ಮಡಿವಾಳ ಸಮುದಾಯ ಮುಖ್ಯ ವಾಹಿನಿಗೆ ಬರಲಿ: ವೀಣಾ ಕಾಶಪ್ಪನವರ

| Published : Feb 12 2024, 01:32 AM IST

ಸಾರಾಂಶ

ಮಹಾಲಿಂಗಪುರ: ರಾಜ್ಯದ ಸಣ್ಣ ಸಣ್ಣ ಸಮುದಾಯಗಳಲ್ಲಿ ಮಡಿವಾಳ ಸಮುದಾಯವು ಒಂದು ಈ ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಆಗಲೇ ಸಮುದಾಯ ಗುರುತಿಸಲು ಸಾಧ್ಯವಾಗುತ್ತದೆ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.ನಗರದ ಕಲ್ಪಾಡ್‌ ಹತ್ತಿರವಿರುವ ದೋಬಿ ಘಾಟ್‌ ದ್ವಾರ ಬಾಗಿಲು ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು-ಕೀಳು ತಾರತಮ್ಯ, ಅಸ್ಪೃಶ್ಯತೆ, ಮೂಢ ನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ರಾಜ್ಯದ ಸಣ್ಣ ಸಣ್ಣ ಸಮುದಾಯಗಳಲ್ಲಿ ಮಡಿವಾಳ ಸಮುದಾಯವು ಒಂದು ಈ ಸಮುದಾಯ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಆಗಲೇ ಸಮುದಾಯ ಗುರುತಿಸಲು ಸಾಧ್ಯವಾಗುತ್ತದೆ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.

ನಗರದ ಕಲ್ಪಾಡ್‌ ಹತ್ತಿರವಿರುವ ದೋಬಿ ಘಾಟ್‌ ದ್ವಾರ ಬಾಗಿಲು ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು-ಕೀಳು ತಾರತಮ್ಯ, ಅಸ್ಪೃಶ್ಯತೆ, ಮೂಢ ನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳಿಂದ ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು, ಬಡವರು ದೀನದಲಿತರು ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಅವರ ಏಳಿಗೆಗಾಗಿ ವೀರ ಶರಣರು ಮಡಿವಾಳ ಮಾಚಿದೇವರು ಶ್ರಮಿಸಿದರು ಎಂದು ಹೇಳಿದ ಅವರು, ಮಡಿವಾಳ ಸಮುದಾಯದ ಭವನ ನಿರ್ಮಾಣಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಆಶೀರ್ವಚನ ನೀಡಿ ಮಾತನಾಡಿದ ಜುಂಜರವಾಡದ ಶರಣರಾದ ಬಸವರಾಜೇಂದ್ರ ಅವರು, ಮಾಚಿದೇವ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ 1120ರಲ್ಲಿ ಪರುವತಯ್ಯ ಸುಜ್ಞಾನವ್ವ ದಂಪತಿಯ ಪವಿತ್ರ ಉದರದಲ್ಲಿ ಜನಿಸಿದರು. ಅನೇಕ ವಚನಗಳನ್ನು ರಚಿಸಿದ, ಬಸವಣ್ಣನವರ ವಚನಗಳನ್ನು ರಕ್ಷಿಸಿದವರು ವೀರ ಮಡಿವಾಳ ಮಾಚಿದೇವರು. ಇಂದು ಸಮಾಜದಲ್ಲಿ ಒಗ್ಗಟ್ಟು ಬಹು ಮುಖ್ಯವಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತಿನಂತೆ ಸಮಾಜ ಒಗ್ಗಟಾಗಿರುವುದು ಬಹಳ ಮುಖ್ಯ. ಸಮಾಜದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇದ್ದರೂ ನಿವಾರಿಸಿಕೊಂಡು ಸಮಾಜ ಒಂದಾಗಬೇಕು. ಒಗ್ಗಟ್ಟಿದ್ದರೆ ಇತರೆ ಸಮುದಾಯಗಳು ನಮ್ಮನ್ನು ಗೌರವದಿಂದ ಕಾಣುತ್ತವೆ ಎಂದರು.

ಸಮಾಜದ ಮುಖಂಡರಾದ ರಮೇಶ ಮಡಿವಾಳ, ಅರ್ಜುನ ಮಡಿವಾಳ, ಸುರೇಶ ಮಡಿವಾಳ, ಸಂಗಪ್ಪ ಮಡಿವಾಳ, ಮಾರುತಿ ಮಡಿವಾಳ, ಶುಭಾಸ ಮಡಿವಾಳ, ಮಡಿವಾಳಪ್ಪ ಮಡಿವಾಳ. ಶ್ರೀನಿವಾಸ ಮಡಿವಾಳ, ಚನ್ನಪ್ಪ ಮಡಿವಾಳ, ವಿಜಯ ಮಡಿವಾಳ, ಮಲ್ಲು ಮಡಿವಾಳ, ಕಲ್ಲು ಪರೀಟ, ಮಹಾಲಿಂಗ ಪರೀಟ, ರವಿ ಮಡಿವಾಳ, ಸಂತೋಷ ಮಡಿವಾಳ, ಚನ್ನು ಮಡಿವಾಳ, ಭೀಮಶಿ ನೇಗಿನಾಳ, ಶುಭಾಸ ಮಡಿವಾಳ, ಮಹಾನಿಂಗ ಮಡಿವಾಳ, ಮಹಾಲಿಂಗ ಮಡಿವಾಳ, ಸಿದ್ದಲಿಂಗ ಮಡಿವಾಳ, ನಾಗಪ್ಪ ಮಡಿವಾಳ ಸೇರಿದಂತೆ ಹಲವರು ಇದ್ದರು. ಸಂಗಪ್ಪ ಮಡಿವಾಳ ನಿರೂಪಿಸಿದರು ವಂದಿಸಿದರು.