ಬೀಜ, ಗೊಬ್ಬರ ಅಭಾವ ಆಗದಿರಲಿ

| Published : May 20 2025, 01:05 AM IST

ಸಾರಾಂಶ

ರೈತರು ಬಿತ್ತನಿಗೆ ಭೂಮಿ ಹದಮಾಡಿಕೊಳ್ಳುತ್ತಿದ್ದು ಮುಂಜಾಗೃತ ಕ್ರಮವಾಗಿ ತಮ್ಮ ಇಲಾಖೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ಡಿಎಪಿ ಗೊಬ್ಬರದ ಸಮರ್ಪಕ ಪೂರೈಕೆಯನ್ನು ರೈತರಿಗೆ ಒದಗಿಸಬೇಕು.

ಕೊಪ್ಪಳ(ಯಲಬುರ್ಗಾ):

ರೈತರಿಗೆ ಬಿತ್ತನೆ ಬೀಜ ಮತ್ತು ಗೊಬ್ಬರ ಕೊರತೆಯಾಗದಂತೆ ಕ್ರಮವಹಿಸುವಂತೆ ಜೆಡಿಎಸ್ ಜಿಲ್ಲಾ ಘಟಕದಿಂದ ಯಲಬುರ್ಗಾ ಕೃಷಿ ಅಧಿಕಾರಿ ಶಿವಾನಂದ ಮಳಗಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಪೂರ್ವ ಮುಂಗಾರು ಆರಂಭವಾಗಿದ್ದು, ರೈತರಿಗೆ ಯಾವುದೆ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆಯಾಗದಂತೆ ಕ್ರಮವಹಿಸಬೇಕು. ರೈತರು ಬಿತ್ತನಿಗೆ ಭೂಮಿ ಹದಮಾಡಿಕೊಳ್ಳುತ್ತಿದ್ದು ಮುಂಜಾಗೃತ ಕ್ರಮವಾಗಿ ತಮ್ಮ ಇಲಾಖೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ಡಿಎಪಿ ಗೊಬ್ಬರದ ಸಮರ್ಪಕ ಪೂರೈಕೆಯನ್ನು ರೈತರಿಗೆ ಒದಗಿಸಬೇಕು. ಈ ಹಿಂದೆ ಹೋಬಳಿ ಕೇಂದ್ರಗಳ ಜತೆಗೆ ಬಿತ್ತನೆ ಬೀಜ ವಿತರಿಸುತ್ತಿದ್ದ ಬೇವೂರು ಹಾಗೂ ತಳಕಲ್ ಗ್ರಾಮಗಳಲ್ಲಿಯೂ ಎರಡ್ಮೂರು ದಿನದಲ್ಲಿ ಬಿತ್ತನೆ ಬೀಜ ವಿತರಿಸುವ ವ್ಯವಸ್ಥೆ ಪ್ರಾರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.

ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಂಡು ಗೊಬ್ಬರ ಮಾರಾಟಗಾರರು ರೈತರಿಗೆ ಸ್ಟಾಕ್ ಬೋರ್ಡ್ ಹಾಗೂ ದರಪಟ್ಟಿಯನ್ನು ಪ್ರದರ್ಶನ ಮಾಡುವಂತೆ ಸಭೆ ಕರೆದು ಸೂಚಿಸಬೇಕು. ಈಗಾಗಲೇ ಈ ಹಿಂದೆ ಇಲಾಖೆಯಿಂದ ನೋಟಿಸ್‌ ಪಡೆದಿರುವವರು ರೈತರಿಗೆ ವಂಚಿಸಿದರೆ ಗಂಭೀರ ಪ್ರಕರಣದ ದೂರು ದಾಖಲಿಸಬೇಕು. ಕೃಷಿ ಇಲಾಖೆ ಜಾಗೃತವಾಗಬೇಕು ಎಂದು ಮನವಿ ಸಲ್ಲಿಸಿದರು.

ಜೆಡಿಎಸ್ ಜಿಲ್ಲಾ ವಕ್ತಾರ ವಕ್ತಾರ ಮಲ್ಲನಗೌಡ ಕೋನನಗೌಡ್ರ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ಗುಳಗುಳಿ, ಪಕ್ಷದ ಹಿರಿಯ ಮುಖಂಡ ಶರಣಪ್ಪ ರಾಂಪುರ, ಕುಕನೂರು ತಾಲೂಕು ಅಧ್ಯಕ್ಷ ಕೆಂಚಪ್ಪ ಹಳ್ಳಿ ಇದ್ದರು.