ಶಾಸಕರಿಗೆ ಅವರ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯವಿದೆ. ಹೈಕಮಾಂಡ್‌ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಶಾಸಕರಿಗೆ ಅವರ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯವಿದೆ. ಹೈಕಮಾಂಡ್‌ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ಶಾಸಕರ ಮತ್ತೊಂದು ತಂಡ ದೆಹಲಿಗೆ ಭೇಟಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಯವರು, ಶಾಸಕರು ದೆಹಲಿಗೆ ಹೋಗಿ ಅಭಿಪ್ರಾಯಗಳನ್ನು ತಿಳಿಸಲು ಸ್ವಾತಂತ್ರ್ಯವಿದೆ. ಪಕ್ಷದ ವರಿಷ್ಠರು ಏನು ಹೇಳುತ್ತಾರೆ ಎಂದು ನೋಡೋಣ. ಅಂತಿಮವಾಗಿ ಹೈಕಮಾಂಡ್‌ ಏನು ಹೇಳುತ್ತದೆ ಅದನ್ನು ಕೇಳುತ್ತೇವೆ ಎಂದರು.

ಸಚಿವ ಸಂಪುಟ ಪುನಾರಚನೆಯೂ ಹೈಕಮಾಂಡ್ ಅನುಮತಿಯ ನಂತರವೇ ನಡೆಯಲಿದೆ. ಸದ್ಯಕ್ಕೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಇರಾದೆ ಎಲ್ಲ ಎಂದು ತಿಳಿಸಿದರು.