ಸಾರಾಂಶ
ತ್ಯಾಗ, ಬಲಿದಾನ,ನಿರಂತರ ಹೋರಾಟದ ಫಲವಾಗಿ ನಮಗೆಲ್ಲರಿಗೂ ಸ್ವಾತಂತ್ರö್ಯ ದೊರಕಿದ್ದು,ಹೋರಾಟದ ಮತ್ತು ಹೋರಾಟಗಾರರ ಇತಿಹಾಸ, ಸಂದೇಶ, ವಿಚಾರಗಳು ಯುವ ಪೀಳಿಗಿಗೆ ಸ್ಪೂರ್ತಿಯಾಗಬೇಕೆಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.
ಕನ್ನಡಪ್ರಭ ವಾರ್ತೆ ದೇವದುರ್ಗ
ತ್ಯಾಗ, ಬಲಿದಾನ,ನಿರಂತರ ಹೋರಾಟದ ಫಲವಾಗಿ ನಮಗೆಲ್ಲರಿಗೂ ಸ್ವಾತಂತ್ರö್ಯ ದೊರಕಿದ್ದು,ಹೋರಾಟದ ಮತ್ತು ಹೋರಾಟಗಾರರ ಇತಿಹಾಸ, ಸಂದೇಶ, ವಿಚಾರಗಳು ಯುವ ಪೀಳಿಗಿಗೆ ಸ್ಪೂರ್ತಿಯಾಗಬೇಕೆಂದು ಶಾಸಕಿ ಕರೆಮ್ಮ ಜಿ.ನಾಯಕ ತಿಳಿಸಿದರು.ಪಟ್ಟಣದ ಸಾರ್ವಜನಿಕ ಕ್ಲಬ್ ಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಾವೆಲ್ಲರೂ ಸಡಗರ, ಸಂಭ್ರದಿಂದ ಆಚರಿಸುತ್ತಿದ್ದೇವೆ.ಆದರೆ ಸ್ವಾತಂತ್ರ್ಯದ ಪ್ರತಿಫಲ ಸಿಕ್ಕಿದೆಯೇ?ಎಂಬುದನ್ನು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಶಾಂತಪ್ಪ ಹೆಂಬೆರಾಳ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಅಧಿಕಾರಿ ಪುರುರಾಜ್ ಸಿಂಗ್ ಓಲಂಕಿ, ಎಪಿಎಂಸಿ ಅಧ್ಯಕ್ಷ ಆದನಗೌಡ ಪಾಟೀಲ್ ಬುಂಕಲದೊಡ್ಡಿ,ಗ್ಯಾರಂಟಿ ಯೋಜನೆ ಅಧ್ಯಕ್ಷ ಲಕ್ಷ್ಮಣ ಜ್ಯೋತಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಪಂ ಇಓ ಬಸವರಾಜ ಹಟ್ಟಿ,ಬಿಇಓ ಮಹಾದೇವಪ್ಪ,ಸಿಪಿಐ ಗುಂಡುರಾವ್, ಸ್ವಾತಂತ್ರ್ಯ ಹೋರಾಟಗಾರ ಆದಿ ರಾಜಶೇಖರಪ್ಪರವರ ಪತ್ನಿ ಆದಿ ಕಮಲಮ್ಮ, ಪಿಐ ಮಂಜುನಾಥ, ತಾಲೂಕು ಸಮಾಜ ಕಲ್ಯಾಣಧಿಕಾರಿ ರಾಜಕುಮಾರ ಡೋಣಿ, ಪ.ಪಂ ಕಲ್ಯಾಣಧಿಕಾರಿ ಮಂಜುಳಾ ಅಸುಂಡಿ, ಸಿಡಿಪಿಓ ಮಾಧವಾನಂದ ತಾಲೂಕು ಕಸಾಪ ಅಧ್ಯಕ್ಷ ಹೆಚ್.ಶಿವರಾಜ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ತಾಲೂಕು ಕಸಾಪ ವತಿಯಿಂದ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ವಿವಿಧ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.