ಸಾರಾಂಶ
ಬೀರೂರುಸಮಾನತೆಯ ಸಮಾಜ ನಿರ್ಮಾಣದ ಕನಸಿನೊಂದಿಗೆ ಶೋಷಿತ ಸಮುದಾಯಗಳ ಮಹಾನ್ ನೇತಾರರಷ್ಟೇ ಅಲ್ಲದೇ ಮಹಾನ್ ಮಾನವತಾವಾದಿಯಾಗಿ ಭಾರತೀಯರೆಲ್ಲರ ಬದುಕಿಗೆ ಸಂವಿಧಾನ ಶ್ರೀರಕ್ಷೆ ಕೊಡುಗೆ ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಿದ್ಧಾಂತ ಹಾಗೂ ಆದರ್ಶ ಯುವಪೀಳಿಗೆಗೆ ಮಾರ್ಗದರ್ಶಕವಾಗಬೇಕಿದೆ ಎಂದು ಕ್ಷೇತ್ರ ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
- ಅಂಬೇಡ್ಕರ್ ಕಂಚಿನ ಪುತ್ಥಳಿ ನಿರ್ಮಾಣ ಭೂಮಿಪೂಜೆಕನ್ನಡಪ್ರಭ ವಾರ್ತೆ, ಬೀರೂರುಸಮಾನತೆಯ ಸಮಾಜ ನಿರ್ಮಾಣದ ಕನಸಿನೊಂದಿಗೆ ಶೋಷಿತ ಸಮುದಾಯಗಳ ಮಹಾನ್ ನೇತಾರರಷ್ಟೇ ಅಲ್ಲದೇ ಮಹಾನ್ ಮಾನವತಾವಾದಿಯಾಗಿ ಭಾರತೀಯರೆಲ್ಲರ ಬದುಕಿಗೆ ಸಂವಿಧಾನ ಶ್ರೀರಕ್ಷೆ ಕೊಡುಗೆ ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಿದ್ಧಾಂತ ಹಾಗೂ ಆದರ್ಶ ಯುವಪೀಳಿಗೆಗೆ ಮಾರ್ಗದರ್ಶಕವಾಗಬೇಕಿದೆ ಎಂದು ಕ್ಷೇತ್ರ ಶಾಸಕ ಕೆ.ಎಸ್.ಆನಂದ್ ತಿಳಿಸಿದರು.ಪಟ್ಟಣದ ಮಹಾತ್ಮಾಗಾಂಧಿ ವೃತ್ತದ ಪೋಲಿಸ್‌ಚೌಕಿ ಪಕ್ಕದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕಂಚಿನ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ , ಹಿಂದುಳಿದ ಸಮುದಾಯಗಳು ಮೀಸಲಾತಿಯಡಿ ಸಿಕ್ಕಿರುವ ಉತ್ತಮ ಅವಕಾಶವಳನ್ನು ಸಮರ್ಥವಾಗಿ ಬಳಸಿಕೊಂಡು ವಿದ್ಯಾಭ್ಯಾಸದ ಜೊತೆ ಎಲ್ಲಾ ರಂಗಗಳಲ್ಲೂ ಮುಂದುವರಿಯಬೇಕು ಎಂಬ ಕಳಕಳಿ ವ್ಯಕ್ತಪಡಿಸಿದರು.
ಪಟ್ಟಣದ ಅಭಿವೃದ್ದಿಗೆ ಪೂರಕ ಎಲ್ಲಾ ಕಾರ್ಯಕ್ರಮಗಳಿಗೆ ಒತ್ತು ನೀಡಿದ್ದು ₹37ಕೋಟಿ ವೆಚ್ಚದಲ್ಲಿ ಪಟ್ಟಣದ ಮುಖ್ಯರಸ್ತೆಯನ್ನು ಚತುಷ್ಪತರಸ್ತೆಯನ್ನಾಗಿ ಮಾರ್ಪಡಿಸಲು ಸೂಕ್ತವಾದ ಎಲ್ಲಾ ರೀತಿಯ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ದೊರಕುತ್ತಿದೆ ಶೀಫ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.ಅಜ್ಜಂಪುರ ರಸ್ತೆ ದೀಪ ಅಳವಡಿಕೆ, ಟ್ಯಾಕ್ಸಿಸ್ಟಾಂಡ್ ನಿರ್ಮಾಣ ಕಾಮಗಾರಿ, ಲಿಂಗದಹಳ್ಳಿ ಪಟ್ಟಣವ್ಯಾಪ್ತಿ ರಸ್ತೆ ಅಗಲೀಕರಣ, ಇಂದಿರಾಕ್ಯಾಂಟೀನ್ ಆರಂಭ ಮೈಲಾರಲಿಂಗಸ್ವಾಮಿ ಪಾದದಕೆರೆ ಪ್ರದೇಶ ಅಭಿವೃದ್ಧಿ ಸೇರಿದಂತೆ ಕೈಗೊಂಡಿರುವ ಕಾಮಗಾರಿಗಳ ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೆ ಹೆಚ್ಚಿನ ಪುರಸಭಾ ಸದಸ್ಯರು ಗೈರಾಗಿದ್ದು ದುರದೃಷ್ಟಕರ, ನನ್ನ ಅವಧಿ ಯಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ದೊರಕಿರುವುದು ಸಂತಸ ತಂದಿದೆ. ಹಿಂದುಳಿದ ಸಮುದಾಯಗಳ ಹಲವು ದಶಕಗಳ ಹೋರಾಟಕ್ಕೆ ಫಲಸಿಕ್ಕಿದೆ ಎಂದರುಮಾದಿಗ ಮೀಸಲಾತಿ ಹೋರಾಟ ಸಮಿತಿ ಪ್ರಧಾನಕಾರ್ಯದರ್ಶಿ ಬಿ.