ದಾವಣಗೆರೆ : ಅಸೆಂಬ್ಲಿಯಲ್ಲಿ ಶಾಸಕಿಯರ ಸಂಖ್ಯೆ ಹೆಚ್ಚಾಗಲಿ: ಕಾಂಗ್ರೆಸ್‌ನ ಸೌಮ್ಯ ರೆಡ್ಡಿ

| Published : Jan 23 2025, 12:46 AM IST / Updated: Jan 23 2025, 02:11 PM IST

ದಾವಣಗೆರೆ : ಅಸೆಂಬ್ಲಿಯಲ್ಲಿ ಶಾಸಕಿಯರ ಸಂಖ್ಯೆ ಹೆಚ್ಚಾಗಲಿ: ಕಾಂಗ್ರೆಸ್‌ನ ಸೌಮ್ಯ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಶೇ.4 ಪ್ರಮಾಣಧಲ್ಲಿ ಕೇವಲ 10 ಜನ ಮಹಿಳಾ ಶಾಸಕಿಯರಷ್ಟೇ ಇದ್ದು, ಇದರ ಪ್ರಮಾಣ ಇನ್ನೂ ಹೆಚ್ಚಾಗಬೇಕಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ ಹೇಳಿದರು.

 ದಾವಣಗೆರೆ ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಶೇ.4 ಪ್ರಮಾಣಧಲ್ಲಿ ಕೇವಲ 10 ಜನ ಮಹಿಳಾ ಶಾಸಕಿಯರಷ್ಟೇ ಇದ್ದು, ಇದರ ಪ್ರಮಾಣ ಇನ್ನೂ ಹೆಚ್ಚಾಗಬೇಕಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ ಹೇಳಿದರು. 

ನಗರದ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಬುಧವಾರ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಈವರೆಗೂ ಸಿಗಬೇಕಾದ ಸೂಕ್ತ ಪ್ರಮಾಣದ ಸ್ಥಾನಮಾನ, ಪ್ರಾಧಾನ್ಯತೆ ಸಿಕ್ಕಿಲ್ಲ ಎಂದರು. ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಸದಸ್ಯತ್ವ ನೋಂದಣಿ ಮಾಡಿಸಬೇಕು. ಮಹಿಳಾ ಕಾಂಗ್ರೆಸ್ ಸದಸ್ಯತ್ವ ಹೆಚ್ಚಿಸುವುದರಿಂದ ಪಕ್ಷಕ್ಕೆ ಮತ್ತಷ್ಚು ಬಲ ಬರುತ್ತದೆ. ಅತೀ ಹೆಚ್ಚಿನ ಸಂಖ್ಯೆಯ ಸದಸ್ಯತ್ವ ನೋಂದಣಿ ಮಾಡಿಸಿದವರಿಗೂ ಪಕ್ಷದ ಜಿಲ್ಲಾ, ರಾಜ್ಯಮಟ್ಟದಲ್ಲಿ ಉತ್ತಮ ಸ್ಥಾನಮಾನಗಳು ಸಿಗಲಿದೆ ಎಂದು ತಿಳಿಸಿದರು. 

ಆನ್‌ಲೈನ್ ಮೂಲಕ 4 ತಿಂಗಳಿನಿಂದ ಸದಸ್ಯತ್ವ ನೋಂದಣಿ ಆರಂಭಿಸಲಾಗಿದೆ. ವೆಬ್‌ಸೈಟ್ ಮೂಲಕ ಸದಸ್ಯತ್ವ ಪಡೆಯಬೇಕ. ಪ್ರತಿ ಬೂತ್‌ನಲ್ಲಿ ಕನಿಷ್ಠ 5 ಜನರ ಸದಸ್ಯತ್ವ ನೋಂದಣಿ ಮಾಡಿಸಬೇಕು. ಇದರಿಂದ ನೇರ ಮಾಹಿತಿ ಸಿಗುತ್ತದೆ. ಸದಸ್ಯತ್ವ ನೋಂದಣಿ ಜತೆಗೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಮಹಿಳೆಯರ ಧ್ವನಿಯಾಗಿ ಅತೀ ಹೆಚ್ಚು ಜವಾಬ್ಧಾರಿಯಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು. 

