ಟಿಬಿ ಡ್ಯಾಂ ರಕ್ಷಕ ಕನ್ನಯ್ಯ ನಾಯ್ದು ತಂಡಕ್ಕೆ ಸರ್ಕಾರ ಪ್ರಶಸ್ತಿ ಘೋಷಿಸಿ, ಗೌರವಿಸಲಿ

| Published : Aug 21 2024, 12:36 AM IST

ಟಿಬಿ ಡ್ಯಾಂ ರಕ್ಷಕ ಕನ್ನಯ್ಯ ನಾಯ್ದು ತಂಡಕ್ಕೆ ಸರ್ಕಾರ ಪ್ರಶಸ್ತಿ ಘೋಷಿಸಿ, ಗೌರವಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

ಸತತ 3 ದಿನಗಳ ಭಗೀರಥ ಪ್ರಯತ್ನದಿಂದ ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್ ಗೇಟ್‌ ದುರಸ್ತಿ ಕಾರ್ಯ ಯಶಸ್ವಿಗೊಳಿಸಿ, ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಕಲ್ಯಾಣ ಕರ್ನಾಟಕದ ಭಗೀರಥ ಎನಿಸಿದ್ದಾರೆ. ಇಂತಹ ಸಾಧಕರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಜೊತೆಗೆ ಹಗಲಿರುಳು ಶ್ರಮಿಸಿದ ಇಡೀ ಅಧಿಕಾರಿ, ಸಿಬ್ಬಂದಿ ಕಾರ್ಯವನ್ನು ಸರ್ಕಾರ ಗುರುತಿಸಬೇಕಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಆಗ್ರಹಿಸಿದ್ದಾರೆ.

- ರಾಜ್ಯದ ಡ್ಯಾಂಗಳ ನಿರ್ವಹಣೆಗೆ ಬಿ.ಎಂ.ಸತೀಶ ಒತ್ತಾಯ - - -

ದಾವಣಗೆರೆ: ಸತತ 3 ದಿನಗಳ ಭಗೀರಥ ಪ್ರಯತ್ನದಿಂದ ತುಂಗಭದ್ರಾ ಜಲಾಶಯದ 19ನೇ ಕ್ರೆಸ್ಟ್ ಗೇಟ್‌ ದುರಸ್ತಿ ಕಾರ್ಯ ಯಶಸ್ವಿಗೊಳಿಸಿ, ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಕಲ್ಯಾಣ ಕರ್ನಾಟಕದ ಭಗೀರಥ ಎನಿಸಿದ್ದಾರೆ. ಇಂತಹ ಸಾಧಕರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಜೊತೆಗೆ ಹಗಲಿರುಳು ಶ್ರಮಿಸಿದ ಇಡೀ ಅಧಿಕಾರಿ, ಸಿಬ್ಬಂದಿ ಕಾರ್ಯವನ್ನು ಸರ್ಕಾರ ಗುರುತಿಸಬೇಕಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಆಗ್ರಹಿಸಿದ್ದಾರೆ.

ತುಂಗಭದ್ರಾ ಡ್ಯಾಂನಲ್ಲಿ 5 ಸ್ಟಾಪ್ ಲಾಗ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ತುಂಗಭದ್ರೆ ಅವಲಂಬಿತರ ರೈತರು ಈಗ ಕನ್ನಯ್ಯ ನಾಯ್ಡು ನೇತೃತ್ವದ ತಂಡದ ಕಾರ್ಯ ಮಾದರಿಯಾಯಾಗಿದೆ. ಒಂದು ವಾರದಿಂದ ಪೋಲಾಗುತ್ತಿದ್ದ ನೀರನ್ನು 3 ದಿನ ಹಗಲು- ಇರುಳು ಎನ್ನದೇ ಜಿಂದಾಲ್, ನಾರಾಯಣ ಹಾಗೂ ಹಿಂದುಸ್ಥಾನ್ ಎಂಜಿನಿಯರ್‌ಗಳು ಸೇರಿದಂತೆ 50 ಕಾರ್ಮಿಕರ ಪರಿಶ್ರಮದಿಂದ ನೀರು ಹರಿಯುವುದು ತಡೆಯಲಾಗಿದೆ. ಹೊಸಪೇಟೆಯ ಕ್ರೇನ್ ಕೆಲಸಗಾರ ರಘು ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕೇನ್‌ಗೆ ಹಗ್ಗ ಕಟ್ಟಿಕೊಂಡು, ನೀರಿನಲ್ಲಿಳಿದು ಕೆಲಸ ಮಾಡುತ್ತಿದ್ದ ದೃಶ್ಯ ಮೈಯೆಲ್ಲಾ ಝುಮ್ಮೆನ್ನಿಸುತ್ತಿತ್ತು. ಇಂಥವರಿಗೆ ಸರ್ಕಾರ ರಾಜ್ಯಮಟ್ಟದ ಪ್ರಶಸ್ತಿ ನೀಡಿ, ಗೌರವಿಸಲಿ. ತುಂಗಭದ್ರಾ ಅವಘಡದಿಂದ ರಾಜ್ಯ ಸರ್ಕಾರ ಎಚ್ಚೆತ್ತು, ಇತರೆ ಜಲಾಶಯಗಳ ಸಂರಕ್ಷಣೆಗೆ ಕ್ರಮ ವಹಿಸಲಿ. ಪ್ರತಿ ವರ್ಷ ಜಲಾಶಯಗಳ ಗೇಟುಗಳನ್ನು ಪರಿಶೀಲಿಸಿ, ಗ್ರೀಸ್‌, ಬಣ್ಣ ಹಚ್ಚಿ ನಿರ್ವಹಣೆ ಮಾಡಬೇಕು. ಎಲ್ಲ ಡ್ಯಾಂಗಳ ಸುರಕ್ಷೆಗೆ ಸಮೀಕ್ಷೆ ಕೈಗೊಳ್ಳಬೇಕಿದೆ ಎಂದು ಮನವಿ ಮಾಡಿದ್ದಾರೆ.

ಜಲಾಶಯಗಳ ನಿರ್ವಹಣೆಗೆ ಕೇಂದ್ರ ಜಲ ಆಯೋಗ ನೀಡುವ ಶಿಫಾರಸ್ಸನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಭದ್ರಾ ಡ್ಯಾಂ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು. ಲಕ್ಕವಳ್ಳಿಯಲ್ಲಿ 1962ರಲ್ಲಿ ಗಾರೆ, ಸುಣ್ಣ ಮತ್ತು ಕಲ್ಲು ಬಳಸಿ ಭದ್ರಾ ಡ್ಯಾಂ ನಿರ್ಮಿಸಲಾಗಿದೆ. ಡ್ಯಾಂ ಗೇಟ್ ಗಳನ್ನು ಸರಿಪಡಿಸಿ, ಗಟ್ಟಿಗೊಳಿಸಬೇಕು ಎಂದು ಬಿ.ಎಂ.ಸತೀಶ ಕೊಳೇನಹಳ್ಳಿ ಒತ್ತಾಯಿಸಿದ್ದಾರೆ.

- - - -18ಕೆಡಿವಿಜಿ16: ಬಿ.ಎಂ.ಸತೀಶ ಕೊಳೇನಹಳ್ಳಿ