ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಸಾರ್ವಜನಿಕರು ತಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕ ಬೋರಲಿಂಗಯ್ಯ ಹೇಳಿದರು.ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ವಸ್ತುಗಳನ್ನು ಮಾಲೀಕರುಗಳಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದುಶ್ಚಟಗಳಿಗೆ ಬಲಿಯಾಗಿರುವವರು ಅತಿ ಆಸೆ ಹೊಂದಿರುವವರು ಕಳ್ಳತನ ಮಾಡಲು ಮುಂದಾಗುತ್ತಾರೆ, ಜೊತೆಗೆ ಇದು ಗಡಿ ಜಿಲ್ಲೆಯಾಗಿರುವುದರಿಂದ ಹೊರ ರಾಜ್ಯದವರು ಬಂದು ಕಳ್ಳತನ ಮಾಡುತ್ತಾರೆ ಆದ್ದರಿಂದ ಸಾರ್ವಜನಿಕರು ತಮ್ಮ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.
ಮನೆ ಬೀಗ ಹಾಕಿಕೊಂಡು ಹೊರಗೆ ಹೋಗುವಾಗ ಜಾಗೃತಿ ವಹಿಸಬೇಕು, ಮನೆ ಮಕ್ಕಳ ಚಲನವನಗಳು ಮತ್ತು ಅವರ ವೆಚ್ಚದ ಬಗ್ಗೆ ಗಮನ ನೀಡಬೇಕು. ಕಳೆದ ಒಂದು ವರ್ಷದಲ್ಲಿ ಜನವರಿ-೨೦೨೪ ರಿಂದ ಫೆಬ್ರವರಿ-೨೦೨೫ ರವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ೮೮ ಪ್ರಕರಣಗಳನ್ನು ಪತ್ತೆ ಹಚ್ಚಿ ಒಟ್ಟು ೧,೫೬,೯೨,೬೩೬ ರು. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿರುವುದು ಶ್ಲಾಘನೀಯ. ಜಿಲ್ಲಾ ಪೊಲೀಸ್ ವತಿಯಿಂದ ಪತ್ತೆ ಪ್ರಕರಣಗಳಲ್ಲಿ ಭಾಗಿಯಾದ ಸಿಬ್ಬಂದಿಗೆ ನಗದು ಬಹುಮಾನ ನೀಡಲಾಗುತ್ತಿದ್ದು, ದಕ್ಷಿಣ ವಲಯ ಪೊಲೀಸ್ ವಿಭಾಗದಿಂದಲು ಒಂದೆರಡು ಪ್ರಕರಣಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದರು.ಎಲ್ಲಾ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ, ಜಿಲ್ಲೆಯಲ್ಲಿ ಶೇ.೩೦ರಿಂದ ೪೦ರಷ್ಟು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಇದು ಅಭಿನಂದನೀಯ ಮುಂದೆ ಪತ್ತೆಯಾಗದಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ಎಂದು ಸಿಬ್ಬಂದಿಗೆ ಹೇಳಿದರು. ಇದೇ ಸಂದರ್ಭದಲ್ಲಿ ವಾರಸುದಾರರಿಗೆ ವಸ್ತುಗಳನ್ನು ನೀಡಿದರು.
₹1.58 ಕೋಟಿ ಮೌಲ್ಯದ ಸ್ವತ್ತುಗಳು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ ಅವರ ಮಾರ್ಗದರ್ಶನದಲ್ಲಿ ಜನವರಿ-೨೦೨೪ ಮಾಹೆಯಿಂದ ಫೆಬ್ರವರಿ-೨೦೨೫ ರವರೆಗೆ ಜಿಲ್ಲಾ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಮಾಣಿಕ ಪ್ರಯತ್ನದಿಂದ ೮೮ ಪ್ರಕರಣಗಳಲ್ಲಿ ಒಟ್ಟು ೧,೫೬,೯೨,೬೩೬ ರು. