ಲೆಯ ಕೌಶಲ್ಯದಲ್ಲಿ ವಿಶ್ವಕರ್ಮದ ಸಮಾಜದವರು ಮೇಲುಗೈ.ಸಮಾಜದ ಸುಂದರವಾಗಿ ಕಾಣಲು ಅವರ ಕಲೆಯೇ ಕಾರಣ

ಕುಕನೂರು: ಹಂಪಿ ದೇವಸ್ಥಾನದ ಮೇಲೆ ವಿಶ್ವಕರ್ಮದ ಧ್ವಜ ಹಾರಾಡಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪಿ.ನಂಜುಂಡಿ ಹೇಳಿದರು.

ಪಟ್ಟಣದ ಮೌನೇಶ್ವರ ದೇವಸ್ಥಾನದಲ್ಲಿ ತಾಲೂಕಾಡಳಿತದ ಸಂಯುಕ್ತ ಆಶ್ರಯದಲ್ಲಿ ಹಾಗೂ ವಿಶ್ವಕರ್ಮ ಸಮಾಜದಿಂದ ಜರುಗಿದ 24ನೇ ವಾರ್ಷಿಕೋತ್ಸವ ಹಾಗೂ ಮೌನೇಶ್ವರ ಲಿಂಗು ಪ್ರತಿಷ್ಠಾಪನೆ, ಉಚಿತ ಉಪನಯನ ಹಾಗೂ ಅಮರಶಿಲ್ಪಿ ಜಕಣಾಚಾರ್ಯ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹಂಪಿ ದೇವಸ್ಥಾನದ ಮೇಲೆ ವಿಶ್ವಕರ್ಮದ ಧ್ವಜ ಇಟ್ಟುಕೊಳ್ಳಬೇಕು ಹಾಗೂ ವಿಶ್ವಕರ್ಮ ಸಮಾಜದವರನ್ನು ಉತ್ಸವದಲ್ಲಿ ಮುಖ್ಯ ವಾಹಿನಿಯಲ್ಲಿ ಕರೆ ತರಬೇಕು ಒಂದು ವೇಳೆ ಕರೆಯದಿದ್ದರೇ ಅದೇ ಸ್ದಳದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, ಕಲೆಯ ಕೌಶಲ್ಯದಲ್ಲಿ ವಿಶ್ವಕರ್ಮದ ಸಮಾಜದವರು ಮೇಲುಗೈ.ಸಮಾಜದ ಸುಂದರವಾಗಿ ಕಾಣಲು ಅವರ ಕಲೆಯೇ ಕಾರಣ. ಸಮಾಜದ ಬಾಂಧವರು ನಾನಾ ಶಿಲ್ಪಕಲೆ ಇನ್ನೂ ಹೆಚ್ಚು ಹೆಚ್ಚು ಪ್ರಸ್ತುತಪಡಿಸಿ ತಾವು ಸಹ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಆಗಬೇಕು ಎಂದರು.

ನಿವೃತ್ತ ಶಿಕ್ಷಕ ಕೆ.ಎಸ್.ಪತ್ತಾರ, ನಾಗಲಿಂಗಪ್ಪ ಪತ್ತಾರ, ದೇವೇಂದ್ರಪ್ಪ ಬಡಿಗೇರ್ ಮಾತನಾಡಿದರು. ಗಿಣಿಗೇರಿಯ ಶ್ರೀದೇವೇಂದ್ರ ಸ್ವಾಮೀಜಿ, ಲೇಬಗೇರಿಯ ಶ್ರೀ ನಾಗಮೂರ್ತಿ ಸ್ವಾಮೀಜಿ, ದಿವಾಕರ ಸ್ವಾಮೀಜಿ, ಗುರೂಪಯ್ಯ ಸ್ವಾಮೀಜಿ, ಕುಕನೂರು ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಾನಪ್ಪ ಆರ್ಕಸಾಲಿ, ನಾಗಲಿಂಗಪ್ಪ ಪತ್ತಾರ್, ರಾಮಣ್ಣ ಕೆ ಬಡಿಗೇರ್, ಅಶೋಕ ಬಡಿಗೇರ್, ದೇವೇಂದ್ರಪ್ಪ ಬಡಿಗೇರ್, ಅಂಬರೀಶ್ ಪತ್ತಾರ, ಕಾಸಿಂಸಾಬ್ ತಳಕಲ್, ಚಿದಾನಂದ ಪತ್ತಾರ ಇತರರಿದ್ದರು.