ಸಾರಾಂಶ
ಯುವ ಜನತೆ ತಮ್ಮ ಭವಿಷ್ಯದಲ್ಲಿ ಯಾವುದೇ ಉದ್ಯೋಗಕ್ಕಾಗಿ ಕಾಯದೇ ತಮಗೆ ಇಷ್ಟವಾದ ರಂಗದಲ್ಲಿ ಸ್ವಯಂ ಉದ್ಯೋಗ ರೂಪಿಸಿಕೊಂಡು ಇತರೆ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಸೃಷ್ಟಿಸುವಂತಾಗಬೇಕು. ಯುವಜನಕು ಕೌಶಲ ತರಬೇತಿಗಳನ್ನು ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು
ಕನ್ನಡಪ್ರಭ ವಾರ್ತೆ ಕೋಲಾರ
ಎಲ್ಲ ರೀತಿಯ ಸೌಲಭ್ಯಗಳನ್ನು ಸರ್ಕಾರವೇ ನೀಡಲಿ ಎಂದು ಕೂರದೇ ಸ್ವಯಂ ಉದ್ಯೋಗದತ್ತ ಯುವಕರು ಆಸಕ್ತಿ ವಹಿಸಬೇಕು. ತಮಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಉನ್ನತ ತರಬೇತಿ ಪಡೆದು ಸ್ವಾವಲಂಬಿ ಜೀವನ ರೂಪಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೋಲಾರ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಹೇಳಿದರು.ನಗರದ ಸ್ಕೌಟ್ ಭವನದಲ್ಲಿ ರಾಜ್ಯ ಮಟ್ಟದ ಗೃಹೋಪಯೋಗಿ, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಚ್ರಿಕಲ್ಸ್ ವಸ್ತುಗಳ ರಿಪೇರಿ ಮತ್ತು ಮಾಹಿತಿ ತರಬೇತಿ ಶಿಬಿರ ಮತ್ತು ಜಿಲ್ಲಾ ಮಟ್ಟದ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿಸಲು ಹಾಗೂ ಅವರ ಭವಿಷ್ಯಕ್ಕೆ ಬೇಕಾದ ತರಬೇತಿಗಳನ್ನು ಆಯೋಜಿಸುತ್ತಿರುವ ಸಂಸ್ಥೆ ಭಾರತ್ ಸ್ಕೌಟ್ಸ್ ಗೈಡ್ಸ್ ಎಂದರು.
ಕೌಶಲ ತರಬೇತಿ ಪಡೆಯಿರಿಯುವ ಜನತೆ ತಮ್ಮ ಭವಿಷ್ಯದಲ್ಲಿ ಯಾವುದೇ ಉದ್ಯೋಗಕ್ಕಾಗಿ ಕಾಯದೇ ತಮಗೆ ಇಷ್ಟವಾದ ರಂಗದಲ್ಲಿ ಸ್ವಯಂ ಉದ್ಯೋಗ ರೂಪಿಸಿಕೊಂಡು ಇತರೆ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಸೃಷ್ಟಿಸುವಂತಾಗಬೇಕು ಎನ್ನುವ ಮಹದಾಸೆಯಿಂದ ಯುವಜನರಿಗೆ ಬೇಕಾದ ಕೌಶಲ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ. ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಅವರು ಇಂತಹ ಶಿಬಿರಗಳಿಗೆ ಪ್ರೋತ್ಸಾಹ ನೀಡಿ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಶಂಕರಪ್ಪ ಹೇಳಿದರು.
ಜಿಲ್ಲಾ ಮಹಿಳಾ ಸಂರಕ್ಷಣಾ ಕೇಂದ್ರದ ಅಧ್ಯಕ್ಷೆ ಮಂಗಳ ವಿ.ಗೌಡ, ಜೆಡಿಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್, ಡಾ. ರಮೇಶ್, ಸಂಪನ್ಮೂಲ ವ್ಯಕ್ತಿ ಮೋಹನ್, ಬೇವಹಳ್ಳಿ ಶಂಕರ್, ರತ್ನಮ್ಮ, ವಿಠಲ್ ರಾವ್ ಮಾತನಾಡಿದರು, ಈ ಸಂದರ್ಭದಲ್ಲಿ ಶಿಬಿರದ ನಾಯಕ ಮಂಜುನಾಥ್, ಸ್ಕೌಟ್ ಆಯುಕ್ತರಾದ ಸುರೇಶ್, ಪಲ್ಲವಿ, ಕೃಷ್ಣಮೂರ್ತಿ, ಸ್ಕೌಟ್ ಬಾಬು, ನವೀನ್ ಇದ್ದರು.