ಹೊಸಕೋಟೆ: ಪ್ರಸ್ತುತ ಸಮಾಜದಲ್ಲಿ ಸಮಾಜಿಕ, ಪೌರಾಣಿಕ ನಾಟಕಗಳು ನಡೆಸುವುದು ಸರ್ವೆ ಸಾಮಾನ್ಯ. ಆದರೆ ಪಠ್ಯಪುಸ್ತಕ ಆಧಾರಿತ ನಾಟಕ ಆಯೋಜಿಸುವುದು ವಿಶೇಷವಾಗಿದೆ ಎಂದು ಓಂ ಶ್ರೀ ವಿದ್ಯಾಸಂಸ್ಥೆಯ ಅಧ್ಯಕ್ಷ ಫ್ರೊ ರಂಗಪ್ಪ ತಿಳಿಸಿದರು
ಹೊಸಕೋಟೆ: ಪ್ರಸ್ತುತ ಸಮಾಜದಲ್ಲಿ ಸಮಾಜಿಕ, ಪೌರಾಣಿಕ ನಾಟಕಗಳು ನಡೆಸುವುದು ಸರ್ವೆ ಸಾಮಾನ್ಯ. ಆದರೆ ಪಠ್ಯಪುಸ್ತಕ ಆಧಾರಿತ ನಾಟಕ ಆಯೋಜಿಸುವುದು ವಿಶೇಷವಾಗಿದೆ ಎಂದು ಓಂ ಶ್ರೀ ವಿದ್ಯಾಸಂಸ್ಥೆಯ ಅಧ್ಯಕ್ಷ ಫ್ರೊ ರಂಗಪ್ಪ ತಿಳಿಸಿದರು.
ನಗರದ ಓಂ ಶ್ರೀ ಶಾಲೆಯಲ್ಲಿ ರಂಗ ಸಾಗರ ತಂಡದವರಿಂದ ಡಿ.ವಿ.ಗುಂಡಪ್ಪನವರ ಜೀವನಚರಿತ್ರೆಯ ನಾಟಕ ಪ್ರದರ್ಶನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹತ್ತನೇ ತರಗತಿಯ ಪಠ್ಯದಲ್ಲಿರುವ ಕವಿ, ಸಾಹಿತಿ ಡಿ.ವಿ.ಗುಂಡಪ್ಪನವರ ಜೀವನ ಚರಿತ್ರೆಯುಳ್ಳ ನಾಟಕವನ್ನು ರಂಗ ಸಾಗರ ತಂಡದ ಯುವ ಕಲಾವಿದರು ಅದ್ಭುತವಾಗಿ ಅಭಿನಯಿಸಿದರು. ವಿದ್ಯಾರ್ಥಿಗಳಿಗೆ ಡಿವಿ ಗುಂಡಪ್ಪನವರ ಬದುಕಿನ ಸ್ಪಷ್ಟ ಚಿತ್ರಣವನ್ನು ತಂದುಕೊಟ್ಟಿದ್ಧಾರೆ. ಡಿವಿ ಗುಂಡಪ್ಪನವರು ಒಬ್ಬ ಕವಿಯಾಗಿ, ಸಾಹಿತಿಯಾಗಿ, ಪತ್ರಕರ್ತರಾಗಿ ಸಮಾಜಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ಪ್ರಮುಖವಾಗಿ ಮಂಕುತಿಮ್ಮನ ಕಗ್ಗ ಕಾವ್ಯ ರಚನೆ ಮಾಡುವ ಮೂಲಕ ಸಮಜಕ್ಕೆ ಮೌಲ್ಯಯುತವಾಗಿ ದೊಡ್ಡ ಸಂದೇಶವನ್ನು ಕೊಟ್ಟಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ಬದುಕಿನ ಜೀವನ ಚರಿತ್ರೆಯನ್ನು ಶಾಲಾ ಮಕ್ಕಳಿಗೆ ನಾಟಕ ರೂಪದಲ್ಲಿ ತೆರಿದಿಟ್ಟ ರಂಗ ಸಾಗರ ತಂಡದ ಕಲಾವಿದರ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದರು.ನಾಟಕ ನಿರ್ದೆಶಕ ಸಾಗರ್ ಮಾತನಾಡಿ, ಸಮಾಜದಲ್ಲಿ ಅಂಖ್ಯಾತ ಸಾಮಾಜಿಕ, ಪೌರಾಣಿಕ ರಂಗಭೂಮಿ ಕಲಾವಿದರಿದ್ದು ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಡುವ ಕೆಲಸ ಆಗಬೇಕು. ಮುಖ್ಯವಾಗಿ ಪಠ್ಯಾಧಾರಿತ ನಾಟಕವನ್ನು ವಿದ್ಯಾರ್ಥಿಗಳ ಮುಂದೆ ಅಭಿನಯಿಸಿದಾಗ ಅದು ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಪೂರಕವಾಗಲಿದೆ ಎಂದರು.
ಓಂ ಶ್ರೀಶಾಲೆಯ ಕಾರ್ಯದರ್ಶಿ ಪ್ರೇಮ ರಂಗಪ್ಪ, ಆಡಳಿತಾಧಿಕಾರಿ ರಘುನಂದನ್, ಪ್ರಾಂಶುಪಾಲ ಚಂದ್ರಮತಿ, ಮುಖ್ಯ ಶಿಕ್ಷಕಿ ಮಹಾಲಕ್ಷ್ಮಿ, ಸಂಯೋಜಕ ಕುಮಾರ್, ಕಲಾವಿದರಾದ ವಸಂತ್, ಹರ್ಷ, ಕಲ್ಯಾಣ್, ಸತೀಶ್, ಪವನ್ ಕುಮಾರ್, ಮಧು, ಲಿಖಿತ್, ಮನೋಜ್ವಮ್, ವಿನಯಕುಮಾರ್, ರಿತ್ಯಾ ಸೇರಿದಂತೆ ಶಾಲಾ ಸಿಬ್ಬಂದಿ ವರ್ಗ ಹಾಜರಿದ್ದರು.ಫೋಟೋ: 19 ಹೆಚ್‌ಎಸ್‌ಕೆ 1
ಹೊಸಕೋಟೆಯ ಓಂ ಶ್ರೀ ಶಾಲೆಯಲ್ಲಿ ರಂಗ ಸಾಗರ ತಂಡದ ಅಭಿಯನದ ನಾಟಕ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸನ್ಮಾನಿಸಲಾಯಿತು.