ಕೈಗಾರಿಕೆಯಲ್ಲಿ ನಿಯಮ ಪಾಲನೆಯಾಗದ ಕುರಿತು ಅಸಮಾಧಾನ
ಕನ್ನಡ ಪ್ರಭ ವಾರ್ತೆ ಗುರುಮಟಕಲ್ಮತಕ್ಷೇತ್ರದ ಕಡೇಚೂರು–ಬಾಡಿಯಾಲ ಕೈಗಾರಿಕಾ ಪ್ರದೇಶದ ಔಷಧಿ ಘಟಕದಲ್ಲಿ ಸಂಭವಿಸಿದ ಮೂವರು ಕಾರ್ಮಿರ ಸಾವು ಹಾಗೂ ಓರ್ವ ಗಾಯಗೊಂಡ ಘಟನೆಯನ್ನು ಶೀಘ್ರವೇ ತನಿಖೆ ಮಾಡಬೇಕು ಎಂದು ಮಾಜಿ ಸಂಸದ ಡಾ.ಉಮೇಶ್ ಜಾಧವ್ ಒತ್ತಾಯಿಸಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಗುರುತಿನ ಚೀಟಿ ಇರಲಿಲ್ಲ, ಮೃತಪಟ್ಟ ಕಾರ್ಮಿಕರನ್ನು ಅವರ ಆಧಾರ್ ಕಾರ್ಡ್‌ಗಳ ಮೇಲೆ ಗುರುತಿಸಲು ಸಾಧ್ಯವಾಗಿದ್ದು, ಘಟಕದಲ್ಲಿ ಕಾರ್ಮಿಕರ ಸುರಕ್ಷತೆಗೆ ನಿಯಮಗಳನ್ನು ಯಾವುದು ಪಾಲನೆ ಆಗುತ್ತಿಲ್ಲ. ಜತೆಗೆ ದುರ್ಘಟನೆಗೆ ನಿಖರ ಕಾರಣವೇನು ಎಂಬುದನ್ನು ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಬೇಕು. ಘಟನೆಯ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ರಾಸಾಯನಿಕ ವಿಷಯುಕ್ತ ಕಲುಷಿತ ನೀರು ಭೀಮನದಿ ಸೇರುತ್ತಿದ್ದು, ಬೆಳೆ ಮತ್ತು ಮಣ್ಣಿನ ಫಲವತ್ತತೆ ಹಾಳಾಗಿದೆ ಎಂದು ರೈತರು ಹೇಳುತ್ತಿದ್ದಾರೆ. ಕಳೆದ 6 ತಿಂಗಳು ಹಿಂದೆ ನೀರು ಮತ್ತು ಪರಿಸರ ಮಾಲಿನ್ಯ ಬಗ್ಗೆ ಪರೀಕ್ಷೆ ಮಾಡಲು ತಿಳಿಸಲಾಯಿತು. ನಂತರ ಸಂಪರ್ಕಿಸಿದಾಗ ಯಾವುದೇ ರೀತಿಯಾಗಿ ಮಾಹಿತಿ ನೀಡಿಲ್ಲ. ಈ ಕಾರಣದಿಂದ ಸರ್ಕಾರವೇ ದುರ್ಘಟನೆಗೆ ನೇರ ಜವಾಬ್ದಾರಿ ಎಂದರು.ರಾಜ್ಯ ಕಾರ್ಯಚರಣೆ ಸದಸ್ಯರು ದೇವದಾಸ, ಮಂಡಳ ಉಪಾಧ್ಯಕ್ಷ ಜಗದೀಶ ಮೇನಂಜೀ, ನಗರಧ್ಯಕ್ಷ ರಮೇಶ ತಾಂಡರಕ್, ಪ್ರಧಾನ ಕಾರ್ಯದರ್ಶಿ ವಿನಯ ಜನಾರ್ದನ, ಮಲ್ಲೇಶಪ್ಪ ಬೇಲಿ, ಅಮೃತ ತಿಪ್ಪಶೆಟ್ಟಿ, ರವಿಕುಮಾರ ರಾಠೋಡ ಇತರು ಉಪಸ್ಥಿತರಿದ್ದರು.