ಉಪ್ಪಾರ ಸಮಾಜ ಸಂಘಟಿತವಾಗಿ ಮುನ್ನಡೆಯಲಿ

| Published : Aug 12 2024, 12:47 AM IST

ಉಪ್ಪಾರ ಸಮಾಜ ಸಂಘಟಿತವಾಗಿ ಮುನ್ನಡೆಯಲಿ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಇತಿಹಾಸ ಹೊಂದಿರುವ ಉಪ್ಪಾರ ಸಮಾಜವು ಸಂಘಟಿತವಾಗಿ ಮುನ್ನಡೆಯುವುದರ ಮುಖಾಂತರ ಅಭಿವೃದ್ಧಿ ಸಾಧಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಎ.ವಸಂತಕುಮಾರ ತಿಳಿಸಿದರು.

ಇಲ್ಲಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾ ಭಗೀರಥ ಉಪ್ಪಾರ ಸಮಾಜ ಸಂಘದಿಂದ ಹಮ್ಮಿಕೊಂಡಿದ್ದ ಶ್ರೀ ಮಹಷರ್ಷಿ ಭಗೀರಥ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಉಪ್ಪಾರ ಸಮಾಜ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಸಮಾಜದ ಸಂಘಟಿತ ಪ್ರಯತ್ನದ ಕೊರತೆಯಿಂದ ಹಿಂದುಳಿದಿದೆ ಹಾಗೂ ಶೈಕ್ಷಣಿಕ ಪ್ರಗತಿಗೆ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರೋತ್ಸಾಹಿಸುವ ಕಾರ್ಯ ಅಗತ್ಯವಾಗಿದೆ ಎಂದರು.

ಈ ವೇಳೆ ಹೊಸದುರ್ಗದ ಪುರುಷೋತ್ತಮ ನಂದಪುರಿ ಸ್ವಾಮೀಜಿ, ಬಸವರಾಜ ರಾಜಗುರು ಸಾನಿಧ್ಯ ವಹಿಸಿದ್ದರು. ಸಮಾಜದ ಎಸ್.ಎಲ್.ವೀರೇಶ ಅವರನ್ನು ಭಗೀರಥ ರತ್ನ ಪ್ರಶಸ್ತಿ ನೀಡಲಾಯಿತು.

ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ವಕೀಲ ಶ್ರೀಕಾಂತರಾವ್, ಎಂ.ನಾರಾಯಣ, ಸುಪ್ರೀಂಕೋರ್ಟ್ ವಕೀಲ ದೇವಣ್ಣನಾಯಕ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರೂಪಾಕ್ಷಿ, ರವೀಂದ್ರ ಜಲ್ದಾರ, ಉಪ್ಪಾರ ಸಮಾಜದ ಜಿಲ್ಲಾ ಘಟಕ ಅಧ್ಯಕ್ಷ ಎಸ್.ಬುಗ್ಗಾರೆಡ್ಡಿ, ಮಾಣಿಕ್ಯಪ್ಪ ಚಂದ್ರಬಂಡಾ, ಆದಿರಾಜ, ಆದೋನಿ, ಮುಖಂಡರಾದ ಎನ್.ರಾಮಾಂಜನೇಯ್ಯ, ತಿಮ್ಮಪ್ಪ ಬುಳ್ಳಾಪುರು, ಕೆ.ಅಮರೇಶ, ದೇವರಾಜ ಗುಡಿ, ನಾಗನಗೌಡ, ತಿಮ್ಮಣ್ಣ ಮಸ್ಕಿ ಇದ್ದರು.