ವಿದ್ಯಾರ್ಥಿಗಳಲ್ಲಿ ಮಾತೃಭಾಷೆ ಬಗ್ಗೆ ಅಭಿಮಾನವಿರಲಿ

| Published : Mar 16 2024, 01:58 AM IST

ಸಾರಾಂಶ

ಸರಿಯಾದ ಕ್ರಮದಲ್ಲಿ ಕಲಿಯುವುದೇ ವಿಜ್ಞಾನ. ಏಕಾಗ್ರತೆಯನ್ನು ಸಾಧಿಸಿದರೆ ಜೀವನದಲ್ಲಿ ಯಶಸ್ಸು ಸಾಧ್ಯ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ವಿದ್ಯಾರ್ಥಿಗಳಲ್ಲಿ ಮಾತೃಭಾಷೆ ಬಗ್ಗೆ ಪ್ರೀತಿ ಇರಲಿ, ತಾಯಿ ಮೇಲಿರುವಷ್ಟೇ ಅಭಿಮಾನ ಕನ್ನಡ ಭಾಷೆ ಮೇಲಿಟ್ಟು ಭಾಷೆ ಮೇಲೆ ಪ್ರಭುತ್ವ ಸಾಧಿಸಿ ಎಂದು ರಬಕವಿ - ಬನಹಟ್ಟಿ ಹಿರಿಯ ಸಾಹಿತಿ, ಸಂಗೀತ ತಜ್ಞ ಸಿದ್ಧರಾಜ ಪೂಜಾರಿ ಹೇಳಿದರು.

ಅವರು ಪೂರ್ಣ ಪ್ರಜ್ಞ ಶಿಕ್ಷಣ ಸಂಸ್ಥೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಪ್ರಶ್ನಿಸುವ ಮತ್ತು ವೈಜ್ಞಾನಿಕ ಪ್ರಜ್ಞೆ ಬೆಳೆಸಿಕೊಳ್ಳಿ. ಸರಿಯಾದ ಕ್ರಮದಲ್ಲಿ ಕಲಿಯುವುದೇ ವಿಜ್ಞಾನ. ಏಕಾಗ್ರತೆಯನ್ನು ಸಾಧಿಸಿದರೆ ಜೀವನದಲ್ಲಿ ಯಶಸ್ಸು ಸಾಧ್ಯ. ಹಣದಿಂದ ಮಾತ್ರ ಆನಂದ ಸಿಗುವುದಿಲ್ಲ. ಕಲೆ, ಸಂಗೀತ, ಸಾಹಿತ್ಯದಿಂದ ಅಪರಿಮಿತ ಆನಂದ ಸಿಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿ ಬೆಳೆಸಿಕೊಳ್ಳಿ. ಇದರಿಂದ ನಿಮ್ಮ ಭವಿಷ್ಯಕ್ಕೆ ಅನುಕೂಲವಾಗುತ್ತದೆ. ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಶ್ರೇಷ್ಠ ಮನುಷ್ಯರಾಗಿ ಬಾಳಿ. ಓದುವುದರ ಮೇಲೆ ಪ್ರೀತಿ ಇರಲಿ ಎಂದು ಕಿವಿ ಮಾತು ಹೇಳಿದರು.

ಈ ವೇಳೆ ಶಿಕ್ಷಣ ಸಂಯೋಜಕ ಬಿ.ಎಂ. ಹಳೇಮನಿ ಮಾತನಾಡಿ, ತಂದೆ - ತಾಯಿ, ಗುರು ಹಿರಿಯರನ್ನು ಗೌರವಿಸಿ, ಸಂಸ್ಥೆಯ ಬೆಳವಣಿಗೆಯಲ್ಲಿ ನಿಮ್ಮ ಪಾತ್ರ ಮುಖ್ಯ. ಉತ್ತಮವಾಗಿ ಅಭ್ಯಾಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಎಸ್. ಎಂ. ನದಾಫ, ಎಸ್.ಎಸ್. ಪರಮಶೆಟ್ಟಿ, ಡಾ. ಶ್ರೀಶೈಲ ಮಾದನ್ನವರ, ಸಂಸ್ಥೆ ಅಧ್ಯಕ್ಷ ಸಿದ್ದಪ್ಪ ಮೇಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರಾಮದಾಸ ಸಿಂಘನ, ಖಜಾಂಚಿ, ಎಸ್.ಕೆ. ಕರಡಿ, ಬಿ.ಆರ್‌. ಬಾಗಲಕೋಟ, ಎ.ಕೆ. ಕಾಡದೇವರ, ಎಸ್.ಬಿ. ಹಟ್ಟಿ, ಎಸ್. ಎಂ. ನದಾಫ್, ಎ.ಎಚ್. ಬಾಗೆನ್ನವರ, ಎಸ್. ಬಿ. ಬಸನ್ನವರ, ಎಸ್.ಸಿ. ಬಾಗಲಕೋಟ, ಎಸ್.ಎಂ. ಹಾಡಕರ, ಎಲ್.ಪಿ. ಗಂಟೆನ್ನವರ, ಎಫ್.ಜೆ ಬಾಗವಾನ, ಮಿರಗನ್ನವರ, ಎ.ಆರ್‌. ನಾಗರಾಳ, ಎಸ್.ಬಿ. ಪೆಂಡಾರಿ, ಎಸ್. ಬಿ. ಉಳವಿಮಠ, ಎಸ್. ಎಂ. ಚತುರಬಾನ ಸೇರಿದಂತೆ ಅನೇಕರು ಇದ್ದರು.