ಹಮಾಲರು ಸಮಾಜದ ಉನ್ನತಸ್ಥಾನ ಪಡೆಯುವಂತಾಗಲಿ: ಹನುಮಂತಪ್ಪ

| Published : Feb 02 2024, 01:03 AM IST

ಹಮಾಲರು ಸಮಾಜದ ಉನ್ನತಸ್ಥಾನ ಪಡೆಯುವಂತಾಗಲಿ: ಹನುಮಂತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಮಸ್ಕಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ಮಸ್ಕಿ ತಾಲೂಕು ಘಟಕದಿಂದ ಹಮಾಲಿ ಕಾರ್ಮಿಕರಿಗೆ ಗುರುತಿನ ಚೀಟಿಗಳ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಸ್ಕಿ

ಮಳೆ, ಗಾಳಿ. ಬಿಸಿಲನ್ನೂ ಲೆಕ್ಕಿಸದೇ ಶ್ರಮಪಡುವ ಕಾರ್ಮಿಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಮೂಲಕ ಅವರಿಗೆ ಸಮಾಜದಲ್ಲಿ ಉನ್ನತ ಸ್ಥಾನಗಳು ದೊರೆಯುವಂತೆ ಮಾಡಬೇಕು ಎಂದು ಮಸ್ಕಿ ಗ್ರಾಮೀಣ ಘಟಕದ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ಮಸ್ಕಿ ತಾಲೂಕು ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಹಮಾಲ ರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ದಿನವಿಡೀ ಮೈಮುರಿದು ದುಡಿಯುವ ಶ್ರಮಿಕ ವರ್ಗದ ಹಮಾಲರು ಕಾಯಕ ಮಾಡುವ ಮೂಲಕ ಸುಂದರವಾದ ಬದುಕು ಕಟ್ಟಿಕೊಳ್ಳಬೇಕು ಎಂದರು.

ನಂತರ ಮಾತನಾಡಿದ ದೇವರಾಜ್ ಮಡಿವಾಳರ, ಈಗಾಗಲೇ 350 ಮಂದಿ ಅರ್ಹ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಹಮಾಲಿ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಲಾಗುವುದು ಎಂದು ಭರವಸೆಕೊಟ್ಟರು.

ಈ ಸಂದರ್ಭದಲ್ಲಿ ಎಐಸಿಸಿಟಿಯು ಅಧ್ಯಕ್ಷ ಚಾಂದ್ಸಾಬ ಬೆಳ್ಳಿಗನೂರು, ಎಐಎಆರ್‌ಎಲ್‌ಎ ಜಿಲ್ಲಾ ಸಂಘದ ಅಧ್ಯಕ್ಷ ಗಂಗಪ್ಪ ತೊರಣದನ್ನಿ, ಮಹಿಬೂಬಸಾಬ್ ಮುದ್ದಾಪೂರು, ಹನುಮಂತ ದಿನ್ನಿಸಮುದ್ರ, ಬಸವರಾಜ, ರಾಮಣ್ಣ ಹಾಗೂ ಕಟ್ಟಡ ಕಾರ್ಮಿಕರ ಸಂಘಟನೆಯ ಪದಾಧಿಕಾರಿಗಳು ಭಾಗಿಯಾಗಿದ್ದರು.