ಸ್ವಾತಂತ್ರ ಸಿಕ್ಕು 7 ದಶಕಗಳಿಂದ ಧರ್ಮ ಶಿಕ್ಷಣ ಅಭಾವದಿಂದ ಸಮಾಜದ ಆಚರಣೆ, ಸಂಸ್ಕೃತಿ, ಪರಂಪರೆ, ರಾಷ್ಟ್ರಭಕ್ತಿ ಮರೆಯುತ್ತಿದ್ದಾರೆ. ವರ್ಷಕ್ಕೆ ಕೆಲವೇ ದಿನಗಳು ರಾಷ್ಟ್ರಭಕ್ತಿ ಮೂಡುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಬೆಂಗಳೂರಿನ ಸಮನ್ವಯಕಾರ ಶರತಕುಮಾರ ತಿಳಿಸಿದರು.
ಲಕ್ಷ್ಮೇಶ್ವರ: ಹಿಂದೂಗಳಲ್ಲಿ ಧರ್ಮ ಶಿಕ್ಷಣ ಕೊರತೆ ಇದೆ. ಹಿಂದೂ ಯುವಶಕ್ತಿ ಧರ್ಮದ ಜಾಗೃತಿಗಾಗಿ ಶ್ರಮಿಸಬೇಕಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಬೆಂಗಳೂರಿನ ಸಮನ್ವಯಕಾರ ಶರತಕುಮಾರ ತಿಳಿಸಿದರು.
ಸೋಮವಾರ ಸಂಜೆ ಪಟ್ಟಣದ ರಂಭಾಪುರಿ ವೀರಗಂಗಾಧರ ಸಮುದಾಯ ಭವನದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಿಂದೂ ರಾಷ್ಟ್ರ ಸಮಿತಿ ಸಭೆಯಲ್ಲಿ ಮಾತನಾಡಿದರು.ಹಿಂದೂಗಳಿಗೆ ಹಿಂದೂಗಳೇ ಜಾಗೃತಿ ಮೂಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ದುಸ್ಥಿತಿಗೆ ಬಂದು ತಲುಪಿದ್ದೇವೆ. ಇದಕ್ಕೆ ಕಾರಣ ಹಿಂದೂಗಳಿಗೆ ಧರ್ಮ ಶಿಕ್ಷಣದ ಅಭಾವದಿಂದ ಯುವಶಕ್ತಿ ಮದ್ಯವ್ಯಸನಿಗಳಾಗಿದ್ದಾರೆ. ರಾಷ್ಟ್ರ ಧರ್ಮದ ಬಗ್ಗೆ ತಿಳಿದುಕೊಳ್ಳುವ ಸಮಯವಿಲ್ಲ. ಹಿಂದೂ ಯುವಕರಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಬೆಳೆಯುತ್ತಿದೆ. ಸ್ವಾತಂತ್ರ ಸಿಕ್ಕು 7 ದಶಕಗಳಿಂದ ಧರ್ಮ ಶಿಕ್ಷಣ ಅಭಾವದಿಂದ ಸಮಾಜದ ಆಚರಣೆ, ಸಂಸ್ಕೃತಿ, ಪರಂಪರೆ, ರಾಷ್ಟ್ರಭಕ್ತಿ ಮರೆಯುತ್ತಿದ್ದಾರೆ. ವರ್ಷಕ್ಕೆ ಕೆಲವೇ ದಿನಗಳು ರಾಷ್ಟ್ರಭಕ್ತಿ ಮೂಡುತ್ತಿದೆ.
ಹಿಂದೂ ಧರ್ಮ, ಧರ್ಮ ಗ್ರಂಥಗಳ, ದೇವರ ಬಗ್ಗೆ ಅಪಹಾಸ್ಯ ಮಾಡಿದರೂ ಹಿಂದೂ ಸಮಾಜ ಜಾಗೃತಿ ಆಗುತ್ತಿಲ್ಲ. ಹಿಂದೂ ಸಮಾಜವನ್ನು ಸಂಕುಚಿತ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕರೂ ಆ ಬಗ್ಗೆ ಯುವಕರಲ್ಲಿ ಇನ್ನು ಅರಿವು ಮೂಡಿಲ್ಲ. ಹಿಂದೂಗಳಲ್ಲಿ ಎಡಪಂಥಿಯ ಹಿಂದೂಗಳು ಜಾಸ್ತಿಯಾಗಿದ್ದಾರೆ. ಹಿಂದೂ ರಾಷ್ಟ್ರನಿರ್ಮಾಣ ಮಾಡಲು ಹಿಂದೂ ಜನಜಾಗೃತಿ ಸಮಿತಿ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದೆ ಎಂದರು.