ಟಿ.ಚಂದ್ರಶೇಖರ್ ಮಾತನಾಡಿ, ನಮ್ಮ ಹಲವು ದಶಕಗಳ ಕನಸು ಇಂದು ಶಾಸಕರ ಹಾಗೂ ಪುರಸಭೆ ಸಹಕಾರದಿಂದ ಸಾಕಾರಗೊಳ್ಳುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಂಡು ಪುತ್ಥಳಿ ಅನಾವರಣಗೊಳ್ಳಲಿದೆ ಎಂಬ ಆಶಯ ವ್ಯಕ್ತಪಡಿಸಿದರು.ಕಾಂಗ್ರೆಸ್ ಮುಖಂಡ ಕಡೂರು ಗ್ಯಾಸ್ ಚಂದ್ರಪ್ಪ, ಪುರಸಭಾ ಮಾಜಿ ಅಧ್ಯಕ್ಷೆ ವನಿತಾಮಧು ಭಾವಿಮನೆ, ಕರ್ನಾಟಕ ಬ್ಲೂ ಆರ್ಮಿ ಸಂಘಟನೆ ಶೂದ್ರಶ್ರೀನಿವಾಸ್, ಪುರಸಭಾ ಸದಸ್ಯ ಬಿ.ಕೆ.ಶಶಿಧರ್,ದಲಿತ ಸಮಾಜ ಮುಖಂಡ ಚಂದ್ರಣ್ಣ, ಮೈಲಾರ ಲಿಂಗಸ್ವಾಮಿ ದೇವಾಲಯ ಸಮಿತಿ ವಿಶ್ವೇಶ್ವರಾಚಾರ್ ಮಾತನಾಡಿದರು.ಪುರಸಭಾ ಮಾಜಿ ಅಧ್ಯಕ್ಷೆ ಭಾಗ್ಯಲಕ್ಷ್ಮಿಮೋಹನ್ , ಪುರಸಭಾ ಸದಸ್ಯ ರವಿಕುಮಾರ್, ಮಾಣಿಕ್‌ಪಾಷಾ, ಲೋಕೇಶಪ್ಪ, ಶಾರದಾರುದ್ರಪ್ಪ, ಪಟ್ಟಣಗೆರೆ ಸಗುನಪ್ಪ, ಕೃಷ್ಣಪ್ಪ, ಸಮುದಾಯದ ಮುಖಂಡರು, ಪುರಸಭಾ ಮುಖ್ಯಾಧಿಕಾರಿ ಜಿ.ಪ್ರಕಾಶ್, ದಲಿತ ಸಂಘಟನೆಗಳ ಮುಖಂಡರು ಪದಾಧಿಕಾರಿಗಳು ಇದ್ದರು.ಭೂಮಿ ಪೂಜೆಗೂ ತೆರೆದ ವಾಹನದಲ್ಲಿ ಮೆರವಣಿಗೆ:ಶಾಸಕ ಕೆ.ಎಸ್.ಆನಂದ್ ಕಾರ್ಯಕ್ರಮಕ್ಕೆ ಬೀರೂರು ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಬಡಾವಣೆ ನೂರಾರು ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಮತ್ತು ಪುರುಷರು ಅಂಬೇಡ್ಕರ್ ಘೋಷ ವಾಕ್ಯದೊಂದಿಗೆ ಶಾಸಕರನ್ನು ತೆರೆದ ವಾಹನದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿರುವ ಅಂಬೇಡ್ಕರ್ ಪುತ್ತಳಿವರೆಗೆ ಮೆರವಣಿಗೆ ನಡೆಸಿ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ, ಭೂಮಿ ಪೂಜೆ ನೆರವೇರಿಸಿದರು.10ಬೀರೂರು01ಬೀರೂರು ಪಟ್ಟಣದ ಮಹಾತ್ಮಾಗಾಂಧಿ ವೃತ್ತದ ಪೋಲಿಸ್‌ಚೌಕಿ ಸಮೀಪ ನೂತನವಾಗಿ ನಿರ್ಮಾಣವಾಗಲಿರುವ ಡಾ.ಬಿ.ಆರ್.ಅಂಬೇಡ್ಕರ್ ಕಂಚಿನಪುತ್ಥಳಿ ನಿರ್ಮಾಣ ಕಾಮಗಾರಿ ಭೂಮಿಪೂಜೆಯನ್ನು ಶಾಸಕ ಕೆ.ಎಸ್.ಆನಂದ್ ಸೋಮವಾರ ನೆರವೇರಿಸಿದರು.;Resize=(128,128))
;Resize=(128,128))
;Resize=(128,128))