ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸುಮಾರು 9ವಷ೯ಗಳಿಂದ ಸಾಹಿತಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿಕೊಂಡು ಬಂದಿದೆ.

ಗಂಗಾವತಿ: ಅಧುನಿಕತೆ ಬೆಳೆದಂತೆ ಸಮಾಜವು ಸಹ ತಪ್ಪು ದಾರಿಯ ಕಡೆಗೆ ಸಾಗುತ್ತಿದೆ. ಹಾಗಾಗಿ ಸಾಹಿತಿಗಳು ಬರವಣಿಗೆ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಹೇಳಿದರು.

ನಗರದ ಭಾರತೀಯ ವೈದ್ಯಕೀಯ ಸಂಘದ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ವತಿಯಿಂದ ಶುಕ್ರವಾರ ಹಮ್ಮಿಕೊಂಡ ಚಂದ್ರಕ್ಕನ ವಚನ, ಹಾಡೊಂದು ನಾ ಹಾಡುವೆನು ಎನ್ನುವ ಪುಸ್ತಕಗಳ ಲೋಕಾಪ೯ಣೆ ಹಾಗೂ ಮಹಿಳಾ ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸುಮಾರು 9ವಷ೯ಗಳಿಂದ ಸಾಹಿತಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಿಕೊಂಡು ಬಂದಿದೆ. ಆಗಿನಿಂದ ಇಲ್ಲಿಯವರೆಗೆ ಸಾಕಷ್ಟು ಕವಿಗೋಷ್ಠಿ ನಡೆಸುವ ಮೂಲಕ ಯುವ ಕವಿಗಳಿಗೆ ವೇದಿಕೆ ಒದಗಿಸಿಕೊಟ್ಟಿದೆ. ಯುವ ಕವಿಗಳು ಹೊಸ ಆಲೋಚನೆಯಲ್ಲಿ ಕಾವ್ಯ,ಕವನ ರಚನೆ ಮಾಡುವ ಮೂಲಕ ತಪ್ಪು ದಾರಿಯ ಕಡೆಗೆ ನಡೆಯುವ ಸಮಾಜವನ್ನು ಸರಿದಾರಿಗೆ ತರಬೇಕಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಇರುವ ವ್ಯಕ್ತಿಗಳು ಯಾವಾಗಲೂ ಸಮಾಜದ ಚಿಂತನೆಯಲ್ಲಿ ಇರುತ್ತಾರೆ.ಅವರ ಬರವಣಿಗೆ ಸಾಕಷ್ಟು ಬಲಿಷ್ಠವಾಗಿರಬೇಕು. ಅಂದಾಗ ಮಾತ್ರ ಅದಕ್ಕೆ ಮೌಲ್ಯ ಹೆಚ್ಚಾಗುತ್ತದೆ ಎಂದು ಹೇಳಿದರು.

ಹೆಬ್ಬಾಳ ಬೃಹನ್ಮಠದ ನಾಗಭೂಷಣ ಸ್ವಾಮೀಜಿ ಮಾತನಾಡಿ,12ಶತಮಾನದಿಂದಲೂ ಮಹಿಳೆಯವರು ಕಾವ್ಯ,ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ.

ಸಂಸಾರ,ಕೆಲಸದ ಒತ್ತಡದಲ್ಲೂ ಕಾವ್ಯಗಳ ರಚನೆಯಲ್ಲಿ ಆಸಕ್ತಿ ವಹಿಸಿದ್ದು ಸಂತಸದ ವಿಷಯವಾಗಿದೆ. ಮಹಿಳೆಯರು ಅಕ್ಷರಸ್ಥರು ಆದರೆ ಮಾತ್ರ ಸಮಾಜ ಶಿಕ್ಷಣವಂತರ ಸಮಾಜ ಆಗಲೂ ಸಾಧ್ಯವಾಗುತ್ತದೆ ಎಂದು ಹೇಳಿದರು.

ನಂತರ ಚಂದ್ರಕಲಾ ಜಂಬಣ್ಣ ಐಲಿ ರಚನೆ ಮಾಡಿದ ಚಂದ್ರಕ್ಕನ ವಚನಗಳು,ಹಾಡೊಂದು ನಾ ಹಾಡುವೆನು ಎನ್ನುವ ಪುಸ್ತಕಗಳ ಲೋಕಾಪ೯ಣೆ ಮಾಡಲಾಯಿತು.

ಕಾರಟಗಿಯ ತಲೇಖಾನ ಹಿರೇಮಠದ ಶ್ರೀಗಳಾದ ವೀರಭದ್ರ ಶರಣರು, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕಾಧ್ಯಕ್ಷ ಅಧ್ಯಕ್ಷ ಶರಣಪ್ಪ ತಳ್ಳಿ ಕುಪ್ಪಿಗುಡ್ಡ, ಕಾಯ೯ದಶಿ೯ ಯಲ್ಲಪ್ಪ ಕಟ್ಟಿಮನಿ, ಪ್ರಾಂತ ಕಾಯ೯ಕಾರಣಿ ಸದಸ್ಯ ಅಶೋಕ ಕುಮಾರ ರಾಯ್ಕರ್, ಬಳ್ಳಾರಿ ವಿಭಾಗೀಯ ಸಂಚಾಲಕ ಟಿ.ಶ್ರೀಧರ, ಭಾರತ ವಿಕಾಸ್ ಪರಿಷತ್ ಅಧ್ಯಕ್ಷ ಜಂಬಣ್ಣ ಐಲಿ, ಡಾ.ಈಶ್ವರ ಸವಡಿ, ಡಾ.ಶಿವಕುಮಾರ ಮಾಲಿಪಾಟೀಲ್, ಡಾ. ಸ್ಮೀತಾ ,ಬಸವರಾಜ ಬಿ. ಡಂಕನಕಲ್, ಮಾಲಾ, ಶ್ರೀಧರ್ ವಿಜಯಲಕ್ಷ್ಮಿ ಕಲಾಲ್, ಮೇಘಾ ಸಂತೋಷ ಮೇರವಾಡೆ ಹಾಗೂ ಇತರರಿದ್ದರು.

ಕವಿಗೋಷ್ಟಿಯಲ್ಲಿ ಡಾ. ಸಿ.ಮಹಾಲಕ್ಷ್ಮೀ,ನರ್ಮದಾಬಾಯಿ ಕುಲಕರ್ಣಿ,ಲಕ್ಷ್ಮೀದೇವಿ ಪತ್ತಾರ್, ನೀಲಮ್ಮ ಹಿರೇಮಠ, ಜ.ಶ್ರೀ ಹಕ್ಕಂಡಿ ಸೇರಿದಂತೆ ಇತರರು ಭಾಗವಹಿಸಿದ್ದರು.