ಸಾರಾಂಶ
ಭಟ್ಕಳ: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸರ್ಕಾರಿ ನೌಕರರ ತಾಲೂಕು ಸಂಘಗಳಿಗೆ ಆಯ್ಕೆಯಾದ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರು ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ಸರ್ಕಾರಿ ನೌಕರರು ಕೆಲಸ ಮಾಡಿದರೆ ಮಾತ್ರ ಸಾಧನೆ ಮಾಡಿದ್ದೇವೆ ಎನ್ನುವುದನ್ನು ಹೇಳಿಕೊಳ್ಳಲು ಸಾಧ್ಯ. ಸರ್ಕಾರಿ ನೌಕರರು ಜನಸಾಮಾನ್ಯರಿಗೆ ಉತ್ತಮವಾಗಿ ಸ್ಪಂದಿಸಬೇಕಿದೆ. ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನತೆಗೆ ತಲುಪಿಸುವ ಕೆಲಸ ಮಾಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ ಮಾತನಾಡಿ, ನಮ್ಮ ಸಂಘಟನೆಯ ಮೊದಲ ಆದ್ಯತೆ ಎನ್‌ಪಿಎಸ್ ನೌಕರರಾಗಿದ್ದಾರೆ. ಅವರಿಗೆ ನ್ಯಾಯ ಒದಗಿಸುವ ತನಕ ಪ್ರಯತ್ನವನ್ನು ಮುಂದುವರಿಸುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಹೊನ್ನಾವರ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಣ್ಣಪ್ಪ ಡಿ. ಮುಕ್ರಿ, ಕುಮಟಾ ಘಟಕದ ಅಧ್ಯಕ್ಷ ವಿನಾಯಕ ಎಸ್. ದೇಶಭಂಡಾರಿ, ಜೋಯಿಡಾ ಘಟಕದ ಅಧ್ಯಕ್ಷ ಸಂತೋಷ ಸಾಳುಂಕೆ, ಅಂಕೋಲಾ ಘಟಕದ ಅಧ್ಯಕ್ಷ ಬಾಲಚಂದ್ರ ನಾಯಕ, ಸಿದ್ದಾಪುರ ಅಧ್ಯಕ್ಷ ರಾಜೇಶ ನಾಯ್ಕ, ಕನ್ನಡ ಸಾಹಿತ್ಯ ಪರಿಷತ್‌ನ ಹಿರಿಯರಾದ ಸೈಯದ್ ಜಮೀರುಲ್ಲಾ ಷರೀಫ್, ತಾಲೂಕು ಅಧ್ಯಕ್ಷ ಗಂಗಾಧರ ನಾಯ್ಕ ಮುಂತಾದವರು ಇದ್ದರು. ತಾಲೂಕು ಅಧ್ಯಕ್ಷ ಎಂ.ಎನ್. ನಾಯ್ಕ ಸ್ವಾಗತಿಸಿದರು. ಶಿಕ್ಷಕ ಸುರೇಶ ಮುರ್ಡೇಶ್ವರ ನಿರೂಪಿಸಿದರು.ಜಾತ್ರಾ ಮಹೋತ್ಸವದ ಸಮಾಲೋಚನಾ ಸಭೆ
ಯಲ್ಲಾಪುರ: ಐತಿಹಾಸಿಕ ಪ್ರಸಿದ್ಧವಾದ ತಾಲೂಕಿನ ಭರತನಹಳ್ಳಿಯ ಭ್ರಮರಾಂಬಾ ದೇವಿಯ ೫ ದಿನಗಳ ಜಾತ್ರಾ ಮಹೋತ್ಸವ ಫೆ. ೧೬ರಿಂದ ೨೩ರ ವರೆಗೆ ವಿಧ್ಯುಕ್ತವಾಗಿ, ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಾಲಯದ ವಿಶ್ವಸ್ಥ ಸಮಿತಿ ಅಧ್ಯಕ್ಷ ಹೇರಂಬ ಹೆಗಡೆ ತಿಳಿಸಿದರು.ಡಿ. ೩೦ರಂದು ಭರತನಹಳ್ಳಿಯ ಭ್ರಮರಾಂಬಾ ಸಭಾಭವನದಲ್ಲಿ ಜಾತ್ರಾ ಮಹೋತ್ಸವದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜ. ೧೯ರಂದು ಕಲಾ ಸಂಕೋಚದೊಂದಿಗೆ ಜಾತ್ರಾ ಪ್ರಕ್ರಿಯೆ ಆರಂಭಗೊಳ್ಳಲಿದೆ. ನಂತರ ವೈದಿಕ ವಿಧಿ- ವಿಧಾನಗಳು ಚಾಲನೆ ಪಡೆಯುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಜಾತ್ರಾ ಆಚರಣೆಗೆ ಅಗತ್ಯವಿರುವ ಸಂಪನ್ಮೂಲ ಕ್ರೋಢೀಕರಣ, ಧಾರ್ಮಿಕ ಮತ್ತು ವೈದಿಕ, ಸ್ವಚ್ಛತೆ ಮತ್ತು ನೀರು, ತೇರು, ಅಂಗಡಿ, ಗದ್ದುಗೆ ನಿರ್ವಹಣೆ, ರಕ್ಷಣೆ, ಹಣಕಾಸು, ಪ್ರಚಾರ ಹಾಗೂ ಸಾಂಸ್ಕೃತಿಕ ಉಪ ಸಮಿತಿಗಳನ್ನು ರಚಿಸಲಾಯಿತು.ಸಮಿತಿ ಸದಸ್ಯರಾದ ವೆಂಕಟರಮಣ ಹೆಗಡೆ, ವೆಂಟ ಶೇರೂಗಾರ, ಮಂಜುನಾಥ ಹೆಗಡೆ, ಮಹಾಲಕ್ಷ್ಮಿ ನಾಯ್ಕ, ಹೊನ್ನಪ್ಪ ಪಟಗಾರ, ನಾಗೇಂದ್ರ ಹೆಗಡೆ, ಆರ್.ಜಿ. ಹೆಗಡೆ ಉಪಸ್ಥಿತರಿದ್ದರು. ಉದಯ ಭಟ್ಟ ಸ್ವಾಗತಿಸಿ, ನಿರ್ವಹಿಸಿದರು. ವಿನಾಯಕ ಭಟ್ಟ ವಂದಿಸಿದರು.