ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಜೆಡಿಎಸ್‌ನವರು ಮೊದಲು ಮೈತ್ರಿಧರ್ಮವನ್ನು ಪಾಲಿಸುವುದನ್ನು ಕಲಿಯಲಿ ಆನಂತರ ಬಿಜೆಪಿ ಪಕ್ಷದ ಬಗ್ಗೆ ಮಾತನಾಡಲಿ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಬೇಹಳ್ಳಿ ಗಿರೀಶ್ ತಿಳಿಸಿದರು.ಅವರು ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಅವರು ಆರೋಪ ಮಾಡುವ ಮೊದಲು ಬಿಜೆಪಿ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದನ್ನು ಕಲಿಯಲಿ, ರಾಜ್ಯದಲ್ಲೇ ಒಂದು ರಾಜಕೀಯವಾದರೆ, ಜಿಲ್ಲೆಯಲ್ಲೇ ಬೇರೆ ರಾಜಕೀಯ ನಡೆಯುತ್ತದೆ. ಹಾಸನದ ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಯಾವುದೇ ತಪ್ಪು ಮಾಡದ ಚಂದ್ರೇಗೌಡರನ್ನು ಏಕಾ ಏಕಿ ಕೆಳಗಿಳಿಸಲು ಕಾರಣ ಏನಿತ್ತು ಪ್ರೀತಂಗೌಡರ ವಿರುದ್ಧ ಮಾತನಾಡುವ ಸೂರಜ್‌ರವರು ಬಿಜೆಪಿ ಜಿಲ್ಲಾಧ್ಯಕ್ಷರು, ರಾಜ್ಯಾಧ್ಯಕ್ಷರ ಜೊತೆ ಮಾತುಕತೆ ನಡೆಸಿ ಮೈತ್ರಿ ಧರ್ಮವನ್ನು ಪಾಲಿಸಬೇಕಿತ್ತು, ಆದರೆ ಅವರ ದುರಹಂಕಾರಕ್ಕೆ ಚಂದ್ರೇಗೌಡರು ಪ್ರತ್ಯುತ್ತರ ನೀಡಿದ್ದಾರೆ. ಅದನ್ನೇ ದ್ವೇಷದ ರಾಜಕೀಯ ಮಾಡುವುದನ್ನು ಬಿಟ್ಟು ಮೈತ್ರಿಧರ್ಮವನ್ನು ಪಾಲಿಸಬೇಕು. ಚಂದ್ರೇಗೌಡರು ಯಾವುದೇ ಅವ್ಯವಹಾರ ಮಾಡಿದ್ದಲ್ಲಿ ಅಂತಹದನ್ನು ನಮ್ಮ ಪಕ್ಷ ಮುಖಂಡರಿಗೆ ತಿಳಿಸಿ ಇವರನ್ನು ಕೆಳಗಿಳಿಸುತ್ತೇವೆ ಎಂದು ಹೇಳಬೇಕಿತ್ತು ಸುಮ್ಮನೇ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದರು.ಆನೇಕೆರೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಇದೇ ನಿಮ್ಮ ಜೆಡಿಎಸ್‌ನವರು ಕಾಂಗ್ರೆಸ್‌ಪಕ್ಷದವರ ಜೊತೆಗೂಡಿ ಬಿಜೆಪಿ ಪಕ್ಷವನ್ನು ಸೋಲಿಸಿದ್ದು ಸರಿಯೇ, ನೀವು ಬೇಕಾದರೆ ಯಾವ ಪಕ್ಷದ ಜೊತೆ ಹೋದರು ಸರಿಯನ್ನಬೇಕು ಇದು ಯಾವ ನ್ಯಾಯ. ಮೊದಲು ನಿಮ್ಮ ಪಕ್ಷ ನಿಷ್ಠೆಯನ್ನು ಕಾಪಾಡಿಕೊಳ್ಳಿ ಎಂದು ಸೂರಜ್‌ರೇವಣ್ಣ ಅವರಿಗೆ ಆಗ್ರಹಿಸಿದರು.ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಿದ್ಯಾಪ್ರಸಾದ್, ನಾಗೇಶ್‌ಹಿರೇಬಿಳ್ತಿ, ಹರ್ಷವರ್ಧನ್, ರಮೇಶ್, ಯೋಗೇಶ್ ಮತ್ತಿತರಿದ್ದರು.