ಪತ್ರಕರ್ತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ

| Published : Jun 25 2024, 12:38 AM IST

ಸಾರಾಂಶ

ಸಮಾಜಕ್ಕೆ ವಸ್ತು ನಿಷ್ಠೆಯನ್ನು ಚೆಲ್ಲುವ ನೇರ ನಿಷ್ಠುರ ಪತ್ರಕರ್ತರಿಂದ ಸಾಮಾಜಿಕ ಜನಜೀವನ ಬದಲಾವಣೆ ಕಾಣುತ್ತಿದೆ.

ಹೊಸಪೇಟೆ: ಪತ್ರಕರ್ತರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಕಾನಿಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಹೇಳಿದರು.

ಪತ್ರಿಕಾ ದಿನಾಚರಣೆ ನಿಮಿತ್ತ ನಗರದ ಫ್ರೀಡಂ ಪಾರ್ಕಿನಲ್ಲಿ ಭಾನುವಾರ ಪತ್ರಕರ್ತರ ಕುಟುಂಬದ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಗಲಿರುಳು ಸಮಾಜದ ಏಳುಬೀಳು-ಏಳ್ಗೆಯ ಬಗ್ಗೆ ಬೆಳಕು ಚೆಲ್ಲುವ ಪತ್ರಕರ್ತರು ಅನೇಕ ಸಂಕಷ್ಟ ಎದುರಿಸುತ್ತಿದ್ದಾರೆ.

ಸಮಾಜಕ್ಕೆ ವಸ್ತು ನಿಷ್ಠೆಯನ್ನು ಚೆಲ್ಲುವ ನೇರ ನಿಷ್ಠುರ ಪತ್ರಕರ್ತರಿಂದ ಸಾಮಾಜಿಕ ಜನಜೀವನ ಬದಲಾವಣೆ ಕಾಣುತ್ತಿದೆ. ಆದರೆ ತಮ್ಮ ಕುಟುಂಬಗಳ ನಿರ್ವಹಣೆಯಲ್ಲಿ ಎಡವುತ್ತಿದ್ದಾರೆ. ಮನೆಗೆ ಮಾರಿ ಊರಿಗೆ ಉಪಕಾರಿ ಎನ್ನುವಂತೆ ಪತ್ರಕರ್ತರು ಬದಕುತ್ತಿದ್ದಾರೆ. ಕುಟುಂಬದ ಜತೆ ಕಾಲ ಕಳೆಯುವುದೇ ಅಪರೂಪ. ಪತ್ರಕರ್ತರು ತಮ್ಮ ಆರೋಗ್ಯದ ಜತೆ ಕುಟುಂಬದ ಗಮನ ಹರಿಸಬೇಕು ಎಂದರು.

ರಾಜ್ಯ ಸಮಿತಿ ಸದಸ್ಯ ವೆಂಕೋಬ ಪೂಜಾರ್ ಮಾತನಾಡಿ, ಸಮಾಜದ ಆರೋಗ್ಯ ಕಾಪಾಡಲು ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಮತ್ತು ಅವರ ಕುಟುಂಬದ ಸಂತೋಷಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಪರಸ್ಪರ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಸಹಕಾರಿಯಾಗುತ್ತದೆ ಎಂದರು.

ಬಳಿಕ ಪತ್ರಕರ್ತರು ಹಾಗೂ ಅವರ ಕುಟುಂಬಸ್ಥರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಕಾರ್ಯಕ್ರಮದ ಬಳಿಕ ಭೋಜನ ವ್ಯವಸ್ಥೆ ಮಾಡಲಾಗಿತ್ತು.

ಕಾನಿಪ ಜಿಲ್ಲಾಧ್ಯಾಕ್ಷ ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಾದ ಎಸ್.ಎಂ ಮನೋಹರ್, ಕೃಷ್ಣ ಎನ್. ಲಮಾಣಿ, ಬಾಲಕೃಷ್ಣ, ಬಿ. ಕುಮಾರಸ್ವಾಮಿ, ಅನಂತ ಜೋಶಿ, ಎಚ್. ವೆಂಕಟೇಶ, ಸುರೇಶ್ ಚವ್ಹಾಣ್, ಮಂಜುನಾಥ ಅಯ್ಯಸ್ವಾಮಿ, ವೀರೇಂದ್ರ ನಾಗಲದಿನ್ನಿ, ಶ್ರೀನಿವಾಸ್, ಸೋಮೇಶ್ ಉಪ್ಪಾರ್, ಉಮಾಪತಿ, ಸಿ.ಕೆ. ನಾಗರಾಜ್, ಮನೋಹರ್ ಬೊಂದಾಡೆ, ರೇಖಾ ಪ್ರಕಾಶ್, ಸಿ.ಪ್ರಕಾಶ್, ಸಂಜಯ್ ಕುಮಾರ್, ವಿಜಯ್ ಕುಮಾರ್, ಪಾಂಡುರಂಗ ಜಂತ್ಲಿ, ಶೇಕ್ಷಾವಲಿ, ಪೃಥ್ವಿ, ಮೃತ್ಯಂಜಯ ಹಿರೆಮಠ್, ಯು.ಭೀಮರಾಜ್, ವೀರೇಶ್, ಗಫೂರಸಾಬ್, ಅನೂಪಕುಮಾರ್, ಬಾಬುಕುಮಾರ್, ಪೂರ್ಣಿಮಾ, ಇಂದಿರಾ ಕಲಾಲ್ ಸೇರಿದಂತೆ ಇತರೆ ಪತ್ರಕರ್ತರ ಕುಟುಂಬದ ಸದಸ್ಯರು ಇದ್ದರು.