ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲಿ: ಬಿರಾದಾರ

| Published : Feb 07 2024, 01:45 AM IST

ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲಿ: ಬಿರಾದಾರ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಪಾಲಕರು ಉತ್ತಮ ಸಂಸ್ಕಾರ ಕಲಿಸಬೇಕು. ಅಂದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಜೇವರ್ಗಿ

ಮಕ್ಕಳ ಭವಿಷ್ಯ ಬೇರೆಯವರ ಕೈಯಲ್ಲಿ ಇರುವುದಿಲ್ಲ. ಸ್ವಂತ ತಂದೆ-ತಾಯಿ ಹಾಗೂ ಶಿಕ್ಷಕರ ಕೈಯಲ್ಲಿ ಇರುತ್ತದೆ. ಈ ಮೂರು ಜನರ ಒಳ್ಳೆಯ ಮಾರ್ಗದರ್ಶನವೇ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಾಹಿತಿ ಸಾಹೇಬಗೌಡ ಬಿರಾದಾರ ಹೇಳಿದರು.

ಅವರು, ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ನಡೆದ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ರಾಷ್ಟ್ರೀಯ ಸೇವಾಯೋಜನೆಯ ಘಟಕದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಪಾಲಕರು ಉತ್ತಮ ಸಂಸ್ಕಾರ ಕಲಿಸಬೇಕು. ಅಂದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ತಂದೆ, ತಾಯಿ ಹಾಗೂ ಶಿಕ್ಷಕರ ಪಾತ್ರ ಬಹಳ ಮಹತ್ತರವಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮನಸ್ಸಲ್ಲಿ ಭವಿಷ್ಯದ ಬಗ್ಗೆ ದೊಡ್ಡದಾದ ಕನಸು ಕಾಣುವಂತೆ ಸಲಹೆ ಹಾಗೂ ಮಾರ್ಗದರ್ಶನ ನೀಡುವುದು ಬಹಳ ಪ್ರಮುಖವಾಗಿರುತ್ತದೆ ಎಂದರು.

ಇಪ್ಪತೈದು ವರ್ಷಗಳ ಕಾಲ ನೀವು ಕಷ್ಟಪಟ್ಟು ವಿದ್ಯಾಭ್ಯಾಸ ಮುಗಿಸಿ ನಿಮ್ಮ ಜೀವನಕ್ಕೆ ದಾರಿ ಮಾಡಿಕೊಳ್ಳುವ ಕೆಲಸ ಮಾಡಿದಾಗ ಮುಂಬರು 75 ವರ್ಷಗಳ ಕಾಲ ನೀವು ಸುಖಕರವಾಗಿ ಜೀವನ ಸಾಗಿಸಬಹುದು ಎಂದು ಬಿರಾದಾರ ಹೇಳಿದರು.

ಕಾರ್ಯಕ್ರಮದಲ್ಲಿ ಸುದೀಂದ್ರ ವಕೀಲ್, ರವೀಂದ್ರ ಕೋಳಕೂರ, ಪ್ರಾಚಾರ್‍ಯ ಬಸವರಾಜ ಬಿರಾಜದಾರ, ಶಿವಶರಣಪ್ಪ ಅಧ್ಯಕ್ಷತೆ ವಹಿಸಿದ್ದರು. ಸೋಮಶೇಖರ ಪಾಟೀಲ್, ಡಾ.ಗೋವಿಂದರಾಜ ಆಲ್ದಾಳ, ಪಿಡ್ಡಪ್ಪ ಚನ್ನೂರ, ಶ್ರೀಧರ ಖಾಲೆಕಾರ, ಡಾ. ಈರಣ್ಣ ಹವಾಲ್ದಾರ್, ಡಾ.ದೇವಿಂದ್ರ ಗುಡೂರ, ಡಾ.ಸಿದ್ದಲಿಂಗಪ್ಪ ನಂದೆಪ್ಪನವರ, ಪ್ರಶಾಂತ ಹಾಸು, ವೀಣಾ ಆಲಗೂಡಕರ್, ಸುರೇಶ, ಸೌಂದರ್ಯ ಸೇರಿದಂತೆ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.