ಈಗಾಗಲೇ ದೇಶದ 200 ಜಿಲ್ಲೆ, 9 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಪಾಕಿಸ್ತಾನದಲ್ಲಿ ಶೇ. 23ರಷ್ಟಿದ್ದ ಹಿಂದೂಗಳ ಸಂಖ್ಯೆ ಶೇ. 2ಕ್ಕೆ ಇಳಿದಿದೆ. ಬಾಂಗ್ಲಾದೇಶದಲ್ಲಿ ಶೇ. 33ರಷ್ಟಿದ್ದ ಹಿಂದೂಗಳು ಶೇ. 7ಕ್ಕೆ ಬಂದಿದೆ. ಹೀಗಾಗಿ ಹಿಂದೂಗಳು ಹಿಂದೂ ರಾಷ್ಟ್ರ ಸ್ಥಾಪನೆಗೆ ಕಟಿಬದ್ದರಾಗಿ ನಿಲ್ಲಬೇಕು. ಹಿಂದೂಗಳಲ್ಲಿ ಧರ್ಮಜಾಗೃತಿ ಮೂಡಬೇಕಾಗಿದೆ. ಹಿಂದೂಗಳು ಎಲ್ಲರೂ ಒಂದಾಗಿ ಹೋಗಬೇಕಾಗಿದೆ ಎಂದರು.ಹಳಿಯಾಳದ ವಿಶ್ವ ಹಿಂದೂ ಪರಿಷತ ಮುಖಂಡ ಶ್ರೀಪತಿ ಭಟ್ ಮಾತನಾಡಿ, ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳಾದ ನಾವು ಅಲ್ಪ ಸಂಖ್ಯಾತರಾಗುತ್ತಿದ್ದೇವೆ. ಅದಕ್ಕೆ ಬೇರೆ ಯಾರೂ ಕಾರಣವಲ್ಲ, ಹಿಂದೂಗಳೆ ಕಾರಣ. ದೇಶದ ಹಾಗೂ ಧರ್ಮದ ಬಗ್ಗೆ ಕಿಂಚಿತ್ತೂ ವಿಚಾರ ಮಾಡದೆ ಕೇವಲ ಸ್ವಾರ್ಥ ಮನೋಭಾವನೆಯಿಂದ ನಮ್ಮ ಕುಟುಂಬ ಅನ್ನುವ ವಿಚಾರದಲ್ಲಿ ತೊಡಗಿದ್ದೇವೆ ಎಂದರು.
ಧರ್ಮದ ವಿಚಾರ ಮಾಡದೆ ಜೀವನವನ್ನು ಸಾಗಿಸಿಕೊಂಡು ಧರ್ಮ ಕುಂಠಿತಗೊಳ್ಳುತ್ತಿದೆ. ಹಿಂದೂ ಧರ್ಮವನ್ನು ವಿದೇಶಿಗರು ಕೊಂಡಾಡುತ್ತಿದ್ದಾರೆ. ದೇಶದಲ್ಲಿ ಇರುವ ಹಿಂದೂಗಳಿಗೆ ಧರ್ಮದ ಬಗ್ಗೆ ಜಾಗೃತಿ ಮೂಡುತ್ತಿಲ್ಲ. ಯುವಕರಲ್ಲಿ ಧರ್ಮದ ಬಗ್ಗೆ ಜಾಗೃತಿ ಮೂಡುತ್ತಿಲ್ಲ. ದೇಶದಲ್ಲಿ ಧರ್ಮದ ವಿಚಾರದಲ್ಲಿ ಕೆಳಮಟ್ಟದಲ್ಲಿದೆ. ಮನೆಯಲ್ಲಿ ಮಕ್ಕಳಿಗೆ ಸಂಸ್ಕೃತಿ ಬೆಳೆಸುವ ಕೆಲಸ ಹಿರಿಯರಿಂದ ಆಗಬೇಕು. ಹಿಂದೂ ಧರ್ಮ ರಕ್ಷಣೆಗೆ ತ್ಯಾಗ ಬಹಳ ಮುಖ್ಯ. ತ್ಯಾಗವೆಂದರೆ ಧರ್ಮದ ಕೆಲಸಕ್ಕೆ ಸಮಯವನ್ನು ಕೊಡಿ ಎಂದರು.ಗಣ್ಯ ವರ್ತಕ ಗಿರೀಶ ಅಗಡಿ ಮಾತನಾಡಿದರು. ವಿಠೋಭಾ ಮಾಲ್ಸೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮೊದಲು ಸಂತೋಷ ಬೋಮಲೆ ಶಂಖನಾದ ಮೊಳಗಿಸಿದರು.
ಈ ವೇಳೆ ಅಶೋಕ ಭೋಜ, ಲಕ್ಷ್ಮೀ ತಟ್ಟಿ, ಶೋಭಾ ಇಟಗಿ, ದಯಾನಂದ ಹೊನಕೇರಿ, ಜಯಶ್ರೀ ಹೆಬಸೂರ, ಗೀತಾ ಬಡಿಗೇರ, ಬೇಬಿ ರುದ್ರಶೆಟ್ಟಿ, ನವೀನ ಕುಂಬಾರ, ಪ್ರವೀಣ ಬೆನ್ನೂರ, ಪಾರ್ವತಿ ಹುಲಕೋಟಿ, ಶಾಂತಾ ಹುಲಕೋಟಿ ಇದ್ದರು. ಸುಮಂಗಲಾ ಕುಂಬಾರ ಕಾರ್ಯಕ್ರಮ ನಿರ್ವಹಿಸಿದರು.