ಸೇವೆ ನಿರಂತರವಾಗಿರಲಿ: ಚೇತನ್ ಗುರೂಜಿ ಸಲಹೆ

| Published : Feb 03 2024, 01:45 AM IST

ಸಾರಾಂಶ

ಸೇವಾ ಮನೋಭಾವ ನಿರಂತರವಾಗಿ ನಡೆಯಬೇಕು ಎಂದು ಯೋಗ ಗುರು ಚೇತನ್ ಗುರೂಜಿ ಹೇಳಿದರು. ಆಲೂರು ಪಟ್ಟಣದಲ್ಲಿ ಲಯನ್ಸ್ ಕ್ಲಬ್ ಸೇವಾ ಸಂಸ್ಥೆ, ಆಲೂರಿನ ಮಾತೃಶ್ರೀ ಕ್ಲಿನಿಕ್, ಹಾಸನದ ಸಿಎನ್‌ಐ ರೆಡ್‌ಫರ್ನ್ ಮೆಮೊರಿಯಲ್ ಆಸ್ಪತ್ರೆ, ಮಹಾಲಕ್ಷ್ಮಿ ಮಂಜಪ್ಪ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರಕನ್ನಡಪ್ರಭ ವಾರ್ತೆ ಆಲೂರು

ಸೇವಾ ಮನೋಭಾವ ನಿರಂತರವಾಗಿ ನಡೆಯಬೇಕು ಎಂದು ಯೋಗ ಗುರು ಚೇತನ್ ಗುರೂಜಿ ಹೇಳಿದರು.

ಪಟ್ಟಣದಲ್ಲಿ ಲಯನ್ಸ್ ಕ್ಲಬ್ ಸೇವಾ ಸಂಸ್ಥೆ, ಆಲೂರಿನ ಮಾತೃಶ್ರೀ ಕ್ಲಿನಿಕ್, ಹಾಸನದ ಸಿಎನ್‌ಐ ರೆಡ್‌ಫರ್ನ್ ಮೆಮೊರಿಯಲ್ ಆಸ್ಪತ್ರೆ, ಮಹಾಲಕ್ಷ್ಮಿ ಮಂಜಪ್ಪ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ಪರ್ಧಾತ್ಮಕ ಸಮಾಜದಲ್ಲಿ ಯಾವುದೇ ಫಲಾಪೇಕ್ಷೆಗಳಿಲ್ಲದೆ ಸೃಜನಶೀಲ, ಕ್ರಿಯಾಶೀಲ, ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಸಂಘಟನೆ ತೊಡಗಿಸಿಕೊಂಡು, ಜನಪರ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

ಲಯನ್ಸ್ ಸಂಸ್ಥೆ ಅಧ್ಯಕ್ಷ ಎಚ್. ಜಿ. ಪ್ರವೀಣ್, ಸಂಸ್ಥೆ ವತಿಯಿಂದ ತಾಲೂಕಿನಲ್ಲಿ ಹಲವು ವರ್ಷಗಳಿಂದ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಶಾಲಾ ಪರಿಕರ, ಬಸ್ ತಂಗುದಾಣ, ಅಸಹಾಯಕ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಪರ ಕೆಲಸ ಮಾಡುತ್ತಿದೆ ಎಂದರು.

ಶಿಬಿರದಲ್ಲಿ ಹೃದಯ ರೋಗ, ಮಧುಮೇಹ, ಪ್ರಸೂತಿ ಮತ್ತು ಸ್ತ್ರೀರೋಗ ತಪಾಸಣೆ ನೇತ್ರ ತಪಾಸಣೆ, ಕೀಲು ಮತ್ತು ಮೂಳೆ ತಪಾಸಣೆ, ಚರ್ಮರೋಗ ತಪಾಸಣೆ, ಮಕ್ಕಳ ತಪಾಸಣೆ ಹೀಗೆ ಹತ್ತು ಹಲವು ಕಾಯಿಲೆಗಳಿಗೆ ಸಂಬಂಧಿಸಿದಂತೆ ಸುಮಾರು ಐನೂರಕ್ಕೂ ಹೆಚ್ಚು ಜನರು ಉಚಿತ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಇದೇ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.

ಹಾಸನ ನಗರದ ಮಿಷನ್ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ.ವಿಶಾಲಕ್ಷಿ, ಲಯನ್ಸ್ ಸೇವಾ ಸಂಸ್ಥೆ ಕಾರ್ಯದರ್ಶಿ ಆನಂದ್, ಖಜಾಂಚಿ ಗಿರೀಶ್, ಉಪಾಧ್ಯಕ್ಷ ಬಿ.ಮಂಜೇಗೌಡ, ಸದಸ್ಯರಾದ ನಟರಾಜ್, ರಘು ಪಾಳ್ಯ, ಡಾ.ಯಶವಂತ್ ನಿಲುವಾಗಿಲು, ಡಾ.ಚಿರಂತ್, ಡಾ.ಉಮೇಶ್, ಡಾ.ರಚನಾ, ಡಾ. ಉಮೇಶ್, ಡಾ.ಪವಿತ್ರಶ್ರೀ ಭಾಗವಹಿಸಿದ್ದರು.ಆಲೂರು ಲಯನ್ಸ್ ಕ್ಲಬ್ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನೆರವೇರಿಸಲಾಯಿತು. ಹಾಸನ ನಗರದ ಮಿಷನ್ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ.ವಿಶಾಲಕ್ಷಿ, ಲಯನ್ಸ್ ಸೇವಾ ಸಂಸ್ಥೆ ಕಾರ್ಯದರ್ಶಿ ಆನಂದ್, ಖಜಾಂಚಿ ಗಿರೀಶ್, ಉಪಾಧ್ಯಕ್ಷ ಬಿ.ಮಂಜೇಗೌಡ, ಸದಸ್ಯರಾದ ನಟರಾಜ್, ರಘು ಪಾಳ್ಯ, ಡಾ.ಯಶವಂತ್ ನಿಲುವಾಗಿಲು ಇತರರಿದ್ದರು.