ಸಾರಾಂಶ
ಮಹನೀಯರ ಜಯಂತಿ ಆಚರಣೆಯಲ್ಲಿ ಮುಖ್ಯಗುರು ಸೂರ್ಯಕಾಂತ ಪಾಟೀಲ್ ಸಲಹೆ
ಕನ್ನಡಪ್ರಭ ವಾರ್ತೆ ಹುಲಸೂರಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ಶೈಲಿ ನಮ್ಮೇಲ್ಲರಿಗೂ ಮಾದರಿಯಾಗಬೇಕು ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ಸೂರ್ಯಕಾಂತ ಪಾಟೀಲ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಬುಧವಾರ ನಡೆದ ಮಹಾತ್ಮ ಗಾಂಧೀಜಿ ಯವರ 155ನೇ ಜಯಂತಿ ಹಾಗೂ ಲಾಲ್ ಬಹಾದ್ದೂರ ಶಾಸ್ತ್ರೀ ಅವರ 120ನೇ ಜಯಂತಿ ಆಚರಣೆ ಅಂಗವಾಗಿ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಮಹಾತ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಸಾಮೂಹಿಕ ಪ್ರಾರ್ಥನೆ ನೇರವೇರಿಸಿ ಮಾತನಾಡಿ, ಯಾವುದೇ ಕಠಿಣ ಸಂದರ್ಭದಲ್ಲಿ ನಮ್ಮ ತತ್ವ ಸಿದ್ಧಾಂತಗಳನ್ನು ಬಿಡದೆ ಸತ್ಯ ಅಹಿಂಸೆ ಹಾಗೂ ಸರಳ ಬದುಕು ಸಾಗಿಸುವ ದಾರಿಯಲ್ಲಿ ನಡೆಯಬೇಕು ಎಂದರು.
ನಂತರ ಸರ್ಕಾರಿ ಪ್ರೌಢಶಾಲೆಯಿಂದ ಗ್ರಾಮದ ಗಾಂಧಿ ವೃತ್ತದವರೆಗೆ ಗಾಂಧಿ ನಡಿಗೆ ಕೈಗೊಳ್ಳಲಾಯಿತು. ವೃತ್ತದಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ನಮನ ಸಲ್ಲಿಸಲಾಯಿತು.ದೇವಾನಂದ ನಂಜವಾಡೆ ಸ್ವಾಗತಿಸಿದರು. ಎಂ.ಡಿ ಆಜಮ್ ನಿರೂಪಿಸಿದರೆ, ಅಹ್ಮದ ಅಲಿ ವಂದಿಸಿದರು. ಈ ವೇಳೆ ರಾಜ್ಯ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಅಡಿಕೆ, ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜಪ್ಪ ನಂದೋಡೆ, ಮುಖ್ಯ ಶಿಕ್ಷಕ ಸೂರ್ಯಕಾಂತ ಕೆ.ಪಾಟೀಲ್, ಶಿಕ್ಷಕರಾದ ಪರವೇಜ್ ಮೊಮೀನ, ರೇಣುಕಾ ವಿ, ರಾಹುಲ್, ಅಮೀನ್, ಎಂ.ಡಿ.ಆಝಮ್, ದೇವಾನಂದ ನಂಜವಾಡೆ, ಅಹ್ಮದ್ ಅಲಿ, ಹಿರಾಬಾಯಿ ಸದಾಶಿವ ಬಿರಾದಾರ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದರು.