ಮಹಾತಪಸ್ವಿಗಳು ಮಳೆರಾಯನ ತರಿಸಲಿ

| Published : Mar 28 2024, 12:50 AM IST

ಸಾರಾಂಶ

ಐಗಳಿ: ಭಾವೈಕ್ಯತೆಗೆ ಹೆಸರಾದ ಐಗಳಿಯ ಮಾಣಿಕಪ್ರಭು ದೇವರ ಜಾತ್ರೆಯಲ್ಲಿ ಎಲ್ಲರೂ ಸಮಾನರೂ ಇದಕ್ಕೆ ನಾನೇ ಸಾಕ್ಷಿ. ಇಲ್ಲಿ ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತ ಉಳಿಸಿಕೊಂಡು ಬಂದಿದ್ದಾರೆ ಎಂದು ಮಾಜಿ ಶಾಸಕ ಶಹಜಾನ್‌ ಡೊಂಗರಗಾಂವ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಐಗಳಿ

ಭಾವೈಕ್ಯತೆಗೆ ಹೆಸರಾದ ಐಗಳಿಯ ಮಾಣಿಕಪ್ರಭು ದೇವರ ಜಾತ್ರೆಯಲ್ಲಿ ಎಲ್ಲರೂ ಸಮಾನರೂ ಇದಕ್ಕೆ ನಾನೇ ಸಾಕ್ಷಿ. ಇಲ್ಲಿ ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತ ಉಳಿಸಿಕೊಂಡು ಬಂದಿದ್ದಾರೆ ಎಂದು ಮಾಜಿ ಶಾಸಕ ಶಹಜಾನ್‌ ಡೊಂಗರಗಾಂವ ಬಣ್ಣಿಸಿದರು.

ಮಾಣಿಕಪ್ರಭು ದೇವರ ಜಾತ್ರೆಯ 3ನೇ ದಿನದ ಶಿವಾನುಭವದಲ್ಲಿ ಮಾತನಾಡಿದ ಅವರು, 30 ವರ್ಷದ ಹಿಂದೆ ಜಾತ್ರೆಯಲ್ಲಿ ಕೇವಲ 30-40 ಜಾನುವಾರುಗಳು ಸೇರುತ್ತಿದ್ದವು. ಈಗ ಲಕ್ಷಾಂತರ ಜಾನುವಾರುಗಳು ಸೇರುತ್ತಿದ್ದು, ಇದೆಲ್ಲ ಲಿಂ.ರಾಚೋಟೇಶ್ವರ ಸ್ವಾಮಿಗಳ ತಪಸ್ಸಿನ ಪ್ರಭಾವ. ಬರಗಾಲ ಇರುವುದರಿಂದ ರೈತರು ಕಡಿಮೆ ದರದಲ್ಲಿ ಮಾರಾಟ ಮಾಡಿದ್ದಾರೆ. ನಿಜವಾಗಿ ರೈತರು ಸಂಕಷ್ಟದಲ್ಲಿದ್ದು, ಸರ್ಕಾರ ಕೃಷಿ ನೀತಿ ಪದ್ಧತಿ ಜಾರಿ ಮಾಡಬೇಕು. ರೈತರ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿಸಲು ಮುಂದಾಗಬೇಕು. ಬೇಸಿಗೆಯಲ್ಲಿ ನೀರಿನ ತೊಂದರೆಯಾಗಿದ್ದು, ಇಬ್ಬರೂ ಮಹಾತಪಸ್ವಿಗಳು ಬೇಗನೆ ಮಳೆರಾಯನನ್ನು ತರೆಸಿ ನೀರಿನ ಅಭಾವ ಕಡಿಮೆ ಮಾಡಬೇಕು ಎಂದು ಪ್ರಾರ್ಥಿಸಿದರು.

ಧೂಮವಾಡದ ಸರ್ಪಭೂಷಣ ದೇವರು ಮಾತನಾಡಿ, ತಂದೆಗಿಂತ ತಾಯಿಯ ತ್ಯಾಗ ಮನೋಭಾವ ದೊಡ್ಡದು. ತಾಯಿಯೇ ಮೊದಲು ಮಕ್ಕಳಿಗೆ ಸಂಸ್ಕಾರ ಕಲಿಸುತ್ತಾಳೆ. ಮಕ್ಕಳಿಗೆ ದೂರದರ್ಶನ ಮತ್ತು ಮೊಬೈಲ್‌ಗಳನ್ನು ಕೊಡಬೇಡಿ, ಗುಣಮಟ್ಟದ ಶಿಕ್ಷಣ ಕೊಡಿಸುವಂತೆ ಕಿವಿಮಾತು ಹೇಳಿದರು.

ಅಭಿನವ ರಾಚೋಟೇಶ್ವರ ದೇವರು ಅಧ್ಯಕ್ಷತೆ ವಹಿಸಿದ್ದರು. ಶಿವಬಸವ ದೇವರು, ಮಾತೋಶ್ರೀ ಪ್ರಮೀಳಾ ತಾಯಿ, ವಿಶ್ರಾಂತ ಪ್ರಾಚಾರ್ಯ ಎ.ಎಸ್.ನಾಯಿಕ, ಪತ್ರಕರ್ತ ಪ್ರಕಾಶ ಪೂಜಾರಿ ಮಾತನಾಡಿದರು. ಈ ವೇಳೆ ಅಪ್ಪಾಸಾಬ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ರಾಮುಗೌಡ ಪಾಟೀಲ, ಬಸವರಾಜ ಬಿರಾದಾರ, ಅಣ್ಣಾರಾಯ ಹಾಲಳ್ಳಿ, ಸಿದ್ದಪ್ಪ ಬಳ್ಳೊಳ್ಳಿ, ಅಪ್ಪಾಸಾಬ ತೇರದಾಳ, ಭೈರಪ್ಪ ಹುಣಶಿಕಟ್ಟಿ, ಬಂದೇ ನಮಾಜ ಮುಜಾವರ, ಕಮಿಟಿ ಅಧ್ಯಕ್ಷ ಪ್ರಲ್ಹಾದ ಪಾಟೀಲ, ಗುರಪ್ಪ ಬಿರಾದಾರ, ಸದಾಶಿವ ಏಳ್ಳೂರ, ಭೈರಪ್ಪ ಬಿಜ್ಜರಗಿ ಸೇರಿ ಅನೇಕರಿದ್ದರು. ಇದೇ ವೇಳೆ ಗ್ರಾಮೀಣ ಪತ್ರಕರ್ತರನ್ನು ಗೌರವಿಸಿ ಸನ್ಮಾನಿಸಲಾಯಿತು. ಕೆ.ಎಸ್.ಬಿಜ್ಜರಗಿ ಸ್ವಾಗತಿಸಿದರು. ಕೆ.ಎಸ್.ಬಿರಾದಾರ ವಂದಿಸಿದರು.