ಅನಧಿಕೃ ಆಸ್ತಿಗಳ ಖಾತಾ ಅಭಿಯಾನ ಸದ್ಬಳಕೆಯಾಗಲಿ

| Published : Mar 06 2025, 12:36 AM IST

ಸಾರಾಂಶ

ಪುರಸಭಾ ವ್ಯಾಪ್ತಿಯ ವಾರ್ಡುಗಳ ಬಡಾವಣೆಗಳಲ್ಲಿ ಅಧಿಕೃತ ಬಡಾವಣೆಗಳಲ್ಲಿ ಇ ಖಾತೆ ಹಾಗೂ ಅನಧಿಕೃತ ಬಡಾವಣೆಗಳಲ್ಲಿ ಬಿ ಖಾತೆ ಮಾಡಿಕೊಡಲಾಗುವುದು. ನಿವೇಶನ ಹೊಂದಿರುವ ಫಲಾನುಭವಿಗಳು ಈ ಖಾತೆ ಅಥವಾ ಬಿ ಖಾತೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಿದ ೭ ದಿನಗಳಲ್ಲಿ ಆದೇಶ ಪ್ರತಿ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ಮಾಲೂರು

ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳ ನಿವೇಶನಗಳ ಖಾತೆ ಸಮಸ್ಯೆ ಪರಿಹರಿಸಲು ಸರ್ಕಾರ ಒಂದೇ ಬಾರಿ ಅಧಿಕೃತ ಬಡಾವಣೆಗಳ ಇ ಖಾತೆ ಅನಧಿಕೃತ ಬಡಾವಣೆಗಳ ಬಿ ಖಾತಾ ಅಭಿಯಾನ ಆರಂಭಿಸಲಾಗಿದೆ. ಪಟ್ಟಣದ ಪುರಸಭೆ ಆವರಣದಲ್ಲಿರುವ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರಂಗಮಂದಿರದಲ್ಲಿ ಮಾ.೫ ರಿಂದ ಮೇ ೧೦ರವರೆಗೆ ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಅರ್ಜಿಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಪುರಸಭಾ ಮುಖ್ಯ ಅಧಿಕಾರಿ ಎ.ಬಿ.ಪ್ರದೀಪ್ ಹೇಳಿದರು. ಪುರಸಭಾ ವ್ಯಾಪ್ತಿಯ ವಾರ್ಡುಗಳ ಬಡಾವಣೆಗಳಲ್ಲಿ ಅಧಿಕೃತ ಬಡಾವಣೆಗಳಲ್ಲಿ ಇ ಖಾತೆ ಹಾಗೂ ಅನಧಿಕೃತ ಬಡಾವಣೆಗಳಲ್ಲಿ ಬಿ ಖಾತೆ ಮಾಡಿಕೊಡಲಾಗುವುದು. ನಿವೇಶನ ಹೊಂದಿರುವ ಫಲಾನುಭವಿಗಳು ಈ ಖಾತೆ ಅಥವಾ ಬಿ ಖಾತೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಿದ ೭ ದಿನಗಳಲ್ಲಿ ಪುರಸಭೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಆದೇಶದ ಪ್ರತಿಯನ್ನು ನೀಡಲಿದೆ ಎಂದರು.

ದಾಖಲೆ ಸಹಿತ ಅರ್ಜಿ ಸಲ್ಲಿಸ

ಇ ಖಾತೆಗೆ ಸಂಬಂದಿಸಿದಂತೆ ಭೂ ಪರಿವರ್ತನೆ ನಿವೇಶನ, ನಗರ ಯೋಜನಾ ಪ್ರಾಧಿಕಾರ ಅನುಮೋದನೆ ಪತ್ರ, ಋಣಬಾರೆ ಪತ್ರ, ಸ್ವತ್ತಿನ ಹಾಗೂ ಮಾಲೀಕರ ಭಾವಚಿತ್ರ, ಸ್ವತ್ತಿನ ಕ್ರಯಪತ್ರ, ಆಧಾರ್ ಕಾರ್ಡ್ ನಕಲು, ೨೦೨೪-೨೫ನೇ ಸಾಲಿನ ವರೆಗೆ ತೆರಿಗೆ ಪಾವತಿ, ಬಿ-ಖಾತೆ ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸುವ ನೊಂದಾಯಿತ ಮಾರಾಟ ಪತ್ರ, ದಾನ ಪತ್ರ, ವಿಭಾಗ ಪತ್ರಗಳು, ೧೦.೦೯.೨೦೨೪ರಿಂದ ೨೦೨೪-೨೫ನೇ ಸಾಲಿನ ವರೆಗೆ ಆಸ್ತಿ ತೆರಿಗೆ ಋಣ ಬಾರೆ ದಾಖಲೆಗಳನ್ನು ಅರ್ಜಿ ಸಲ್ಲಿಸುವವರು ನೀಡಬೇಕಾಗಿದೆ ಎಂದರು.ಫಲಾನುಭವಿಗಳು ಅಭಿಯಾನದಡಿ ಅರ್ಜಿ ಸಲ್ಲಿಸಿ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿಕೊಟ್ಟಲ್ಲಿ ಬಿ ಖಾತೆ ಮಾಡಿಕೊಡಲಾಗುವುದು. ಈ ಅವಕಾಶವನ್ನು ಬಳಸಿಕೊಳ್ಳದಿದ್ದಲ್ಲಿ ನಿಮ್ಮ ನಿವೇಶನಕ್ಕೆ ಸಂಬಂಧಿಸಿದಂತೆ ವ್ಯವಹಾರಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.

ಪುರಸಭೆಯಿಂದ ಅಗತ್ಯ ಸೌಲಭ್ಯ

ಅನಧಿಕೃತ ಬಡಾವಣೆಗಳಲ್ಲಿ ಬಿ ಖಾತೆ ನೀಡಿದ ಮೇಲೆ ಪುರಸಭೆಯು ನೀರು ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲತ್ತುಗಳನ್ನು ಒದಗಿಸುವ ಜವಾಬ್ದಾರಿ ಹೆಚ್ಚಾಗುತ್ತದೆ. ಕೆಲವರು ಅನಧಿಕೃತ ಬಡಾವಣೆಗಳನ್ನು ನಿರ್ಮಿಸಿ ಆ ಬಡಾವಣೆಗಳಲ್ಲಿ ಯಾವುದೇ ರೀತಿಯ ಸವಲತ್ತುಗಳನ್ನು ಒದಗಿಸದೆ ನಿವೇಶನಗಳನ್ನು ಮಾರಿಕೊಂಡು ಹೋಗಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದರು.ಇ, ಬಿ ಖಾತಾ ಆಂದೋಲನವನ್ನು ಸರ್ಕಾರ ಕೈಗೊಂಡಿರುವುದರಿಂದ ನಾಗರಿಕರಿಗೆ ಪ್ರಯೋಜನವಾಗಲಿದೆ. ಪುರಸಭಾ ಸದಸ್ಯರು ಪುರಸಭಾ ಸಿಬ್ಬಂದಿಯೊಂದಿಗೆ ಕೈಜೋಡಿಸಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.