ಸಾರಾಂಶ
- ಜಿಎಂ ವಿ.ವಿ.ಯಲ್ಲಿ 3 ದಿನಗಳ ವಿಚಾರ ಸಂಕಿರಣದಲ್ಲಿ ಡಾ. ಒ.ಪಿ.ಗೋಯಲ್- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ವಿದ್ಯಾರ್ಥಿಗಳು ಕಲಿಕೆಯ ಜವಾಬ್ದಾರಿ ತೆಗೆದುಕೊಳ್ಳುವ ಮೂಲಕ, ಸ್ವಯಂಪ್ರೇರಣೆ, ಸಮಯ ನಿರ್ವಹಣೆ ಮತ್ತು ಪರಿಶ್ರಮದಂತಹ ನಿರ್ಣಾಯಕ ಜೀವನಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಆ ಮೂಲಕ ಭವಿಷ್ಯದ ಯಶಸ್ಸನ್ನು ರೂಪಿಸಿಕೊಳ್ಳಬೇಕು ಎಂದು ಬೆಂಗಳೂರಿನ ಎಕ್ಸ್ ಹೆಡ್, ಬೋಶ್ ಇಂಡಿಯಾ ಫೌಂಡೇಷನ್ ಸಿಎಸ್‌ಆರ್ ಅಂಡ್ ಸ್ಕಿಲ್ ಡೆವಲಪ್‌ಮೆಂಟ್ ಕನ್ಸಲ್ಟೆಂಟ್ ಡಾ. ಒ.ಪಿ.ಗೋಯಲ್ ಹೇಳಿದರು.ನಗರದ ಜಿ.ಎಂ. ಹಾಲಮ್ಮ ಸಭಾಂಗಣದಲ್ಲಿ ಬುಧವಾರ ಜಿಎಂ ವಿಶ್ವವಿದ್ಯಾಲಯದ ಎಂಬಿಎ ವಿಭಾಗದಿಂದ ಆಯೋಜಿಸಿದ ವ್ಯಾಪಾರ ಶಿಕ್ಷಣ, ಭವಿಷ್ಯವನ್ನು ರೂಪಿಸುವುದು ಎಂಬ ವಿಷಯದ ಕುರಿತ ಅಂತರ ರಾಷ್ಟ್ರೀಯ ವಿಚಾರ ಸಂಕಿರಣದ 2ನೇ ದಿನದ ಕಾರ್ಯಕ್ರಮದಲ್ಲಿ ಅವರು "ಕೌಶಲ್ಯ ಆಧಾರಿತ ಪಠ್ಯಕ್ರಮ ಮತ್ತು ವಿದ್ಯಾರ್ಥಿ ಕೇಂದ್ರಿತ ಕಲಿಕೆ " ಕುರಿತು ಮಾತನಾಡಿದರು.
21ನೇ ಶತಮಾನದ ಜಾಗತಿಕ ಹಳಿಯಲ್ಲಿ ಯಶಸ್ಸು ಕೇವಲ ವಿಷಯ ನಿರ್ದಿಷ್ಟ ಜ್ಞಾನಕ್ಕಿಂತ ಹೆಚ್ಚಿನದನ್ನು ಬಯಸುತ್ತದೆ. ಪ್ರಸ್ತುತ ಕೇಂದ್ರೀಕೃತ ಆಗಿರುವ ಕೌಶಲ್ಯ ಆಧಾರಿತ ಪಠ್ಯಕ್ರಮವು ಅಂತರ್ ಸಮರ್ಪಿತ ಪ್ರಪಂಚವನ್ನು ನ್ಯಾವಿಗೇಟ್ ಮಾಡಲು ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಮತ್ತು ವಿಮರ್ಶಾತ್ಮಕ ಚಿಂತನೆ, ಸಾಂಸ್ಕೃತಿಕ ತಿಳಿವಳಿಕೆ ಸಹಾನುಭೂತಿ ಮತ್ತು ಸಹಯೋಗದಂತಹ ಸಾಮರ್ಥ್ಯಗಳನ್ನು ಪಡೆಯಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಲಂಡನ್ (ಯುಕೆ)ನ ಲಂಡನ್ ಸೌತ್ ಬ್ಯಾಂಕ್ ಯೂನಿವರ್ಸಿಟಿಯ ಫ್ಯಾಕಲ್ಟಿ ಆಫ್ ಬಿಜಿನೆಸ್ ಕಂಪ್ಯೂಟಿಂಗ್ ಅಂಡ್ ಇನ್ಫಾರ್ ಮೇಷನ್ ಮ್ಯಾನೇಜ್ ಮೆಂಟ್‌ನ ಡಾ.ಲೆಬರ್ನ್ ರೋಸ್, ಲಂಡನ್ (ಯುಕೆ)ಯ ಲಂಡನ್ ಸೌತ್ ಬ್ಯಾಂಕ್ ಯೂನಿವರ್ಸಿಟಿಯ ಫ್ಯಾಕಲ್ಟಿ ಆಫ್ ಬಿಜಿನೆಸ್ ಕಂಪ್ಯೂಟಿಂಗ್ ಅಂಡ್ ಇನ್ಫಾರ್ ಮೇಷನ್ ಮ್ಯಾನೇಜ್ ಮೆಂಟ್‌ನ ಸಹಾಯಕ ಪ್ರಾಧ್ಯಾಪಕ ಡಾ.ಲಾರೆನ್ಸ್ ಫಿಶೆರ್, ಜಿಎಂ ವಿವಿ ಕುಲಪತಿ ಡಾ.ಎಸ್.ಆರ್.ಶಂಕಪಾಲ್, ಉಪ ಕುಲಪತಿ ಡಾ.ಡಿ.ಮಹೇಶ್ವರಪ್ಪ, ರಿಜಿಸ್ಟ್ರಾರ್ ಡಾ. ಬಿ.ಎಸ್. ಸುನೀಲ್ ಕುಮಾರ, ನಿರ್ದೇಶಕ ಡಾ.ಬಕ್ಕಪ್ಪ, ಜಿಎಂಐಟಿ ಪ್ರಾಚಾರ್ಯ ಡಾ. ಎಂ.ಬಿ. ಸಂಜಯ್ ಪಾಂಡೆ, ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಎಸ್. ಬಸವರಾಜಪ್ಪ, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
- - - -15ಕೆಡಿವಿಜಿ34ಃ:ದಾವಣಗೆರೆಯ ಜಿಎಂಐಟಿ ಕಾಲೇಜಿನಲ್ಲಿ ನಡೆದ 2ನೇ ದಿನದ ಅಂತರ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಡಾ. ಒ.ಪಿ. ಗೋಯಲ್ ಇತರರು ಇದ್ದರು.