ನೇಕಾರ ಸಮಾಜ ಅಭಿವೃದ್ಧಿಯಾಗಲು ಒಗ್ಗಟ್ಟು ಮುಖ್ಯ. ಹೀಗಾಗಿ ಎಲ್ಲರೂ ಸಂಘಟಿತರಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕು.
ಹುಬ್ಬಳ್ಳಿ:ನೇಕಾರ ಸಮಾಜ ಅಭಿವೃದ್ಧಿಯಾಗಲು ಒಗ್ಗಟ್ಟು ಮುಖ್ಯ. ಹೀಗಾಗಿ ಎಲ್ಲರೂ ಸಂಘಟಿತರಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಹಂಪಿ ಹೇಮಕೂಟ ಗಾಯತ್ರಿ ಪೀಠಾಧ್ಯಕ್ಷ ದೇವಾಂಗ ಜಗದ್ಗುರು ದಯಾನಂದಪುರಿ ಮಹಾಸ್ವಾಮೀಜಿ ಸಲಹೆ ನೀಡಿದರು.
ನಗರದ ನೇಕಾರನಗರದ ದೇವಾಂಗ ಸಮಾಜ ಬನಶಂಕರಿ ಸೇವಾ ಟ್ರಸ್ಟ್, ಶ್ರೀ ಬನಶಂಕರಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಹಾಗೂ ಬನಶ್ರೀ ಮಹಿಳಾ ಮಂಡಳದ ಆಶ್ರಯದಲ್ಲಿ ಶ್ರೀಬನಶಂಕರಿ ದೇವಿಯ ಪ್ರತಿಷ್ಠಾಪನಾ ಬೆಳ್ಳಿಯ ಮಹೋತ್ಸವದ ನಿಮಿತ್ತ ದೇವಿಯ ಬೆಳ್ಳಿಯ ಉತ್ಸವ ಮೂರ್ತಿ ಸಮರ್ಪಣೆ ಹಾಗೂ ಯಜ್ಞ ಪವೀತ ವಟುಗಳ ಉಪನಯನ ಸಮಾರಂಭದ ಸೋಮವಾರ ನಡೆದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಇದೇ ವೇಳೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಶಾಸಕರ ಅನುದಾನದಡಿ ನಿರ್ಮಿಸಲಾದ `ದೇವರ ದಾಸಿಮಯ್ಯ ಸಮುದಾಯ ಭವನ''''''''ವನ್ನು ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಲೋಕಾರ್ಪಣೆಗೊಳಿಸಿದರು. ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ ಜ್ಯೋತಿ ಬೆಳಗಿಸಿದರು. ಟ್ರಸ್ಟ್ ಅಧ್ಯಕ್ಷ ನಾಗೇಶ ಭಾಪ್ರಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಾ. ಕೆ.ಜಿ. ಬ್ಯಾಕೋಡಿ, ಅರುಣಕುಮಾರ ಗೋಸಿ, ಶಿವಗಂಗಾ ಮಾನಶೆಟ್ಟರ್, ಶಾಂತಾ ಹಿರೇಮಠ, ಮಂಜುನಾಥ ಚಿಂತಗಿಂಜಲ, ವೆಂಕಟರಮಣ ಚಿಟ್ಟಾ, ರಾಜಕುಮಾರ ಕಾಮರೆಡ್ಡಿ, ಬಾಗಣ್ಣ ಬಿರಾಜದಾರ ಆಗಮಿಸಿದ್ದರು. ಇದೇ ವೇಳೆ ಅಂತಾರಾಷ್ಟ್ರೀಯ ಯೋಗಪಟು ರಾಜೇಶ್ವರಿ ಉದಗಟ್ಟಿ, ಸಮಾಜ ಸೇವಕಿ ಸುನಂದಾ ಎ. ಗೋಸಿ ಅವರನ್ನು ಶ್ರೀಗಳು ಸನ್ಮಾನಿಸಿದರು. ವೇದಿಕೆ ಮೇಲೆ ನಾಗೇಶ ಬಾಪ್ರಿ, ಸಂಕಣ್ಣ ಹೊನ್ನಳ್ಳಿ, ವಿನಾಯಕ ಕಡಕಲ್ಲ ಇದ್ದರು. ಹರೀಶ ಹೊಸಮನಿಗೌಡರ ನಿರೂಪಿಸಿದರು. ರಾಮಚಂದ್ರ ಕಂಗೂರಿ ವಂದಿಸಿದರು. ಮಂಜುಳಾ ಚೋಳಿನ ಸ್ವಾಗತಿಸಿದರು. ಇದೇ ವೇಳೆ ನ. 28ರಿಂದ ನಡೆಯುವ ದೇವಾಂಗ ಪ್ರೀಮಿಯರ್ ಲೀಗ್-2 ಲೋಗೋ ಹಾಗೂ ಟಿ-ಶರ್ಟ್ಗಳನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು.