ಕನ್ನಡಪ್ರಭ ವಾರ್ತೆ ಬೆಳಗಾವಿ ಕಾಲದ ಅಗತ್ಯಗಳಿಗೆ ತಕ್ಕಂತೆ ನಮ್ಮ ಪಠ್ಯಕ್ರಮ ಸಿದ್ಧವಾಗಬೇಕು. ಅದು ಅಂತಾರಾಷ್ಟ್ರೀಯ ಗುಣಮಟ್ಟದಿಂದ ಕೂಡಿರಬೇಕು. ವಿದ್ಯಾರ್ಥಿಗಳ ಭವಿಷ್ಯ ಪಠ್ಯಕ್ರಮದಲ್ಲಡಗಿದೆ ಎಂದು ನವದೆಹಲಿಯ ದೀನದಯಾಳ ಉಪಾಧ್ಯಾಯ ಸಂಶೋಧನಾ ಕೆಂದ್ರದ ನಿರ್ದೇಶಕ ಡಾ.ಅತುಲ್ ಜೈನ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿಕಾಲದ ಅಗತ್ಯಗಳಿಗೆ ತಕ್ಕಂತೆ ನಮ್ಮ ಪಠ್ಯಕ್ರಮ ಸಿದ್ಧವಾಗಬೇಕು. ಅದು ಅಂತಾರಾಷ್ಟ್ರೀಯ ಗುಣಮಟ್ಟದಿಂದ ಕೂಡಿರಬೇಕು. ವಿದ್ಯಾರ್ಥಿಗಳ ಭವಿಷ್ಯ ಪಠ್ಯಕ್ರಮದಲ್ಲಡಗಿದೆ ಎಂದು ನವದೆಹಲಿಯ ದೀನದಯಾಳ ಉಪಾಧ್ಯಾಯ ಸಂಶೋಧನಾ ಕೆಂದ್ರದ ನಿರ್ದೇಶಕ ಡಾ.ಅತುಲ್ ಜೈನ ತಿಳಿಸಿದರು.
ಬೆಳಗಾವಿ ನಗರದ ಕೆಎಲ್‌ಎಸ್ ಗೋಗಟೆ ಮಹಾವಿದ್ಯಾಲಯ ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂ.ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದಿಂದ ಮಹಾವಿದ್ಯಾಲಯದ ಕೆ.ಸಿ.ವೇಣುಗೋಪಾಲ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶೈಕ್ಷಣಿಕ ಪಠ್ಯಕ್ರಮ ವ್ಯವಸ್ಥೆಯನ್ನು ಸುಧಾರಿಸಬೇಕು. ಈ ಪಠ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಜ್ಞಾನಶಿಸ್ತು ಮತ್ತು ಭಾರತೀಯ ಪರಂಪರೆ, ಇತಿಹಾಸವೂ ಮೇಳೈಸಿರಬೇಕು. ಆಗ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶದ ಜೊತೆಗೆ ನಮ್ಮ ಸಂಸ್ಕೃತಿಯ ಅಸ್ಮಿತೆಯ ಪರಿಚಯಿಸಿದಂತಾಗುತ್ತದೆ. ಯುವಕರು ತಮ್ಮಲ್ಲಿನ ಜ್ಞಾನದ ಮೂಲಕ ಉದ್ಯೋಗದ ಸೃಷ್ಟಿಯತ್ತ ಹೆಜ್ಜೆ ಹಾಕಬೇಕು. ಆಗ ಉದ್ಯೋಗದ ಮಾರುಕಟ್ಟೆಯು ಸ್ಥಿರತೆಯಿಂದ ಕೂಡಿರಲು ಸಾಧ್ಯ. ದೇಶದ ಅಭಿವೃದ್ಧಿ ಏರುಗತಿಯಲ್ಲಿ ಸಾಗಲು ಉದ್ಯೋಗ ಮಾರುಕಟ್ಟೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.ಸಂಪನ್ಮೂಲ ವ್ಯಕ್ತಿ ಬೆಳಗಾವಿ ನಗರದ ವಕೀಲರಾದ ಎಮ್.ಬಿ.ಝೀರಲಿ ಮಾತನಾಡಿ, ಅಧ್ಯಯನದಲ್ಲಿ ದೇಹ, ಮನಸ್ಸು, ವಿವೇಕ, ಆತ್ಮ ಇವುಗಳ ಸಮನ್ವಯವಿರಬೇಕು. ಅವುಗಳ ಕುರಿತು ಮನುಷ್ಯ ಅಧ್ಯಯನ ಮಾಡಬೇಕು. ಪಾಶ್ಚಿಮಾತ್ಯ ಶಿಕ್ಷಣದಲ್ಲಿ ಸಂಸ್ಕಾರವಿಲ್ಲ. ಅದಕ್ಕೆ ಈ ನೆಲಮೂಲದ ಸಂಸ್ಕೃತಿ , ಸಂಸ್ಕಾರ ವಿದ್ಯಾರ್ಥಿಗಳಿಗೆ ಬರಬೇಕಾದರೆ ಅವರಿಗೆ ಭಾರತೀಯ ಮಾತೃಭಾಷೆಯಲ್ಲಿ ಶಿಕ್ಷಣ ಸಿಗಬೇಕು. ಇದು ದೀನದಯಾಳ ಉಪಾಧ್ಯಾಯರ ಅಭಿಮತವೂ ಆಗಿದೆ ಎಂದರು.