ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಬಸವ ಜ್ಯೋತಿಯ ಬೆಳಕು ಮನದ ಕತ್ತಲೆ ಕಳೆಯುವಂತಾಗಬೇಕು, ಮಾನವೀಯತೆ ಎಲ್ಲರಲ್ಲಿ ಬೆಳೆಯಬೇಕು ಎಂದು ಹುಕ್ಕೇರಿ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ನುಡಿದರು.
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಬಸವ ಜ್ಯೋತಿಯ ಬೆಳಕು ಮನದ ಕತ್ತಲೆ ಕಳೆಯುವಂತಾಗಬೇಕು, ಮಾನವೀಯತೆ ಎಲ್ಲರಲ್ಲಿ ಬೆಳೆಯಬೇಕು ಎಂದು ಹುಕ್ಕೇರಿ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ನುಡಿದರು.ತಾಲೂಕಿನ ಮುಗಳಿ ಗ್ರಾಮದಲ್ಲಿ ಬಸವ ಜಯಂತಿ ಉತ್ಸವ ನಿಮಿತ್ತ ಬಸವ ಜಯಂತಿ ಕಮಿಟಿಯಿಂದ ಸುಕ್ಷೇತ್ರ ಕೂಡಲಸಂಗಮದಿಂದ ಬಸವ ಜ್ಯೋತಿ ಭಾವೈಕ್ಯತೆ ಪಾದಯಾತ್ರೆ ಮೂಲಕ ಬಸವ ಜ್ಯೋತಿಯ ಸ್ವಾಗತ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕಾಯಕ, ದಾಸೋಹ ತತ್ವಗಳ ಮೂಲಕ ಸಮಾನತೆಯನ್ನು ಸಾರುತ್ತ, ಸಕಲಜೀವರಾಶಿಗಳಿಗೂ ಲೇಸನ್ನು ಬಯಸಿದ ಮಹಾನ ಮಾನವತಾವಾದಿ ಅಣ್ಣ ಬಸವಣ್ಣನವರ ವಚನಗಳ ತತ್ವ, ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳೋಣ. ಮುಗಳಿ ಗ್ರಾಮವು ಬಸವಭಕ್ತರಿಗೆ ಹೆಸರಾಗಿದ್ದು ಅವರ ಆದರ್ಶ ಸಿದ್ಧಾಂತಗಳನ್ನು ಪಾಲಿಸಿ ಎಂದು ತಿಳಿಸಿದರು.
ಶಿವಶರಣೆ ಕೀರ್ತನಾ ಎನಗಿಮಠ ಮಾತನಾಡಿ, ಬಸವಣ್ಣವರ ಶ್ರಮ ಗುಣತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಕಮತನೂರ ಗ್ರಾಮದ ಕೃಪಾನಂದ ಮಹಾಸ್ವಾಮಿಗಳು ಮಾತನಾಡಿದರು. ವಿಲಾಸ ಪಾಟೀಲ, ಬಿ.ಕೆ.ಪಾಟೀಲ, ಎಸ್.ಕೆ.ಬಂಬಲವಾಡಿ, ಎಲ್.ಎಸ್.ಹಂಚಿನಾಳ, ಈರಗೌಡ ಪಾಟೀಲ, ಬಾಬಾಜಿ ಪಾಟೀಲ, ರಾಜು ಹರಗನ್ನವರ, ರಮೇಶ್ ಪಾಟೀಲ, ಮಹಾಂತೇಶ ಹರಗನ್ನವರ, ಸಾಗರ ಗೋಟೆ ಉಪಸ್ಥಿತರಿದ್ದರು. ರಾಜು ಪಾಟೀಲ ಸ್ವಾಗತಿಸಿದರು. ಮಲ್ಲಪ್ಪ ಕೊಟಬಾಗಿ ನಿರೂಪಿಸಿದರು.