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಾಪರ್ಟಿ ರಿಟರ್ನ್ ಪೆರೇಡ್‌ನಲ್ಲಿ ಪ್ರದರ್ಶಿಸಿ ನಂತರ ಪಿರ್ಯಾದುದಾರರಿಗೆ/ವಾರಸುದಾರರಿಗೆ ಮರಳಿ ನೀಡಲಾಯಿತು. ಚಿನ್ನದ ಆಭರಣಗಳು ಹಾಗೂ ಬೆಳ್ಳಿ ವಸ್ತುಗಳು ಕಳುವು ೪೦ ಪ್ರಕರಣಗಳು, ೨ ಕೆ.ಜಿ. ೨೫ ಗ್ರಾಂ ಚಿನ್ನ, ೪ ಕೆ.ಜಿ, ೩೯೦ ಗ್ರಾಂ ಬೆಳ್ಳಿ ಪದಾರ್ಥಗಳ ಮೌಲ್ಯ ೯೬,೫೬, ೬೧೬, ಮತ್ತು ೫,೭೭,೩೦೦ ರು. ದ್ವಿಚಕ್ರ ವಾಹನಗಳ ಪ್ರಕರಣ ೨೮, ಇದರ ಮೌಲ್ಯ ೯,೬೧,೦೦೦, ತ್ರಿಚಕ್ರ ವಾಹನಗಳ ಪ್ರಕರಣ ೪, ಮೌಲ್ಯ ೫,೨೦,೦೦೦ ರು., ನಾಲ್ಕು ಚಕ್ರ ಮತ್ತು ೬ ಚಕ್ರದ ವಾಹನಗಳ ಪ್ರಕರಣ ೫ ಮೌಲ್ಯ ೨೩,೩೫,೦೦೦ ರೂ. ನಗದು ಹಣ ಪ್ರಕರಣ ೫ ಮೌಲ್ಯ ೪,೪೭,೭೭೦ ರು. ಗ್ಯಾಸ್ ಸಿಲೆಂಡರ್, ಟಿ.ವಿ, ಜನರೇಟರ್, ಮೊಬೈಲ್, ರೇಷ್ಮೆ ಸೀರೆ, ಡೀಸೆಲ್, ತೆಂಗಿನ ಕಾಯಿ, ಅಲ್ಯುಮೀನಿಯಂ ವೈರ್, ಲಾರಿ ಟೈರುಗಳು, ಬ್ಯಾಟರಿಗಳು, ಹಸುಗಳು, ಪ್ಲೇಟ್‌ಗಳು, ಟ್ರ್ಯಾಕ್ಟರ್ ಬಿಡಿ ಭಾಗಗಳ ಕಳ್ಳತನ ಪ್ರಕರಣ, ೮ ಮೌಲ್ಯ ೧೧,೯೪,೯೫೦ ರೂ. ಒಟ್ಟು ೧,೫೬,೯೨,೬೩೬ ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು, ಕಾರ್ಯಕ್ರಮದಲ್ಲಿ ವಾರಸುದಾರರಿಗೆ ಮರಳಿ ನೀಡಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಡಿವೈಎಸ್ಪಿ ಲಕ್ಷ್ಮಯ್ಯ, ಧರ್ಮೇಂದ್ರ ಹಾಗೂ ವಿವಿಧ ಠಾಣೆಯ ಸಿಬ್ಬಂದಿ ಇದ್ದರು.
೫ಸಿಎಚ್‌ಎನ್೧೫ಸಿಎಚ್‌ಎನ್೨ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ವಸ್ತುಗಳನ್ನು ಮಾಲಿಕರಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕ ಬೋರಲಿಂಗಯ್ಯ ವಶಪಡಿಸಿಕೊಂಡಿರುವ ವಸ್ತುಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು, ಎಸ್ಪಿ ಡಾ. ಬಿ.ಟಿ. ಕವಿತಾ ಹಾಗೂ ಸಿಬ್ಬಂದಿ ಇದ್ದಾರೆ.ಜಿಲ್ಲಾ ಪೊಲೀಸರ ಕಾರ್ಯ ಶ್ಲಾಘನೀಯಗುಂಡ್ಕುಪೇಟೆಯ ಬಳಿ ರೆಸಾರ್ಟ್ ಬಳಿ ಅಪಹರಣವಾಗಿದ್ದ ದಂಪತಿ ಹಾಗೂ ಮಗು ಪ್ರಕರಣದಲ್ಲಿ ೨೪ ಗಂಟೆಯಲ್ಲಿ ಪ್ರಕರಣವನ್ನು ಭೇದಿಸಿದ ಜಿಲ್ಲಾ ಪೊಲೀಸರ ಕಾರ್ಯ ಶ್ಲಾಘನೀಯ ಎಂದು ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕ ಬೋರಲಿಂಗಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್ಪಿ ಡಾ.ಬಿ.ಟಿ.ಕವಿತ ಸಿಬ್ಬಂದಿಯೊಂದಿಗೆ ತಕ್ಷಣ ಪ್ರಕರಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಂಡವನ್ನು ಕಾರ್ಯಪ್ರವೃತ್ತರಾಗಿ ೨೪ ಗಂಟೆಯೊಳಗೆ ಪ್ರಕಣವನ್ನು ಭೇದಿಸಿರುವುದು ಅತ್ಯಂತ ಹೆಮ್ಮೆಯ ವಿಷಯ ಇದಕ್ಕಾಗಿ ಶ್ರಮಿಸಿದ ಎಲ್ಲಾ ಸಿಬ್ಬಂದಿಗೆ ಅಭಿನಂದಿಸುವುದಾಗಿ ತಿಳಿಸಿದರು.