ಸಂಪನ್ಮೂಲ ವ್ಯಕ್ತಿಯಾಗಿದ್ದ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಜಾಗೃತ ದಳದ ಆಯುಕ್ತ ಸಾಗರ ದೇಶಪಾಂಡೆ ಮಾತನಾಡಿ, ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣ ಪಡೆದುಕೊಳ್ಳಬೇಕು. ಪ್ರಸ್ತುತ ಕೌಶಲ್ಯಾಧರಿತ ಪದವೀಧರ ಸಂಖ್ಯೆ ಶೇ. 54.8 ರಷ್ಟಿದೆ. ಇವರು ಉತ್ತಮ ಉದ್ಯೋಗವನ್ನು ಪಡೆದಿದ್ದಾರೆ. ಇವರ ಪ್ರಮಾಣ ಇನ್ನೂ ಹೆಚ್ಚಾಗಬೇಕು. ಪಠ್ಯಕ್ರಮದಲ್ಲಿ ಮೌಲ್ಯಯುತ ಮತ್ತು ಕೌಶಲ್ಯವೂ ಸೇರಿದಾಗ ಉತ್ತಮ ಶಿಕ್ಷಣ ದೊರೆಯಲಿದೆ ಎಂದರು.ವಿ.ಟಿ.ಯು ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ದೀಪ್ತಿ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಸರಿಯಾದ ಯೋಜನೆಯನ್ನು ಹಾಕಿಕೊಂಡು, ಸಮಯದ ಪರಿಪಾಲನೆ ಮಾಡಿದಾಗ ಮಾತ್ರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.ಗೋಗಟೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಎಸ್.ಮುತಾಲಿಕ, ಆರ್‌ಸಿಯು ಸಿಂಡಿಕೇಟ್ ಸದಸ್ಯ ವೀನಿತ ಜೋಶಿ, ಮಾಹಾವಿದ್ಯಾಲಯದ ಉಪಪ್ರಾಚಾರ್ಯ ಡಾ.ಆರ್.ಎಸ್.ಜವಳಕರ, ಅಧ್ಯಯನ ಪೀಠದ ಸಹಾಯಕ ಸಂಶೋಧಕ ಯಲ್ಲಪ್ಪ ಮೂಡಲಗಿ, ರೋಹಿತ ಕಾಂಬಳೆ, ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ 480 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪಂ.ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಬಿ.ಎಸ್.ನಾವಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ನೇಹಾ ಗುಜರ ನಿರೂಪಿಸಿದರು. ಅಧ್ಯಯನ ಪೀಠದ ಸಂಶೋಧನಾ ಅಧಿಕಾರಿ ಡಾ.ಶಿವಲಿಂಗಯ್ಯ ಗೋಠೆ ವಂದಿಸಿದರು.---------ಕೋಟ್‌ಪಂ.ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠ ವಿದ್ಯಾರ್ಥಿಗಳ ಹಿತ ಕಾಯುವ ಸಾಕಷ್ಟು ಕೆಲಸ ಮಾಡುತ್ತಿದೆ. ನಮ್ಮ ಜ್ಞಾನವು ಅದು ಇಂದಿನದಲ್ಲ, ಅದು ನಮ್ಮ ಪೂರ್ವಜರಿಂದ ಬಂದುದ್ದಾಗಿದೆ. ಅದರಲ್ಲಿ ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳಿವೆ. ಅಂಥ ಜ್ಞಾನದ ಜೊತೆಗೆ ನಾವು ಶಿಕ್ಷಣ ಪಡೆದಾಗ ಅದು ವ್ಯಕ್ತಿತ್ವಕ್ಕೆ ಘನತೆಯನ್ನು ತರುತ್ತದೆ. ಇದರಿಂದಾಗಿ ನಮ್ಮ ಉದ್ಯೋಗ, ಕುಟುಂಬ, ಸಮಾಜವನ್ನು ಸಶಕ್ತವಾಗಿ ಕಟ್ಟಲು ಸಾಧ್ಯವಾಗುತ್ತದೆ.ಪ್ರೊ.ಸಿ.ಎಂ.ತ್ಯಾಗರಾಜ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತ