ಶಕ್ತಿ ಯೋಜನೆ ವಿಶೇಷಚೇತನರಿಗೂ ವಿಸ್ತರಿಸಲಿ

| Published : Jan 01 2025, 12:01 AM IST

ಸಾರಾಂಶ

2025 ನೇ ಸಾಲಿನ ವಿಕಲಚೇತನರಿಗೆ ನವೀಕರಣ ಮತ್ತು ನೂತನ ಬಸ್‌ಪಾಸ್‌ಗಳಿಗೆ ರೂ 660 ಶುಲ್ಕವನ್ನು ನಿಗದಿಪಡಿಸಿದ್ದಾರೆ. ಇದನ್ನು ಡಿ.ಡಿ ರೂಪದಲ್ಲಿ ನೀಡಬೇಕೆಂದು ಹಾಗೂ ಪೋರ್ಟಲ್ ಅರ್ಜಿಗಳನ್ನು ಸೇವಾ ಸಿಂಧು ಮುಖಾಂತರ ಅರ್ಜಿಗಳನ್ನು ಹಾಕಬೇಕೆಂದು ಸೂಚಿಸಲಾಗಿದೆ. ಆದರೆ ಉಚಿತ ಪಾಸ್‌ ನೀಡಬೇಕೆಂಬುದು ವಿಕಲಚೇತನರ ಆಗ್ರಹ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕರ್ನಾಟಕ ರಾಜ್ಯ ಸರ್ಕಾರ ವತಿಯಿಂದ 5 ಯೋಜನೆಗಳಲ್ಲಿ ಒಂದು ಯೋಜನೆಯಾದ ಶಕ್ತಿ ಯೋಜನೆ ಆಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತವಾಗಿ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಸುಮಾರು 15 ಲಕ್ಷ ವಿಕಲಚೇತನರಿದ್ದರೂ ಸರ್ಕಾರಕ್ಕೆ ಕಣ್ಣು ಕಾಣುಸುತ್ತಿಲ್ಲವೇ, ಈ ವಿಕಲಚೇತನರಿಗೆ ಕರ್ನಾಟಕ ರಾಜ್ಯದಲ್ಲಿ ಉಚಿತ ಬಸ್ ಪಾಸ್ ನೀಡಬೇಕೆಂಬ ಜ್ಞಾನವಿಲ್ಲವೇ ಎಂದು ಕರ್ನಾಟಕ ವಿಕಲ ಚೇತನರ ಒಕ್ಕೂಟ(ಕೆವಿಓ)ದ ಕಿರಣ್ ನಾಯಕ್ ಪ್ರಶ್ನಿಸಿದರು.ವಿಶೇಷಚೇತನರಿಗೆ ಬಸ್‌ ಟಿಕೆಟ್‌

ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಕರ್ನಾಟಕ ವಿಕಲ ಚೇತನರ ಓಕ್ಕೂಟದಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2025 ನೇ ಸಾಲಿನ ವಿಕಲಚೇತನರಿಗೆ ನವೀಕರಣ ಮತ್ತು ನೂತನ ಬಸ್‌ಪಾಸ್‌ಗಳಿಗೆ ರೂ 660 ಶುಲ್ಕವನ್ನು ನಿಗದಿಪಡಿಸಿದ್ದಾರೆ. ಇದನ್ನು ಡಿ.ಡಿ ರೂಪದಲ್ಲಿ ನೀಡಬೇಕೆಂದು ಹಾಗೂ ಪೋರ್ಟಲ್ ಅರ್ಜಿಗಳನ್ನು ಸೇವಾ ಸಿಂಧು ಮುಖಾಂತರ ಅರ್ಜಿಗಳನ್ನು ಹಾಕಬೇಕೆಂದು ತಿಳಿಸಿದ್ದಾರೆ ಎಂದು ಆಕ್ರೋಷ ವ್ಯೆಕ್ತ ಪಡಿಸಿದರು.ನಮ್ಮನ್ನು ಆಳುವವರಿಗೆ ಕನಿಷ್ಠ ಜ್ಞಾನವಿರಬೇಕು. ಜನ ಪ್ರತಿನಿಧಿಗಳೆ ನಾವು ಸಹಾ ಈ ದೇಶದ ಪ್ರಜೆಗಳೇ, ನಮಗೂ ಈ ನೆಲದಲ್ಲಿಜೆಲ್ಲರಂತೆ ಜೀವಿಸಲು ಸಂವಿಧಾನ ಬದ್ದವಾದ ಹಕ್ಕುಗಳಿವೆ. ನಾವು ನಿಮಗೆ ಮತ ಹಾಕಿದ್ದೇವೆ. ಬೇರೆಯವರಿಗೆ ಉಚಿತ ನೀಡಿದ್ದಕ್ಕೆ ನಮಗೇನೂ ಸಿಟ್ಟು ಅಸೂಯೆ ಇಲ್ಲಾ. ನಾವು ವಿಶೇಷ ಚೇತನರಾಗಿ ಹುಟ್ಟಿರುವುದು ನಮ್ಮ ತಪ್ಪಲ್ಲ. ವಿಶೇಷ ಚೇತನರಿಗೆ ಸಿಗಬೇಖಾದ ಸೌಲಭ್ಯಗಳಿಗೆ ಕತ್ತರಿ ಹಾಕಬೇಡಿ ಎಂದು ಮನವಿ ಮಾಡಿದರು.

10ರಂದು ಸಾಂಕೇತಿಕ ಧರಣಿ

ಬೇರೆಯವರಿಗೆ ನೀಡಿದಂತೆ ನಮಗೂ ಬಸ್ ಪಾಸ್ ಉಚಿತವಾಗಿ ನೀಡಿ, ನಾವು 7 ನೂರು ರೂಗಳ ಖರ್ಚು ಮಾಡಿ ಬಸ್ ಪಾಸ್ ಪಡೆಯ ಬೇಕಾ? ಎಕೆ ಉಚಿತವಾಗಿ ನೀಡಲು ನಿಮ್ಮ ಸರ್ಕಾರದ ಬೋಕ್ಕಸದಲ್ಲಿ ನಮಗೆ ಮಾತ್ರ ಹಣವಿಲ್ಲವೇ, ಇದೆಲ್ಲಾ ಗಮನದಲ್ಲಿಟ್ಟುಕೊಂಡು ಕರ್ನಾಟಕ ವಿಕಲಚೇತನದ ಒಕ್ಕೂಟದ (ಕೆ.ವಿ.ಓ) ಮುಖಾಂತರ ಜನವರಿ 2 ರಂದು ಗುರುವಾರ ದಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯ ಮುಂಬಾಗ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿದೆ. ವಿವಿಧ ತಾಲ್ಲೂಕುಗಳಿಂದ ಎಲ್ಲಾ ವಿಕಲಚೇತನರು ಅವರ ಕುಟುಂಬದವರು ಹಾಗೂ ಸ್ನೇಹಿತರು ಎಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿಕಲಚೇತನದ ಒಕ್ಕೂಟದ ಪದಾಧಿಕಾರಿಗಳಾದ ಕೆ.ಜಿ.ಸುಭ್ರಮಣಿ, ವೆಂಕಟಶಿವಪ್ಪ, ಕೆ.ಸಿ.ಮಮತಾ.ಸೌಭಾಗ್ಯಮ್ಮ, ನರಸಿಂಹಮೂರ್ತಿ, ಚಂದ್ರಶೇಖರ್,ಹೆಚ್.ಎಸ್.ಕೃಷ್ಣಪ್ಪ, ಮಂಜುನಾಥ್,ಮುರಳಿಧರ್, ಮತ್ತಿತರರು ಇದ್ದರು.