ್ವರ ವಿದ್ಯಾವರ್ಧಕ ಸಂಘವು ಬೆಳೆದು ನಿಂತಿದೆ.
ಕನ್ನಡಪ್ರಭ ವಾರ್ತೆ ಇಳಕಲ್ಲ
ಇಂದು ಸಂಸ್ಥೆಗಳನ್ನು ಕಟ್ಟುವುದು ದೊಡ್ಡದಲ್ಲ. ಆದರೆ ಅವುಗಳನ್ನು ಸರಿಯಾಗಿ ಮುನ್ನೆಡಸಿಕೊಂಡು ಹೋಗುವುದೇ ಅತಿ ದೊಡ್ಡ ಕಾರ್ಯ. ಇಂಥಹ ಕಾರ್ಯವನ್ನು ಎಲ್ಲ ಸದಸ್ಯರು ಸರಿಯಾಗಿ ನಿರ್ವಹಿಸಿಕೊಂಡು ಹೋಗಬೇಕು ಎಂದು ಗುರುಮಹಾಂತ ಶ್ರೀಗಳು ತಿಳಿಸಿದರು.ನಗರದ ವಿಜಯ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಸರ್ವ ಸಾಧಾರಣಾ ಸಭೆಯ ಘನ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಕಾಲದಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವುದು ತೊಂದರೆದಾಯಕ. ಇಂಥಹ ಸಮಯದಲ್ಲಿ ಉತ್ತರ ಕರ್ನಾಟಕದಲ್ಲಿಯೇ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಇಳಕಲ್ಲಿನ ವಿಜಯ ಮಹಾಂತೇಶ್ವರ ವಿದ್ಯಾವರ್ಧಕ ಸಂಘವು ಬೆಳೆದು ನಿಂತಿದೆ. ಇದಕ್ಕೆ ಕಾರಣೀಕರ್ತರಾದ ಸಂಘದ ಸರ್ವ ಸದಸ್ಯರು ಹಾಗೂ ಬೋಧಕ ಸಿಬ್ಬಂದಿಯೇ ಮೂಲ ಕಾರಣ ಎಂದರು ತಪ್ಪಲ್ಲ. ಇನ್ನೂ ಈ ಸಂಸ್ಥೆಗೆ ಶಾಸಕ ವಿಜಯಾನಂದ ಅವರು ಸಂಘ ಸಂಸ್ಥೆಗಳ ನಿರ್ದೇಶಕರಾಗಿ ಆಯ್ಕಯಾಗಿ ಬಂದಿದ್ದು, ಈ ಸಂಸ್ಥೆಗೆ ಆನೆ ಬಲ ಬಂದಂತ್ತಾಯಿತು ಎಂದು ಹೇಳಿದರು.
ಶಾಸಕರ ಮಾರ್ಗದರ್ಶನದಲ್ಲಿ ಇನ್ನಷ್ಟು ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಬೆಳೆಯಲಿ ಎಂದರು. ಇನ್ನೂ ಇದೇ ವೇಳೆ ಶಾಸಕರು ಗುರುಮಹಾಂತ ಶ್ರೀಗಳನ್ನು ಗೌರವಿಸಿ ಸತ್ಕರಿಸಿದರು. ಸಂಸ್ಥೆಯವರು ಶಾಸಕ ವಿಜಯಾನಂದ ಕಾಶಪ್ಪನವರನ್ನು ಗೌರವಿಸಿದರು.ಇದೇ ವೇಳೆಯಲ್ಲಿ ಸಂಸ್ಥೆಗೆ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ನಂದಕಿಧೋತ ಕರವಾ, ವಿರಭದ್ರಪ್ಪ ಬೇವಿನಮಟ್ಟಿ, ಕಿರಣ ಬಿಜ್ಜಲ, ಮಲ್ಲಪ್ಪ ಹರವಿ, ಗುರುಮಹಾಂತೇಶ ಕಲ್ಮಠರನ್ನು ಗೌರವಸಿ ಸತ್ಕರಿಸಿದರು.
ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸಂಸ್ಥೆಯ ಬೆಳವಣಿಗೆ ಮಾಡುವ ತಮ್ಮ ಗುರಿಗೆ ಎಲ್ಲರ ಸಹಕಾರ ಕೋರಿದರು. ಸಮಾರಂಭದಲ್ಲಿ ಇಳಕಲ್ಲ ನಗರ ಸಭೆಯ ಅಧ್ಯಕ್ಷೆ ಸುಧಾರಾಣಿ ಸಂಗಮ, ಸಂಸ್ಥೆಯ ಉಪಾಧ್ಯಕ್ಷರಾದ ಚನ್ನಬಸಯ್ಯ ಸಾಲಿಮಠ, ರತ್ನಾಕರ ಹೂಲಿ, ಚೇರಮನ್ ಶಿವರುದ್ರಪ್ಪ ಗೊಂಗಡಶೆಟ್ಟಿ, ಚೇರ್‌ಮನ್ ಅರುಣ ಬಿಜ್ಜಲ, ಪ್ರಧಾನ ಕಾರ್ಯದರ್ಶಿ ದಿಲೀಪ ದೇವಗಿರಕರ, ಧರ್ಮದರ್ಶಿಗಳಾದ ಸುಲೋಚನಾ ಕರಡಿ, ಜಾಹಗಿರದಾರ ಸಹೋದರರು ಇದ್ದರು. ಸಂಗಣ್ಣ ಗದ್ದಿ ನಿರೂಪಿಸಿದರು.