ಸಾರಾಂಶ
ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಶಿರಸಿಯಲ್ಲೂ ಇದಕ್ಕೆ ಚಾಲನೆ ನೀಡಲಾಗಿದೆ.
ಶಿರಸಿ: ೭೮ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಬಿಜೆಪಿ ಘಟಕದಿಂದ ಹಮ್ಮಿಕೊಳ್ಳಲಾಗಿರುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಸೋಮವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿದರು. ನಗರ ಬಿಜೆಪಿ ವತಿಯಿಂದ ನಗರದ ಬಿಡಬೈಲಿನ ಗಾಂಧಿ ಪ್ರತಿಮೆ ಮತ್ತು ಶಿವಾಜಿ ಚೌಕಿನ ಶಿವಾಜಿ ಮಹಾರಾಜರ ಪ್ರತಿಮೆಗಳನ್ನು ಸ್ವಚ್ಛಗೊಳಿಸಲಾಯಿತು. ಬಳಿಕ ಮಾಲಾರ್ಪಣೆ ಮಾಡಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನಂತರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಶಿರಸಿಯಲ್ಲೂ ಇದಕ್ಕೆ ಚಾಲನೆ ನೀಡಲಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಯ ಮೇಲೆ ಧ್ವಜವನ್ನು ಹಾರಿಸಿ ದೇಶಪ್ರೇಮ ಹಾರಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಪ್ರತಿಯೊಬ್ಬರಲ್ಲೂ ದೇಶ ಮೊದಲು ಎಂಬ ಭಾವ ಜಾಗೃತಿ ಆಗಬೇಕು. ನಮ್ಮ ಅಕ್ಕಪಕ್ಕದ ದೇಶದಲ್ಲಿನ ಸ್ಥಿತಿಗಳನ್ನು ನೋಡಿ ಇನ್ನಷ್ಟು ನಾವೆಲ್ಲರೂ ಸಂಘಟಿತರಾಗವೇಕು. ದೇಶಪ್ರೇಮದ ಭಾವನೆ ಹೆಚ್ಚಾಗಬೇಕು ಎಂದರು. ನಂತರ ಶಿವಾಜಿ ಚೌಕಿನಿಂದ ಬೈಕ್ ರ್ಯಾಲಿ ನಡೆಯಿತು. ಮರಾಠಿಕೊಪ್ಪದ ಅಮರ್ ಜವಾನ್ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಬೈಕ್ ರ‍್ಯಾಲಿ ಮುಕ್ತಾಯವಾಯಿತು. ಈ ವೇಳೆ ಪ್ರಮುಖರಾದ ಗುರುಪ್ರಸಾದ ಹೆಗಡೆ ಹರ್ತೇಬೈಲ್, ಆನಂದ ಸಾಲೇರ್, ಪ್ರೇಮಕುಮಾರ್ ನಾಯ್ಕ, ರವಿಚಂದ್ರ ಶೆಟ್ಟಿ, ಉಷಾ ಹೆಗಡೆ, ನಾಗರಾಜ ನಾಯ್ಕ ಮತ್ತಿತರರು ಇದ್ದರು.ಭಟ್ಕಳದಲ್ಲಿ ಬಿಜೆಪಿಯಿಂದ ಹರ್ ಘರ್ ತಿರಂಗಾ ಬೈಕ್ ರ್ಯಾಲಿ
ಭಟ್ಕಳ: ಇಲ್ಲಿನ ಬಿಜೆಪಿ ಮಂಡಲ ಮತ್ತು ಯುವ ಮೋರ್ಚಾ ಘಟಕದ ಸಹಯೋಗದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಸೋಮವಾರ ಸಂಜೆ ಪಟ್ಟಣದಲ್ಲಿ ಹರ್ ಘರ್ ತಿರಂಗಾ ಬೈಕ್ ರ್ಯಾಲಿ ನಡೆಯಿತು.ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಡಿಗ ಅವರು, ಹರ್ ಘರ್ ತಿರಂಗ ಅಭಿಯಾನದ ಬಗ್ಗೆ ಮಾತನಾಡಿದರು. ಮಣ್ಕುಳಿಯ ಬಿಜೆಪಿ ಕಚೇರಿಯಿಂದ ಆರಂಭಗೊಂಡ ರ್ಯಾಲಿ ಪಟ್ಟಣದ ವಿವಿಧ ರಸ್ತೆಯಲ್ಲಿ ಸಂಚರಿಸಿ ಚೆನ್ನಪಟ್ಟಣ ಹನುಮಂತ ದೇವಸ್ಥಾನ ಬಳಿ ಸಮಾರೋಪಗೊಂಡಿತು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಯುವ ಮೋರ್ಚಾ ಘಟಕದ ಅಧ್ಯಕ್ಷ ಸುನೀಲ ಕಾಮತ್, ಪ್ರಮುಖರಾದ ದಿನೇಶ ನಾಯ್ಕ, ಮೋಹನ ನಾಯ್ಕ, ಪಾಂಡುರಂಗ ನಾಯ್ಕ ಸೇರಿದಂತೆ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು.