ಗುರುಪೂರ್ಣಿಮೆ ಆಚರಣೆ ನಿರಂತರ ನಡೆಯಲಿ

| Published : Jul 27 2024, 12:52 AM IST

ಸಾರಾಂಶ

ಗುರು ಪೂರ್ಣಿಮೆ ಎಂಬುವುದು ಕೇವಲ ಒಂದು ದಿನಕ್ಕೆ ಸೀಮಿತವಾಗದಿರಲಿ. ಪ್ರತಿನಿತ್ಯವೂ ಗುರುಪೂರ್ಣಿಮೆ ಆಗಿರಬೇಕು ಎಂದು ದಾವಣಗೆರೆ ತಾಲೂಕಿನ ಅಣಜಿ ಇಂದಿರಾಗಾಂಧಿ ವಸತಿ ಶಾಲೆ ವಿಜ್ಞಾನ ಶಿಕ್ಷಕಿ ಬಿ.ಆರ್. ಸುಜಾತಾ ಹೇಳಿದರು.

ದಾವಣಗೆರೆ: ಗುರು ಪೂರ್ಣಿಮೆ ಎಂಬುವುದು ಕೇವಲ ಒಂದು ದಿನಕ್ಕೆ ಸೀಮಿತವಾಗದಿರಲಿ. ಪ್ರತಿನಿತ್ಯವೂ ಗುರುಪೂರ್ಣಿಮೆ ಆಗಿರಬೇಕು ಎಂದು ತಾಲೂಕಿನ ಅಣಜಿ ಇಂದಿರಾಗಾಂಧಿ ವಸತಿ ಶಾಲೆ ವಿಜ್ಞಾನ ಶಿಕ್ಷಕಿ ಬಿ.ಆರ್. ಸುಜಾತಾ ಹೇಳಿದರು.

ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಶ್ರೀ ಗುರು ವ್ಯಾಸರಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ಶಿಕ್ಷಕರಾಗಲಿ, ತಂದೆ-ತಾಯಿಯಾಗಲಿ, ಹಿರಿಯರಾಗಲಿ ಅವರು ನಮಗೆ ಸಲಹೆ ಮಾರ್ಗದರ್ಶನ ನೀಡಿ ಜೀವನ ಹಾಗೂ ನಮ್ಮ ಬದುಕನ್ನು ಸಾರ್ಥಕತೆಯತ್ತ ಕೊಂಡೊಯ್ಯುವವರು ನಮಗೆ ಗುರುಗಳು ಇದ್ದಂತೆ. ಸದಾ ನಾವು ಅವರನ್ನು ಸ್ಮರಿಸುವ ಜೊತೆಗೆ ಗುರುಗಳ ನಡೆ-ನುಡಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಇದೇ ವೇಳೆ ಪ್ರಾಥಮಿಕ ಮಕ್ಕಳಿಗೆ ಗುರುಪೂರ್ಣಿಮೆ ಹಿನ್ನೆಲೆ ವೇಷಭೂಷಣ ಸ್ಪರ್ಧೆ ಆಯೋಜಿಸಿದ್ದು, ಪುಟಾಣಿ ಮಕ್ಕಳು ಬಸವಣ್ಣ, ಅಕ್ಕ ಮಹಾದೇವಿ, ಋಷಿಮುನಿಗಳು, ರಾಘವೇಂದ್ರ ಸ್ವಾಮಿಗಳು, ವಿವೇಕಾನಂದ ಸೇರಿ ಮಹನೀಯರ ವೇಷಭೂಷಣದೊಂದಿಗೆ ಆಗಮಿಸಿ, ಗುರುಶಿಷ್ಯರ ತತ್ವ-ಸಿದ್ಧಾಂತ ಸಾರುವ ಮೂಲಕ ಎಲ್ಲರ ಗಮನ ಸೆಳೆದರು.

ಶೈಕ್ಷಣಿಕ ನಿರ್ದೇಶಕ ಪಿ.ಪರಮೇಶ್ವರಪ್ಪ, ಪ್ರಾಚಾರ್ಯರಾಧ ಎನ್.ಪ್ರಭಾವತಿ, ಮುಖ್ಯ ಶಿಕ್ಷಕಿ ಗಾಯತ್ರಿ, ತೀರ್ಪುಗಾರರಾಗಿ ಹೀನಾಬಾಯಿ, ಕವಿತಾ, ರಂಜಿತಾ ಮತ್ತು ಪೋಷಕರು, ವಿದ್ಯಾರ್ಥಿಗಳು ಇದ್ದರು.

- - - (** ಈ ಫೋಟೋ-ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಬಹುದು) -ಫೋಟೋ:

ದಾವಣಗೆರೆ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಶಿಕ್ಷಕಿ ಬಿ.ಆರ್.ಸುಜಾತಾ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ನಿರ್ದೇಶಕ ಪಿ.ಪರಮೇಶ್ವರಪ್ಪ, ಪ್ರಾಚಾರ್ಯರಾದ ಎನ್.ಪ್ರಭಾವತಿ, ಮುಖ್ಯ ಶಿಕ್ಷಕಿ ಗಾಯತ್ರಿ, ಹೀನಾಬಾಯಿ, ಕವಿತಾ, ರಂಜಿತಾ, ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.