ಮಕ್ಕಳಲ್ಲಿ ಸಂಸ್ಕಾರ ಮೌಲ್ಯ ತುಂಬುವ ಜತೆಗೆ ಅವರಲ್ಲಿ ಅಡಗಿರುವ ಪ್ರತಿಭೆ ಹೊರ ಹಾಕಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ
ಕುಕನೂರು: ಮಕ್ಕಳ ಪ್ರತಿಭೆ ವಿಶ್ವಮಟ್ಟದಲ್ಲಿ ಮಿಂಚುವಂತೆ ಪ್ರೋತ್ಸಾಹ ನೀಡಬೇಕು ಎಂದು ತಾಪಂ ಮಾಜಿ ಉಪಾಧ್ಯಕ್ಷ ಪ್ರಭು ಆಚಾರ ಹೇಳಿದರು.
ತಾಲೂಕಿನ ಮಸಬಹಂಚಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮಕ್ಕಳ ಮನಸ್ಸು ಮುಗ್ದತೆಯ ಪ್ರತಿರೂಪ. ಮಕ್ಕಳ ಮನಸ್ಸಿನಲ್ಲಿ ಆಸಕ್ತಿಯನ್ನು ಪಾಲಕರು, ಶಿಕ್ಷಕರು ಗಮನಿಸಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗೆ ಸೂಕ್ತ ತರಬೇತಿ ನೀಡಿ ಅವರಲ್ಲಿ ಆಸಕ್ತಿ ಬೆಳೆಸಬೇಕು. ಮಕ್ಕಳ ಪ್ರತಿಭೆಗೆ ಸದಾ ಬೆನ್ನೆಲುವಾಗಿ ನಿಂತಾಗ ಆ ಪ್ರತಿಭೆ ಜಗದಗಲ ಹರಡಲು ಸಾಧ್ಯ ಎಂದರು.ಶಿಕ್ಷಕ ಶಿವಪ್ಪ ಈಬೇರಿ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ ಮೌಲ್ಯ ತುಂಬುವ ಜತೆಗೆ ಅವರಲ್ಲಿ ಅಡಗಿರುವ ಪ್ರತಿಭೆ ಹೊರ ಹಾಕಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ. ಹಿಂದೆ ಜೋಗುಳ ಪದ, ಹಂತಿ ಪದ, ಜನಪದ, ನಾಟಕ, ಪ್ರವಚನಗಳ ಮೂಲಕ ಆಗಿನ ಪೀಳಿಗೆಗೆ ಸಂಸ್ಕಾರ ನೀಡುತ್ತಿದ್ದರು. ಅದರಂತೆ ಇಂದಿನ ಪೀಳಿಗೆಗೆ ಸಂಸ್ಕಾರ ಮೌಲ್ಯ ನೀಡಲು ಸರ್ಕಾರ ನೂತನ ಯೋಜನೆಯೊಂದನ್ನು ನೀಡಿ ಅದಕ್ಕೆ ಪ್ರತಿಭಾ ಕಾರಂಜಿ ಎಂದು ಹೆಸರಿಸುವ ಮೂಲಕ ಮಕ್ಕಳಲ್ಲಿ ಸಂಸ್ಕಾರ ನೀಡಲು ಮುಂದಾಯಿತು ಇದರಿಂದ ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆ ಹೊರ ಹಾಕಲು ಸಹಕಾರಿಯಾಗಿದೆ ಎಂದರು.
ಉಪನ್ಯಾಸಕ ಗವಿಸಿದ್ದಯ್ಯ ಹಿರೇಮಠ ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಪ್ರತಿಭೆಗಳು ಕಾರಂಜಿಯಂತೆ ಚಿಮ್ಮಿ ಹೊರಸೂಸುತ್ತವೆ ಎಂದರು.ಎಸ್ ಡಿಎಂಸಿ ಅಧ್ಯಕ್ಷ ನಿಂಗಪ್ಪ ಗೋಡೆಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಸಹ ಪಠ್ಯೆತರ ಚಟುವಟಿಕೆಯೊಂದಿಗೆ ಬೆರೆತಾಗ ಮಕ್ಕಲ್ಲಿ ಸ್ಪರ್ಧಾ ಮನೋಭಾವ ಬೆಳೆಯುವದರೊಂದಿಗೆ ತಾಲೂಕು, ಜಿಲ್ಲಾ ಮಟ್ಟ, ವಿಭಾಗ ಮಟ್ಟ, ರಾಜ್ಯ ಮಟ್ಟದಲ್ಲಿ ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆ ಹೊರ ಹಾಕುವ ಜತೆಗೆ ಶಾಲೆ, ಪಾಲಕರ ಕೀರ್ತಿ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು.
ಗ್ರಾಪಂ ಅಧ್ಯಕ್ಷ ಹನುಮಂತಪ್ಪ ಬನ್ನಿಕೊಪ್ಪ ಮಾತನಾಡಿ, ಪ್ರತಿಭಾ ಕಾರಂಜಿಯ ಉದ್ದೇಶ ಹಾಗೂ ಇದರಿಂದ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನ ಕುರಿತು ಸವಿಸ್ತಾರವಾಗಿ ಮಾತನಾಡಿದರು.ತಾಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೇಶ ಸಬರದ, ಪ್ರೌಢ ಶಾಲೆ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಸುರೇಶ ಅಬ್ಬಿಗೇರಿ, ಬಸವರಾಜ ಅಂಗಡಿ, ಉಮೇಶ ಕಂಬಳಿ, ಪ್ರಭು ಕುಕನೂರು, ತಿಪ್ಪಣ್ಣ ಚಲವಾದಿ, ಮಹಾವೀರ ಕಲ್ಬಾವಿ, ಶರಣಪ್ಪ ಮುದ್ಲಾಪೂರ, ನಿಂಗಾರೆಡ್ಡಿ ಕರಮುಡಿ, ಶಿವಕುಮಾರ ಮುತ್ತಾಳ, ಅಬ್ದುಲ್ ಖದೀರ, ಎಸ್ ಡಿ ಎಂಸಿ ಅಧ್ಯಕ್ಷ ಗುರುಸಂಗಯ್ಯ ಹಿರೇಮಠ, ಯಮನಪ್ಪ ಈಳಗೇರ, ಭೀರಪ್ಪ ಕರಿಗಾರ, ಚನ್ನಮ್ಮ ಈಳಗೇರ, ಸುವರ್ಣಮ್ಮ ಗಾಂಜಿ, ರವಿ ಭಜೆಂತ್ರಿ, ಮಾರುತಿ ತಳವಾರ, ಶಿವಪ್ಪ ಕಳ್ಳಿ ಇತರರಿದ್ದರು.