ಸಾರಾಂಶ
ಸಿಎಸ್.ಆರ್ ಫಂಡನ್ನು ಗಡಿಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಹಕಾರ ನೀಡುತ್ತಿರುವ ಸ್ಕೇಲಾರ್ ಕಂಪನಿ,ಆವಸ್ಪೈರ್ ಫೌಂಡೇಷನ್ ನಂತಹ ಹಲವಾರು ಸಂಘ ಸಂಸ್ಥೆಗಳು ಮಾಡುತ್ತಿರುವ ಸೇವೆಯನ್ನು ಎಂದಿಗೂ ಮರೆಯಲಾಗದು ಎಂದ ಅವರು ಇಂತಹ ಸಂಘ ಸಂಸ್ಥೆಗಳು ನೀಡುವಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳ ಜೊತೆಗೆ ಸ್ಕಾಲಾರ್ ಕಂಪನಿ, ಅವಸ್ಟೈರ್ ಫೌಂಡೇಷನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ವಿದ್ಯಾರ್ಥಿಗಳಿಗೆ ತಿಳಿಸಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲಾವರಣದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಆವೆಸ್ಪೈರ್ ಫೌಂಡೇಷನ್ ಮತ್ತು ಸ್ಕೇಲಾರ್ ಕಂಪನಿಗಳ ವತಿಯಿಂದ ವಿದ್ಯಾರ್ಥಿನಿಯರಿಗೆ ವೈಯಕ್ತಿಕ ನೈರ್ಮಲ್ಯಕ್ಕೆ ಸಂಬಂಧಿಸಿದ ಮತ್ತು ಪುಸ್ತಕಗಳು, ಪಠ್ಯ, ಸಹಪಠ್ಯ ಚಟುವಟಿಕೆಗಳಿಗೆ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.
ಸಿಎಸ್‌ಆರ್ ನಿಧಿ ಸದ್ಬಳಕೆಯಾಗಲಿಸಿಎಸ್.ಆರ್ ಫಂಡನ್ನು ಗಡಿಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಹಕಾರ ನೀಡುತ್ತಿರುವ ಸ್ಕೇಲಾರ್ ಕಂಪನಿ,ಆವಸ್ಪೈರ್ ಫೌಂಡೇಷನ್ ನಂತಹ ಹಲವಾರು ಸಂಘ ಸಂಸ್ಥೆಗಳು ಮಾಡುತ್ತಿರುವ ಸೇವೆಯನ್ನು ಎಂದಿಗೂ ಮರೆಯಲಾಗದು ಎಂದ ಅವರು ಇಂತಹ ಸಂಘ ಸಂಸ್ಥೆಗಳು ನೀಡುವಂತಹ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಓಹೆಚ್‍ಓ ಡಾ.ಸಿ.ಎನ್ ಸತ್ಯನಾರಾಯಣರೆಡ್ಡಿ ಮಾತನಾಡಿ, ಸ್ಕೇಲಾರ್ ಕಂಪನಿ ಮತ್ತು ಆಸ್ಪೈರ್ ಫೌಂಡೇಷನ್ ನವರು ಹೆಣ್ಣು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಸ್ಯಾನಿಟರಿ ಪ್ಯಾಡ್ ನಂತಹ ಅಗತ್ಯ ಸಾಮಗ್ರಿ ನೀಡಿ,ಅವರ ಆರೋಗ್ಯಕ್ಕೆ ಒತ್ತು ನೀಡುತ್ತಿರುವುದು ಶ್ಲಾಘಿಸಿದರು ಎಂದರು.ಈ ಸಂದರ್ಭದಲ್ಲಿ ಸ್ಕೇಲಾರ್ ಕಂಪನಿಯ ನಿರ್ದೇಶಕ ಫ್ರಾಂಕ್, ಆಸ್ಟೈರ್ ಫೌಂಡೇಷನ್‍ನ ನಿದೇರ್ಶಶಕಿ ಲಾವಣ್ಯ, ಸಾರ್ವಜನಿಕ ಆಸ್ಪತ್ರೆಯ ವೈದ್ಯೆ ಅರ್ಚನಾ, ಶಾಲಾ ಶಿಕ್ಷಕರು ಮತ್ತಿತರರು ಇದ್ದರು.