ಕಾರ್ಮಿಕ ವರ್ಗಕ್ಕೆ ಸರ್ಕಾರಗಳು ಹೆಚ್ಚು ಸೌಲಭ್ಯಗಳನ್ನು ಕಲ್ಪಿಸಲಿ

| Published : Nov 26 2024, 12:51 AM IST

ಸಾರಾಂಶ

ಚನ್ನಗಿರಿ: ಕಾರ್ಮಿಕ ವರ್ಗವು ಈ ದೇಶದ ಶಕ್ತಿಯಾಗಿದ್ದು, ಕಾರ್ಮಿಕ ವರ್ಗ ಒಂದು ದಿನ ತಮ್ಮ ಕೆಲಸವನ್ನು ನಿಲ್ಲಿಸಿದರೆ ದೇಶದ ಆರ್ಥಿಕತೆಯೇ ಬುಡಮೇಲು ಆಗಲಿದೆ. ದೇಶದ ಆರ್ಥಿಕ ಸ್ಥಿತಿಯನ್ನು ಕಾಪಾಡುವಂತಹ ಕಾರ್ಮಿಕ ವರ್ಗಕ್ಕೆ ಸರ್ಕಾರಗಳು ಹೆಚ್ಚು-ಹೆಚ್ಚು ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ಒತ್ತಾಯಿಸಿದರು.

ಚನ್ನಗಿರಿ: ಕಾರ್ಮಿಕ ವರ್ಗವು ಈ ದೇಶದ ಶಕ್ತಿಯಾಗಿದ್ದು, ಕಾರ್ಮಿಕ ವರ್ಗ ಒಂದು ದಿನ ತಮ್ಮ ಕೆಲಸವನ್ನು ನಿಲ್ಲಿಸಿದರೆ ದೇಶದ ಆರ್ಥಿಕತೆಯೇ ಬುಡಮೇಲು ಆಗಲಿದೆ. ದೇಶದ ಆರ್ಥಿಕ ಸ್ಥಿತಿಯನ್ನು ಕಾಪಾಡುವಂತಹ ಕಾರ್ಮಿಕ ವರ್ಗಕ್ಕೆ ಸರ್ಕಾರಗಳು ಹೆಚ್ಚು-ಹೆಚ್ಚು ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ಒತ್ತಾಯಿಸಿದರು.ಪಟ್ಟಣದ ವಿವೇಕಾನಂದ ರಸ್ತೆಯಲ್ಲಿರುವ ಎ.ಆರ್.ಚೌಕ್ ನಲ್ಲಿ ಕಾಯಕ ಜೀವಿ ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಘಟಕದ ಉದ್ಘಾಟನೆ ಮತ್ತು ಕನ್ನಡ ರಾಜ್ಯೋತ್ಸವ ಸಮಾರಂಭದ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಕಾರ್ಮಿಕರು ಮಾಡುವ ಕೆಲಸದಲ್ಲಿ ನಿಷ್ಠೆ, ಪ್ರಾಮಾಣಿಕತೆ, ಶ್ರದ್ಧೆಯನ್ನು ಇಟ್ಟುಕೊಂಡು ಕೆಲಸ ಮಾಡಿದಾಗ ಶ್ರೇಯಸ್ಸು ಲಭಿಸಲಿದ್ದು, ಒಂದು ಸಂಘ-ಸಂಸ್ಥೆಗಳು ಎತ್ತರಕ್ಕೆ ಬೆಳೆಯಬೇಕಾದರೆ ಸ್ವಾರ್ಥ ಮನೋಭಾವನೆಗಳನ್ನು ಮರೆತು ಕೆಲಸ ಮಾಡಿದಾಗ ಮಾತ್ರ ಸಂಘ-ಸಂಸ್ಥೆಗಳು ಬೆಳೆಯಲು ಸಾಧ್ಯ ಎಂದರು.ಕಟ್ಟಡ ಕಾರ್ಮಿಕರು ಬೆಳಗಿನಿಂದ ಸಂಜೆಯ ವರೆಗೂ ಬಿಸಿಲಿನಲ್ಲಿ ಮಣ್ಣು-ಕಲ್ಲುಗಳ ಜೋತೆಯಲ್ಲಿ ಕೆಲಸ ಮಾಡುವ ಶ್ರಮ ಜೀವಿಗಳು. ಕಟ್ಟಡ ಕಾರ್ಮಿಕರಿಗೆ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮುಂದಾಗಬೇಕು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮುಖಂಡ ಅಮಾನುಲ್ಲಾ ಮಾತನಾಡಿ, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕಾರ್ಮಿಕರಿಗೆ ಆರ್ಥಿಕ ಶಕ್ತಿಯನ್ನು ತುಂಬಲು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಈ ಯೋಜನೆಗಳನ್ನು ಪಡೆದುಕೊಳ್ಳಲು ಸಂಘಟಿತ ಹೋರಾಟ ಅನಿವಾರ್ಯವಾಗಿದೆ. ಕಾರ್ಮಿಕರುಗಳು ಇಂತಹ ಸಂಘಟನೆಗಳಲ್ಲಿ ಸದಸ್ಯತ್ವ ಪಡೆದುಕೊಂಡು ನಿಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಕನ್ನಡ ನಾಡು ಹಿತರಕ್ಷಣಾ ಸಮಿತಿಯ ತಾಲೂಕು ಗೌರವ ಅಧ್ಯಕ್ಷ ಸರ್ಧಾರ್ ಮಾತನಾಡಿ, ಕಾರ್ಮಿಕ ವರ್ಗ ಶ್ರಮಿಸಿದರೆ ಮಾತ್ರ ಮಾಲೀಕ ವರ್ಗ ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗಿದ್ದು, ಕಾರ್ಮಿಕರು ಸಹಾ ಸರಿಯಾದ ಸಮಯಕ್ಕೆ ಕೆಲಸವನ್ನು ಮಾಡುತ್ತಾ ಮಾಲೀಕರ ವಿಶ್ವಾಸವನ್ನು ಗಳಿಸಬೇಕು ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಕಾಯಕಜೀವಿ ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಮಹಮ್ಮದ್ ಅಫ್ತಾಬ್ ವಹಿಸಿದ್ದರು.ಮುಸ್ಲಿಂ ಧರ್ಮಗುರು ಸಲೀಂಉಲ್ಲಾ, ಜಿಲ್ಲಾ ಸಂಘದ ಅಧ್ಯಕ್ಷ ಆದಿಲ್ ಖಾನ್, ಉಮರ್ ಮುಕ್ತಿಯಾರ್, ಕನ್ನಡ ನಾಡು ಹಿತರಕ್ಷಣಾ ಸಮಿತಿಯ ತಾಲೂಕು ಅಧ್ಯಕ್ಷ ಎಂ.ಅಣ್ಣೊಜಿರಾವ್, ನಗರ ಘಟಕದ ಅಧ್ಯಕ್ಷ ನಟರಾಜ ರಾಯ್ಕರ್, ಶಶಿಕಲಾನಾಗರಾಜ್, ಸುಧಾ, ಸೈಯದ್ ಸಾಧಿಕ್, ಸತೀಶ್ಅರವಿಂದ್ ಸೇರಿದಂತೆ ಮೊದಲಾದವರು ಹಾಜರಿದ್ದರು.