ಸಾರಾಂಶ
Let the goal in student life be clear: Maranala
-ಬಸವಪ್ರಭು ಮಹಾವಿದ್ಯಾಲಯ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ
-----ಕನ್ನಡಪ್ರಭ ವಾರ್ತೆ ಕೊಡೇಕಲ್
ವಿದ್ಯಾರ್ಥಿ ಜೀವನದಲ್ಲಿ ಗುರಿ ಏನೆಂಬುದು ಸ್ಪಷ್ಟವಾಗಿರಬೇಕು. ನಾವು ಸ್ಪಷ್ಟವಾದ ಗುರಿ ರೂಪಿಸಿಕೊಂಡು ಕಲಿಕೆಯು ಮುಗಿದ ನಂತರ ನಾವು ಯಾವ ಹಾದಿಯಲ್ಲಿ ಮುಂದುವರೆಯಬೇಕೇಂಬುದು ನಿರ್ಧರಿಸಿಕೊಂಡಿರಬೇಕು ಎಂದು ಶಿಕ್ಷಕ ಎಸ್.ಎಸ್. ಮಾರನಾಳ ಹೇಳಿದರು.ಬಸವಪ್ರಭು ಪದವಿ ಮಹಾವಿದ್ಯಾಲಯದಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪ್ರತಿಭೆ, ಸಾಮರ್ಥ್ಯವನ್ನು ಗುರುತಿಸಿಕೊಳ್ಳುವುದೇ ಶಿಕ್ಷಣದ ಮೂಲ ಉದ್ದೇಶ ಎಂದರು.
ಪ್ರತಿಯೊಬ್ಬರಲ್ಲಿ ಯಾವುದಾದರೊಂದು ಸೂಕ್ತ ಪ್ರತಿಭೆಯು ಅಡಗಿರುತ್ತದೆ. ಅವುಗಳನ್ನು ಬೆಳೆಸಿ, ಪೋಷಿಸಲು ಕಾಲೇಜಿನಲ್ಲಿ ಅನೇಕ ಅವಕಾಶಗಳಿವೆ. ವಿದ್ಯಾರ್ಥಿಗಳೆಲ್ಲರೂ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸಂಗನಗೌಡ ಬಿರಾದಾರ್ ಮಾತನಾಡಿ, ಶಿಕ್ಷಣ ಎಂಬುದು ಅರಿವನ್ನು ಮೂಡಿಸುವಂತದ್ದು, ವ್ಯಕ್ತಿಯ ಗುಣವನ್ನು ನಿರ್ಧರಿಸುವುದು ಅವನ ಆಂತರಿಕ ಶಕ್ತಿ. ವಿದ್ಯಾರ್ಥಿ ಜೀವನದಲ್ಲಿ ಸಂಕಲ್ಪ ಮತ್ತು ಆತ್ಮವಿಶ್ವಾಸ ಮುಖ್ಯವಾಗಿರುತ್ತದೆ ಎಂದರು.ಹುಣಸಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೊಟ್ರೇಶ ಕೋಳೂರ, ಶಿಕ್ಷಕರಾದ ಭೀಮನಗೌಡ ಬಿರಾದಾರ್, ಚಂದ್ರಶೇಖರ ಹೋಕ್ರಾಣಿ, ಸಿ.ಆರ್.ಪಿ ಮಹಾಂತೇಶ ರೂಪನವರ, ರವಿಕುಮಾರ ಭಂಟನೂರು, ಶಶಿಕುಮಾರ ಜಾಧವ ಸೇರಿದಂತೆ ವಿದ್ಯಾರ್ಥಿಗಳಿದ್ದರು.
----ಫೋಟೊ: ಕೊಡೇಕಲ್ ಗ್ರಾಮದ ಬಸವಪ್ರಭು ಪದವಿ ಮಹಾವಿದ್ಯಾಲಯದಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಸ್. ಎಸ್. ಮಾರನಾಳ ಮಾತನಾಡಿದರು.
3ವೈಡಿಆರ್2