ಸದಾಶಿವ ಆಯೋಗದ ವರದಿ ಜಾರಿಯಾಗಲಿ

| Published : Dec 19 2023, 01:45 AM IST

ಸಾರಾಂಶ

ಮಾದಿಗ ಸಮುದಾಯ ಎಲ್ಲಾ ರಂಗದಲ್ಲಿ ಅಭಿವೃದ್ಧಿಯಾಗಲು ಸದಾಶಿವ ಆಯೋಗ ಜಾರಿಯಾಗಬೇಕು. ಸರ್ಕಾರಗಳ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮುದಾಯ ಜನತೆ ಜಾಗೃತರಾಗಬೇಕು ಎಂದು ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಹೇಳಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ಮಾದಿಗ ಸಮುದಾಯ ಎಲ್ಲಾ ರಂಗದಲ್ಲಿ ಅಭಿವೃದ್ಧಿಯಾಗಲು ಸದಾಶಿವ ಆಯೋಗ ಜಾರಿಯಾಗಬೇಕು. ಸರ್ಕಾರಗಳ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮುದಾಯ ಜನತೆ ಜಾಗೃತರಾಗಬೇಕು ಎಂದು ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸದಾಶಿವ ಆಯೋಗದ ಜಾರಿಗಾಗಿ ಹಾಗೂ ಮಾದಿಗ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಸೋಮವಾರ ಹಮ್ಮಿಕೊಂಡಿದ್ದ ಮಾದಿಗರ ಆತ್ಮಗೌರವ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸದಾಶಿವ ಆಯೋಗ ಜಾರಿಗೆ ಆಗಬೇಕು ಎಂಬ ನಮ್ಮ ಕೂಗಿಗೆ ಕಳೆದ ಬಿಜೆಪಿ ನೇತೃತ್ವದ ಸರ್ಕಾರ ಒತ್ತು ನೀಡಿತ್ತು. ಅದು ಜಾರಿಗೆ ಬರಬೇಕು. ಸಮುದಾಯದ ಹೋರಾಟದ ಫಲವಾಗಿ ನಮ್ಮ ಬೇಡಿಕೆಗಳ ಈಡೇರಿಕಗಳಿಗೆ ಬಲ ಬಂದಂತಾಗಿದೆ. ಸಮುದಾಯದ ಹಿತಕ್ಕಾಗಿ ನಾವೆಲ್ಲರೂ ಬದ್ಧರಾಗೋಣ ಎಂದರು.

ರಾಜ್ಯ ತಂಡದ ಮುಖಂಡರಾದ ಬಲ್ಲಾಹುಣಿಸಿ ರಾಮಣ್ಣ ಹಾಗೂ ಡಾ. ಶಿವಪ್ರಸಾದ ಮಾತನಾಡಿ, ಸರ್ಕಾರಗಳ ಸೌಲಭ್ಯಗಳನ್ನು ಪಡೆಯಲು ಜಾಗೃತರಾಗಬೇಕು. ಸದಾಶಿವ ಆಯೋಗದ ಜಾರಿಗಾಗಿ ರಾಜ್ಯದ ಎಲ್ಲಾ ಭಾಗಗಳಲ್ಲಿ ಸಮಾವೇಶಗಳು ಆಯೋಜನೆ ಮಾಡಲಾಗುತ್ತಿದ್ದು, ಹೋರಾಟದ ಮುಂದುವರಿಸಬೇಕು ಎಂದರು.

ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಹಕ್ಕುಗಳನ್ನು ಹಾಗೂ ಸೌಲಭ್ಯಗಳನ್ನು ಪಡೆಯಲು ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ, ಹೋರಾಟ ಮುಂದುವರಿಸಬೇಕಾಗಿದೆ. ಈ ಸಮಾವೇಶ ನಮ್ಮ ಬೇಡಿಕೆಗಳ ಈಡೇರಿಕೆಗಳಿಗೆ ಸ್ಪೂರ್ತಿಯಾಗಲಿ ಎಂದರು.

ಮಾದಿಗ ಸಮಾಜದ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಉಡಚಪ್ಪ ಮಾಳಗಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.

ಲಿಡ್ಕರ್ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಸಮಾವೇಶದ ಅಧ್ಯಕ್ಷತೆ ವಹಿಸಿ, ನಮ್ಮ ಸಮುದಾಯಗಳ ಬೇಡಕೆಗಳಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬರುತ್ತಿದ್ದೇವೆ. ಎಲ್ಲರನ್ನು ಗೆಲ್ಲಿಸಲು ನಾವು ಬೇಕು, ಅದಕ್ಕಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು. ಸದಾಶಿವ ಆಯೋಗ ಎಲ್ಲರ ಹೋರಾಟದ ಫಲವಾಗಿ ಜಾರಿಯಾಗಲಿ. ನಾವೆಲ್ಲರೂ ಇನ್ನೂ ಹೆಚ್ಚು ಹೋರಾಟ ಮುಂದುವರಿಸಬೇಕು ಎಂದು ಹೇಳಿದರು.

ಪ್ರಮುಖರಾದ ಮಹಾಲಕ್ಷ್ಮೀ ಕಂದರಿ, ನಾಗಲಿಂಗ ಮೊಳೆಕೊಪ್ಪ ಮಾತನಾಡಿದರು.ನೀಲಕಂಠಪ್ಪ ಕುಸನೂರ, ಕರಿಯಪ್ಪ ಕಟ್ಟಿಮನಿ, ಮಾಲತೇಶ ಕರ್ಜಗಿ, ಸುರೇಶ ಆಸಾದಿ, ಜಗದೀಶ ಡೊಳ್ಳೇಶ್ವರ, ಮಂಜಪ್ಪ ಮರೋಳ, ಯಲ್ಲಪ್ಪ ಮಾಸೂರ, ಮಾರುತಿ ಸೊಟ್ಟಪ್ಪನವರ, ಚಂದ್ರಪ್ಪ ಹರಿಜನ, ಶಾರದಾ ದೊಡ್ಡಮನಿ, ಸುಭಾಸ ಮಾಳಗಿ, ಹನಮಂತಪ್ಪ ಸಿ.ಡಿ., ಜಗದೀಶ ಹರಿಜನ, ನಾಗರಾಜ ಬಣಕಾರ, ಸಂತೋಷ ಗುಡ್ಡಪ್ಪನವರ, ಪಾರ್ವತಿ ಗೊಣಿಬಸಮ್ಮನವರ, ರಾಜು ಭರಡಿ, ಹನಮಂತಪ್ಪ ಹೌಂಶಿ, ಮಹೇಶಪ್ಪ ಶ್ಯಾಕರ, ಮಂಜು ದೊಡ್ಡಮರೆಮ್ಮನವರ, ಬಸವರಾಜ ಕಾಳೆ, ದೇವರಾಜ ಹರಿಜನ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸಮುದಾಯದವರು ಪಾಲ್ಗೊಂಡಿದ್ದರು.

ಸವಿತಾ ಮಣ್ಣಮ್ಮನವರ ಸ್ವಾಗತಿಸಿದರು. ನಿವೃತ್ತ ಉಪನಿರ್ದೇಶಕ ಎಂ. ಆಂಜನೇಯ ಕಾರ್ಯಕ್ರಮ ನಿರೂಪಿಸಿದರು.