ಮಹನೀಯರ ತತ್ವಾದರ್ಶಗಳು ಯುವಕರಿಗೆ ಸ್ಫೂರ್ತಿ ಆಗಲಿ

| Published : Sep 11 2024, 01:00 AM IST

ಸಾರಾಂಶ

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳಿಂದ ಬಂದಿರುವ ಸ್ವಾತಂತ್ರ್ಯಹದ ಬಗ್ಗೆ ನಮಗೆಲ್ಲ ಹೆಮ್ಮೆ ಇರಬೇಕು, ಮಹನೀಯರ ತತ್ವಾದರ್ಶಗಳು ಯುವಕರಿಗೆ ಸ್ಫೂರ್ತಿ ಆಗಲಿ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.

ಶಿಗ್ಗಾಂವಿ: ಸ್ವಾತಂತ್ರ‍್ಯ ಹೋರಾಟಗಾರರ ತ್ಯಾಗ, ಬಲಿದಾನಗಳಿಂದ ಬಂದಿರುವ ಸ್ವಾತಂತ್ರ‍್ಯದ ಬಗ್ಗೆ ನಮಗೆಲ್ಲ ಹೆಮ್ಮೆ ಇರಬೇಕು, ಮಹನೀಯರ ತತ್ವಾದರ್ಶಗಳು ಯುವಕರಿಗೆ ಸ್ಫೂರ್ತಿ ಆಗಲಿ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.ತಾಲೂಕಿನ ಕುನ್ನೂರ ಗ್ರಾಮದಲ್ಲಿ ಗಜಾನನ ಮಹೋತ್ಸವದ ಅಂಗವಾಗಿ ಭಗತ್ ಸಿಂಗ್ ಸೇವಾ ಸಂಸ್ಥೆಯಿಂದ ಆಯೋಜಿಸಲಾದ ಗ್ರಾಮದ ಸರ್ಕಾರಿ ಸೇವೆಯಲ್ಲಿ ಕಾರ್ಯನಿರತ ಮತ್ತು ಸೇವೆಗೈದವರಿಗೆ ಸೇವಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತಮಾಡಿದರು.ದೇಶ ಸದೃಢವಾದರೆ ನಾವೆಲ್ಲಾ ಸುರಕ್ಷಿತವಾಗಿರುತ್ತೇವೆ. ಆದ್ದರಿಂದ ನಮ್ಮಲ್ಲಿ ದೇಶಾಭಿಮಾನ ಇರಬೇಕು. ದೇಶ ಕಾಯುವ ಸೈನಿಕರಿಗೆ, ಅನ್ನ ನೀಡುವ ರೈತರಿಗೆ ಋಣಿಯಾಗಿರೋಣ ಎಂದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸೋಮಯ್ಯ ಹಿರೇಮಠ ವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್. ಹಿರೇಮಠ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಯುವಕರು ಒಗ್ಗಟ್ಟಾಗಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗುತ್ತಿರುವುದು ಖುಷಿ ವಿಚಾರ. ಯುವಕರು ದೇಶದ ಶಕ್ತಿ, ಅವರಲ್ಲಿ ಸೇವಾ ಮನೋಭಾವ ಬೆಳೆದರೆ ಗ್ರಾಮಗಳು ಪ್ರಗತಿಯತ್ತ ಸಾಗಲು ಸಹಕಾರಿ ಆಗಲಿವೆ ಎಂದರು.

ಯುವ ಮುಖಂಡ ಪ್ರತೀಕ ಕುಂದಗೋಳ ಅವರು ಮಾತನಾಡಿ, ಯುವಕರು ಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಮಹಾನ್ ವ್ಯಕ್ತಿಗಳನ್ನು, ದಾರ್ಶನಿಕರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಿ ಆರಾಧಿಸಬಾರದು. ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್, ಬಸವಣ್ಣ, ಕನಕದಾಸರು ನಮಗೆಲ್ಲ ಸ್ಫೂರ್ತಿ ಆಗಿದ್ದಾರೆ ಅವರು ದೇಶದ ಆಸ್ತಿ ಎಂದರು.ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎನ್.ಸಿ. ಪಾಟೀಲ, ಗಂಗಪ್ಪ ಹುಲ್ಲೂರ ಮಾತಮಾಡಿದರು.ಶಿಗ್ಗಾಂವ ಎಪಿಎಂಸಿ ಮಾಜಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ದೇವಣ್ಣಾ ಚಾಕಲಬ್ಬಿ, ಭಗತ್ ಸಿಂಗ್ ಸೇವಾ ಸಂಘದ ರಾಜ್ಯಾಧ್ಯಕ್ಷ ವಿಶಾಲ ಜಾಧವ್, ಜಿಪಂ ಮಾಜಿ ಸದಸ್ಯ ಎಂ.ಎನ್. ವೆಂಕೋಜಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಿಂಗಪ್ಪ ದೊಡ್ಡಮನಿ, ಸದಸ್ಯ ಬಸನಗೌಡ ಬ್ಯಾಹಟ್ಟಿ, ರಾಯಪ್ಪ ಸಾವಂತಣ್ಣವರ್, ಬುದ್ಧಪ್ಪ ಮೊರಬದ, ಮಾಬುಸಾಬ ಜಿಗಳೂರ, ಸುರೇಶಗೌಡ ಪಾಟೀಲ, ಷಣ್ಮೂಖಗೌಡ ಪಾಟೀಲ, ಈರಪ್ಪ ಗೋಣಿ, ಬಾಬುಲಾಲ್ ತಡಸ, ಮಹಾದೇವಪ್ಪ ಮಾಳೋಜನವರ ಸೇರಿದಂತೆ ಇತರರಿದ್ದರು.ಕಾರ್ಯಕ್ರಮದ ಸ್ವಾಗತವನ್ನು ಶಿವಾನಂದ ದೋಡ್ಡಮನಿ ನೆರವರಿಸಿದರು. ನಿರೂಪಣೆಯನ್ನು ಬಾಹುಬಲಿ ಸಾವಂತಣ್ಣವರ ನೆರವೇರಿಸಿದರು.