ಮಠಗಳ ರಕ್ಷಣೆಗೆ ಸಮಾಜವು ಆದ್ಯತೆ ನೀಡಲಿ

| Published : Oct 18 2024, 01:21 AM IST

ಸಾರಾಂಶ

ಸೊರಬ: ಮಠ, ಮಂದಿರಗಳ ಸಮಾಜಮುಖಿ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿದಾಗ ಮಠ ಮತ್ತು ಸಮಾಜದ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಶಿವಮೊಗ್ಗ ಬೆಕ್ಕಿನಕಲ್ಮಠದ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಮಹಾಸ್ವಾಮಿಗಳು ನುಡಿದರು

ಸೊರಬ: ಮಠ, ಮಂದಿರಗಳ ಸಮಾಜಮುಖಿ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿದಾಗ ಮಠ ಮತ್ತು ಸಮಾಜದ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಶಿವಮೊಗ್ಗ ಬೆಕ್ಕಿನಕಲ್ಮಠದ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಮಹಾಸ್ವಾಮಿಗಳು ನುಡಿದರು.

ತಾಲ್ಲೂಕಿನ ಗೊಗ್ಗೆಹಳ್ಳಿ ಪಂಚಮಠ ಸಂಸ್ಥಾನದಲ್ಲಿ ಲಿಂ.ನಿಜಗುಣ ಶಿವಾಚಾರ್ಯ ಮಹಾಸ್ವಾಮಿಗಳ ೧೮೫ ಪುಣ್ಯಸ್ಮರಣೆ ಸಮಾರಂಭದಲ್ಲಿ ಲಿಂ.ವೇ.ಪಂಡಿತ ಸೋಮನಾಥ ಸ್ವಾಮಿಗಳ ಪುತ್ಥಳಿ ಅನಾವರಣಗೊಳಿಸಿ, ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಠಗಳನ್ನು ಕಾಪಾಡಿಕೊಳ್ಳದಿದ್ದರೆ ಸಮಾಜ ಉಳಿಯದು. ಮಠಗಳ ರಕ್ಷಣೆಗೆ ಸಮಾಜವು ಆದ್ಯತೆ ನೀಡಬೇಕು. ಅಂದಿನ ಕಾಲದಲ್ಲಿ ಗೊಗ್ಗೆಹಳ್ಳಿ ಶ್ರೀಮಠ ಹಾಗೂ ಶಿಕಾರಿಪುರ ತಾಲ್ಲೂಕಿನ ಶಿವಯೋಗಿ ಆಶ್ರಮದ ಉಳಿವಿಗೆ ಹಾನಗಲ್ ಕುಮಾರ ಸ್ವಾಮಿಗಳು ಸಹಾಯ ಹಸ್ತ ನೀಡಿದ್ದರು ಎಂದು ತಿಳಿಸಿದರು. ಗೊಗ್ಗೆಹಳ್ಳಿ ಮಠದ ಲಿಂಗೈಕ್ಯ ಶ್ರೀ ಶತಾಯುಷಿ ಮ.ಘ.ಚ. ನಿಜಗುಣ ಶಿವಾಚಾರ್ಯ ಶ್ರೀಗಳು ಮಾತೃ ಹೃದಯದವರಾಗಿದ್ದರು. ಪಂಚ ಮಠಗಳಿಗೂ ಅವರಿಗೂ ಅವಿನಾವಭಾವ ಸಂಬಂಧವಿದೆ. ಸರ್ವಧರ್ಮದ ಸಮಾನತೆ ಸಾರಿದವರು. ಪಂಚ ಮಠಗಳ ಸ್ಥಾಪನೆಗೆ ಮುಂದಾಗಿದ್ದರು. ವೇ. ಪಂಡಿತ ಸೋಮನಾಥ ಶಾಸ್ತ್ರಿಗಳನ್ನು ಇಲ್ಲಿ ನೆಲೆಗೊಳಿಸಿ ಹೈದರಾಬಾದ್ ನಿಜಾಮರ ಆಡಳಿತವಿದ್ದ ಸಂದರ್ಭದಲ್ಲಿ ಹಾನಗಲ್ ಶ್ರೀಗಳು, ಸೊಮನಾಥ ಶಾಸ್ತ್ರಿಗಳು ನ್ಯಾಯಾಲಯದಲ್ಲಿ ವಾದ ಮಾಡಿ ಶ್ರೀಮಠಗಳನ್ನು ಉಳಿಸಿಕೊಂಡಿದ್ದರು ಎಂದು ಸ್ಮರಿಸಿದರು. ಈ ಸಂದರ್ಭದಲ್ಲಿ ಸಾಲೂರು ಮಠದ ಶ್ರೀ ಗುರುಲಿಂಗ ಜಂಗಮ ಮಹಾಸ್ವಾಮೀಜಿ, ತೊಗರ್ಸಿ ಪಂಚಮಠದ ಶ್ರೀಗಳು, ಗೊಗ್ಗಹಳ್ಳಿ ಶ್ರೀ ಮಠದ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಡಾ.ಮಹಾಂತ ಮಹಾಸ್ವಾಮೀಜಿ, ಜಡೆ ಹಿರೇಮಠದ ಘನಬಸವ ಅಮರೇಶ್ವರ ಶಿವಾಚಾರ್ಯರು, ತೊಗರ್ಸಿಯ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಚಿನ್ನ ವೀರ ದೇಶೀಕೇಂದ್ರ ಸ್ವಾಮೀಜಿ, ಶಿರಾಳಕೊಪ್ಪ ಸಿದ್ದೇಶ್ವರ ಸ್ವಾಮೀಜಿ, ಗೇಋಕೊಪ್ಪ ಶಿವಲಿಂಗ ಸ್ವಾಮೀಜಿ, ಗುರುಬಸವ ಮಹಾಸ್ವಾಮಿ ಕ್ಯಾಸನೂರು, ಶ್ರೀಪತಿ ಪಂಡಿತಾರಾಧ್ಯ ಮಹಾಸ್ವಾಮಿ ಕೋಣಂದೂರು, ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ, ಸದಾಶಿವ ಮಹಾಸ್ವಾಮಿ ಮೂಡಿ. ಶಿವಸವ ಮಹಾಸ್ವಾಮಿ ಅಕ್ಕಿಆಲೂರು, ಗುರುಮಹೇಶ್ವರ ಶಿವಾಚಾರ್ಯಗಳು ಕೂಡಲ, ಪ್ರಭು ಸ್ವಾಮಿ ಗುತ್ತಲ, ಅಭಿನವ ಚನ್ನಬಸವ ಮಹಾಸ್ವಾಮಿ ಮೂಲೆಗದ್ದೆ, ಷಡಾಕ್ಷರಿ ಶರಣರು ಹುಬ್ಬಳ್ಳಿ ಮತ್ತು ಶ್ರೀಕಂಠ ಚೌಕಿಮಠ ನವದೆಹಲಿ ಸಾನಿಧ್ಯ ವಹಿಸಿದ್ದರು.

ಉದ್ಯಮಿಗಳಾದ ನಾಗರಾಜ ಗುತ್ತಿ, ಚಂದ್ರಶೇಖರ ನಿಜಗುಣ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತಾದಿಗಳು ಪಾಲ್ಗೊಂಡಿದ್ದರು.