ನೆರೆಯ ರಾಷ್ಟ್ರಗಳೊಂದಿಗೆ ಸಹಕಾರಭಾವನೆ ಇರಲಿ

| Published : Nov 15 2025, 03:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ರಾಮದುರ್ಗ ವಿಶ್ವವೇ ಒಂದು ಕುಟುಂಬ ಎನ್ನುವ ಭಾವನೆಯಿಂದ ನೆರೆಯ ದೇಶಗಳೊಂದಿಗೆ ಸೌಹಾರ್ದಯುತ ಜೀವನ ನಡೆಸಿಕೊಂಡು ಹೋಗಬೇಕು ಎಂಬ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ತತ್ವವನ್ನು ಅಳವಡಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗದಿರುವುದಕ್ಕೆ ಅಂಕಣಕಾರ ಸುಧೀಂದ್ರ ಕುಲಕರ್ಣಿ ವಿಷಾಧ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ವಿಶ್ವವೇ ಒಂದು ಕುಟುಂಬ ಎನ್ನುವ ಭಾವನೆಯಿಂದ ನೆರೆಯ ದೇಶಗಳೊಂದಿಗೆ ಸೌಹಾರ್ದಯುತ ಜೀವನ ನಡೆಸಿಕೊಂಡು ಹೋಗಬೇಕು ಎಂಬ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ತತ್ವವನ್ನು ಅಳವಡಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗದಿರುವುದಕ್ಕೆ ಅಂಕಣಕಾರ ಸುಧೀಂದ್ರ ಕುಲಕರ್ಣಿ ವಿಷಾಧ ವ್ಯಕ್ತಪಡಿಸಿದರು.

ಪಟ್ಟಣದ ವಿದ್ಯಾಚೇತನ ಶಾಲಾ ಆವರಣದಲ್ಲಿನ ಗುರುಭವನದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ತಾಲೂಕಿನ ಶಿಕ್ಷಕರಿಗಾಗಿ ಆಯೋಜಿಸಿದ್ದ ಜಗತ್ತು ಎದುರಿಸುವ ಸಮಸ್ಯೆಗಳಿಗೆ ಗಾಂಧಿ ಚಿಂತನೆ ಪ್ರಸ್ತುತತೆ ಎಂಬ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ ಮತ್ತು ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧ ಗಮನಸಿದಾಗ ಅಂದು ಗಾಂಧೀಜಿಯವರು ಹೇಳಿದ್ದ ಭಾರತ ಮತ್ತು ಚೀನಾ ದೇಶಗಳು ಏಷ್ಯಾದಲ್ಲಿ ಸೌಹಾರ್ದಯುತಕ್ಕೆ ಮಹತ್ವದ ಪಾತ್ರ ವಹಿಸಬೇಕಾದ ನಾವುಗಳೇ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಹೊರಟಿದ್ದೇವೆ ಎಂದರು.ಗಾಂಧೀಜಿ ಸ್ವಾತಂತ್ರ ಹೋರಾಟಗಾರ ಮಾತ್ರವಲ್ಲ, ಓರ್ವ ಸಮಾಜ ಸುಧಾರಕರಾಗಿದ್ದರು. ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ಅಸ್ಪೃಶ್ಯತೆ ನಿವಾರಣೆ, ಅಂತರ್ಜಾತಿ ವಿವಾಹ ಎಲ್ಲ ಅಂಶಗಳನ್ನು ಭಾರತೀಯ ಸಂವಿಧಾನದಲ್ಲಿ ಕಾಣಬಹುದಾಗಿದೆ. ಇಷ್ಟೆಲ್ಲ ಇದ್ದರು ಇಂದು ಗಾಂಧೀಜಿ ಪ್ರೀತಿಸುವವರಷ್ಟು ಅವರನ್ನು ದ್ವೇಷದ ಭಾವನೆಯಿಂದ ನೋಡುವವರ ಸಂಖ್ಯೆ ಗಮನಿಸಿದರೆ ಆತಂಕವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.ಹಿರಿಯ ಪತ್ರಕರ್ತ ದಿನೇಶ ಅಮ್ಮಿನಮಟ್ಟು ಮಾತನಾಡಿ, ಗಾಂಧೀಜಿ ಎಲ್ಲರಿಗೂ ಬೇಕು. ಆದರೆ ಎಲ್ಲರಿಗೂ ಬೇಡವಾದ ವ್ಯಕ್ತಿಯಾಗಿದ್ದಾರೆ. ಇಂದು ಗ್ರಾಮಸ್ವರಾಜ್‌ ಹೆಸರಲ್ಲಿ ಅಧಿಕಾರ ವಿಕೇಂದ್ರೀಕರಣದ ಜೊತೆಗೆ ಭ್ರಷ್ಟಾಚಾರ ವಿಕೇಂದ್ರೀಕರಣವಾದರೆ ಅಸ್ಪೃಶ್ಯತೆ ಮೇಲ್ನೋಟಕ್ಕೆ ಕಡಿಮೆಯಾಗಿದೆ, ವಿನಃ ಅಂತರಗದಲ್ಲಿ ಹೆಚ್ಚಾಗಿದೆ. ದೇಶದಲ್ಲಿ ಕೋಮುವಾದ ಹುಚ್ಚೆದ್ದು ಕುಣಿಯುವದನ್ನು ನೋಡಿದರೆ ಗಾಂಧೀಜಿ ತತ್ವ ಭಾಷಣಕ್ಕೆ ಸಿಮೀತವಾಗಿವೆ ಎಂದು ಹೇಳಿದರು.ವೀರಕ್ತಮಠ ಟ್ರಸ್ಟ್ ಅಧ್ಯಕ್ಷ ಪ್ರದೀಪಕುಮಾರ ಪಟ್ಟಣ, ತಾಪಂ ಇಒ ಬಸವರಾಜ ಐನಾಪೂರ, ಯಾದಗಿರಿಯ ಮಂಜುನಾಥ ಹಿರೇಮಠ, ಚಾಣಕ್ಯ ಅಕಾಡೆಮಿಯ ಎನ್.ಎಂ.ಬಿರಾದರ, ಬಿಇಒ ಸುರೇಂದ್ರ ಕಾಂಬಳೆ, ಡಾ.ವೈ.ಬಿ.ಕುಲಗೋಡ, ವಕೀಲ ಪರಶುರಾಮ ಯತ್ನಾಳ, ಎಂ.ಎಸ್.ನಿಜಗುಲಿ, ಸುರೇಶ ಏಣಿ ಸೇರಿ ಹಲವರಿದ್ದರು. ಬರೋಡಾ ಬ್ಯಾಂಕ್ ವ್ಯವಸ್ಥಾಪಕ ಹನಮಂತ್ರಾಯ ಬಿರಾದರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.