ಸಾರಾಂಶ
ಲಕ್ಷ್ಮೇಶ್ವರ: ಬ್ರಿಟೀಷರ ಕಾಲದ ಕಾನೂನು ಬಿಟ್ಟು ಭಾರತೀಯ ನ್ಯಾಯ ಸಂಹಿತೆ ಕಾನೂನು ಜಾರಿಗೆ ತರಲು ನ್ಯಾಯಾಂಗ ಇಲಾಖೆಯ ಎಲ್ಲರು ಶ್ರಮಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.
ಭಾನುವಾರ ಪಟ್ಟಣದ ವಕೀಲರ ಸಂಘದ ಕಾರ್ಯಾಲಯದಲ್ಲಿ ಮೂರು ದಿನಗಳ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಭಾರತೀಯ ನ್ಯಾಯ ಸಂಹಿತೆಯಲ್ಲಿ ನ್ಯಾಯದಾನಕ್ಕೆ ಆದ್ಯತೆ ನೀಡಲಾಗಿದೆ. ಬ್ರಿಟೀಷರ ಹಲವು ಕಾನೂನು ತಿದ್ದುಪಡಿ ಮಾಡಿ ಭಾರತೀಯ ಕಾನೂನು ಜಾರಿಗೆ ತರುವ ಮೂಲಕ ನ್ಯಾಯದಾನಕ್ಕೆ ಹೊಸ ಆಯಾಮ ನೀಡಲಾಗಿದೆ. ಭಾರತೀಯತೆ ಉಳಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಬ್ರಿಟೀಷರ ಕಾನೂನು ಶಿಕ್ಷೆ ನೀಡುವುದಕ್ಕೆ ಮಾತ್ರ ಸೀಮಿತವಾಗಿದ್ದವು. ಭಾರತೀಯರ ಕಾನೂನುಗಳಲ್ಲಿ ನ್ಯಾಯದಾನದ ವಿಳಂಬ ತಪ್ಪಿಸಿ ಅಪರಾಧಿಗೆ ಶಿಕ್ಷೆ ನೀಡುವ ಕಾರ್ಯ ಸರಳೀಕರಣಗೊಳಿಸುವುದು ಹೊಸ ಕಾನೂನುಗಳ ಉದ್ದೇಶವಾಗಿದೆ ಎಂದು ಹೇಳಿದ ಅವರು, ನ್ಯಾಯಾಂಗ ಇಲಾಖೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಾನೂನುಗಳನ್ನು ಜಾರಿಗೆ ತರುವ ಕಾರ್ಯವಾಗಲಿ, ಅವು ಕೇವಲ ಪುಸ್ತಕದಲ್ಲಿ ಮಾತ್ರ ಉಳಿಯದಂತಾಗಬಾರದು ಎಂದು ಹೇಳಿದರು.
ಈ ವೇಳೆ ಜಿಲ್ಲಾ ಸತ್ರ ನ್ಯಾಯಾಧೀಶ ಬಸವರಾಜ ಮಾತನಾಡಿ, ನೂತನ ಕಾನೂನುಗಳ ಕುರಿತು ಕಾರ್ಯಾಗಾರದಲ್ಲಿ ತಿಳಿಸಿಕೊಡುವ ಕಾರ್ಯ ಉಪನ್ಯಾಸಕರು ಮಾಡಬೇಕು ಎಂದು ಹೇಳಿದರು.ಈ ವೇಳೆ ನ್ಯಾಯಾಲಯದ ಆವರಣದಲ್ಲಿ ಇ-ಸೇವಾ ಕೇಂದ್ರದ ನೂತನ ಕಟ್ಟಡದ ಭೂಮಿ ಪೂಜೆಯನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ.ಶ್ರೀಶಾನಂದ ನೆರವೇರಿಸಿದರು.
ಕಾರ್ಯಾಗಾರದಲ್ಲಿ ಹಿರಿಯ ನ್ಯಾಯವಾದಿ ವಿ.ಎಲ್. ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಬಾಳೇಶ್ವರಮಠ ಅಧ್ಯಕ್ಷೀಯ ಭಾಷಣ ಮಾಡಿದರು. ಸಭೆಯಲ್ಲಿ ಭರತ್ ಕರಗುದರಿ,. ಸತೀಶ್ ಎಂ. ಎಸ್.ಎಸ್. ಮಿಠಲಕೊಂಡ, ವಿ.ಡಿ.ಕಾಮರೆಡ್ಡಿ, ಎಸ್.ಎಚ್. ಆಸೀಫ್ ಅಲಿ, ಕೆ. ಕೋಟೇಶ್ವರ ರಾವ್, ಸಿ.ಆರ್. ಪಾಟೀಲ, ಎಂ.ಎಂ. ಬಮ್ಮನಕಟ್ಟಿ, ಬಿ.ಬಿ. ಭೂವನಗೌಡರ, ಬಿ.ಎಸ್. ಘೋಂಗಡಿ, ಎಸ್.ಪಿ.ಬಳಿಗಾರ, ಎಂ.ಎಸ್. ದೊಡ್ಡಗೌಡರ, ಎ.ಬಿ. ಪಾಟೀಲ, ಆರ್.ಎಂ. ಪೂಜಾರ, ಎ.ಎ. ಬೇವಿನಗಿಡದ, ಬಿ.ಎನ್. ಸಂಶಿ, ಎಂ.ಎನ್. ಬಾಡಗಿ, ವಿ.ಆರ್. ಪಾಟೀಲ, ವಿ.ಎಸ್. ಪಶುಪತಿಹಾಳ, ಜೆ.ಡಿ. ದೊಡ್ಡಮನಿ, ಎನ್.ಎಂ. ಗದಗ, ಎಸ್.ಎಂ. ನಾವಿ, ಬಿ.ವಿ. ನೇಕಾರ, ಪಿ.ಎಂ. ವಾಲಿ, ಎನ್.ಸಿ. ಪಾಟೀಲ, ನಾಗರಾಜ ಸೊರಟೂರ, ಆರ್.ಆರ್. ನದಾಫ್, ಎನ್.ಸಿ. ಅಮಾಸಿ ಸೇರಿದಂತೆ ಅನೇಕರು ಹಾಜರಿದ್ದರು.ಮಹೇಶ ಹಾರೂಗೇರಿ ನಿರೂಪಿಸಿದರು, ವಿಠಲ್ ನಾಯ್ಕ ಸ್ವಾಗತಿಸಿದರು. ಎ.ಟಿ.ಕಟ್ಟಿಮನಿ ವಂದಿಸಿದರು.