ಸದಸ್ಯತ್ವ ನೋಂದಣಿಗೆ ಹೋದಾಗ ಬೀದಿ ದೀಪ, ಕುಡಿಯುವ ನೀರು, ಚರಂಡಿ, ಒಳ ಚರಂಡಿ ಸಮಸ್ಯೆ ಇದೆಯೆಂದು, ನಿಮ್ಮದೇ ಸರ್ಕಾರವಿದ್ದು, ಕೆಲಸ ಮಾಡಿಸಿಕೊಡುವಂತೆ ಜನರು ಕೇಳಿದಾಗ ಸಂಬಂಧಿಸಿದವರ ಗಮನಕ್ಕೆ ತಂದು, ಕೆಲಸ ಮಾಡಿಸಿ. ಅದರಿಂದ ಜನರಿಗೆ ವಿಶ್ವಾಸವೂ ಬರುತ್ತದೆ. ನಿಮ್ಮ ನಾಯಕತ್ವವೂ ಬೆಳೆಯುತ್ತದೆ. ಅತೀ ಮುಂದುವರಿದ ಅಮೇರಿಕಾದಲ್ಲಿಯೇ ಬಹಳ ಕಾಲ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಇಂದಿಗೂ ಮಹಿಳಾ ಅಧ್ಯಕ್ಷರನ್ನು ಆ ದೇಶ ಕಂಡಿಲ್ಲ ಎಂದು ತಿಳಿಸಿದರು. 

ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಪುರುಷರಷ್ಟೇ ಮಹಿಳೆಯರೂ ಸಮರ್ಥರು. ರಾಜಕೀಯ ಕ್ಷೇತ್ರದಲ್ಲೂ ಸಮಾನ ಅವಕಾಶ ಸದ್ಭಳಕೆ ಮಾಡಿಕೊಳ್ಳಬೇಕು. ಸೌಮ್ಯರೆಡ್ಡಿ ನಾಯಕತ್ವದಲ್ಲಿ ಸಂಘಟಿತರಾಗಿ ಪಕ್ಷಕ್ಕೆ ಬಲ ತುಂಬುವ ಕೆಲಸವನ್ನು ಮಾಡಬೇಕು. ನಮ್ಮ ಸರ್ಕಾರವು ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ವರವಾಗಿವೆ ಎಂದರು. 

ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, ದಾವಣಗೆರೆ ಪ್ರಥಮ ಮಹಿಳಾ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸಂಸದರಿಗೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದು ತಿಳಿಸಿದರು. 

ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ, ಮಾಜಿ ಮೇಯರ್ ಅನಿತಾ ಬಾಯಿ ಮಾಲತೇಶ ಅಧ್ಯಕ್ಷತೆ ವಹಿಸಿದ್ದರ. ಮಾಜಿ ಶಾಸಕ ಎಸ್.ರಾಮಪ್ಪ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಧಾ ಇಟ್ಟಿಗುಡಿ ಮಂಜುನಾಥ, ಮೀನಾಕ್ಷಿ ಜಗದೀಶ, ಸವಿತಾ ಹುಲ್ಮನಿ ಗಣೇಶ, ಮುಖಂಡರಾದ ನಂದಿಗಾವಿ ಶ್ರೀನಿವಾಸ, ಶುಭಮಂಗಳ, ಮಂಗಳಮ್ಮ, ಕವಿತಾ ಚಂದ್ರಶೇಖರ ಇತರರು ಇದ್ದರು.

 ಜಾತಿ, ಮತ, ಧರ್ಮ, ಲಿಂಗಭೇದವಿಲ್ಲದೇ ಒಳ್ಳೆಯ ಕೆಲಸ ಮಾಡುವಂತಹ ಪಕ್ಷವೆಂದರೆ ಅದು ಕಾಂಗ್ರೆಸ್‌. ನಮ್ಮ ಪಕ್ಷದ ಪಂಚ ಗ್ಯಾರಂಟಿ ಯೋಜನೆಗಳೇ ಇದಕ್ಕೆ ಸಾಕ್ಷಿ. ಮಹಿಳೆಯರು ಸ್ವಾವಲಂಬಿಯಾಗಿ ಬಾಳಲೆಂಬ ಉದ್ದೇಶದಿಂದ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆ 1.23 ಕೋಟಿ ಮಹಿಳೆಯರಿಗೆ ನೆರವಾಗಿದೆ. ಅನೇಕರು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆಗಳು ನೆರವಾಗಿವೆ. 

ಸೌಮ್ಯ ರೆಡ್ಡಿ, ರಾಜ್ಯಾಧ್ಯಕ್ಷೆ, ಮಹಿಳಾ ಘಟಕ, ಕೆಪಿಸಿಸಿ.