ಶ್ರೀರಾಮನಿಂದ ದೇಶದಲ್ಲಿ ಶಾಂತಿ ನೆಲೆಸಲಿ: ಕಿಮ್ಮನೆ ರತ್ನಾಕರ್

| Published : Jan 23 2024, 01:49 AM IST

ಶ್ರೀರಾಮನಿಂದ ದೇಶದಲ್ಲಿ ಶಾಂತಿ ನೆಲೆಸಲಿ: ಕಿಮ್ಮನೆ ರತ್ನಾಕರ್
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ರಾಮ ಎಲ್ಲರ ನಂಬಿಕೆಯ ದೇವರು. ಯಾರನ್ನೂ ಆತ ದ್ವೇಷ ಮಾಡುವಂತೆ ಪ್ರೇರೇಪಣೆ ನೀಡಲಾರ. ಅಯೋಧ್ಯೆಯಲ್ಲಿ ನಡೆದ ಶ್ರೀರಾಮನ ಪ್ರತಿಷ್ಠಾಪನೆಯಿಂದ ಈ ದೇಶದಲ್ಲಿ ದ್ವೇಷ ಅಸೂಯೆಗಳು ದೂರವಾಗಿ ಪರಸ್ಪರ ಪ್ರೀತಿ ವಿಶ್ವಾಸಗಳೊಂದಿಗೆ ಶಾಂತಿ ನೆಲೆಸುವಂತಾಗಬೇಕು ಎಂಬುದೇ ನಮ್ಮೆಲ್ಲರ ಆಶಯವಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿಯಲ್ಲಿ ಕೋದಂಡರಾಮ ದೇಗುಲದಲ್ಲಿ ಸಂಭ್ರಮಾಚರಣೆ ಕುರಿತು ಅಭಿಪ್ರಾಯಿಸಿದ್ದಾರೆ.

ತೀರ್ಥಹಳ್ಳಿ: ಶ್ರೀ ರಾಮ ಎಲ್ಲರ ನಂಬಿಕೆಯ ದೇವರು. ಯಾರನ್ನೂ ಆತ ದ್ವೇಷ ಮಾಡುವಂತೆ ಪ್ರೇರೇಪಣೆ ನೀಡಲಾರ. ಅಯೋಧ್ಯೆಯಲ್ಲಿ ನಡೆದ ಶ್ರೀರಾಮನ ಪ್ರತಿಷ್ಠಾಪನೆಯಿಂದ ಈ ದೇಶದಲ್ಲಿ ದ್ವೇಷ ಅಸೂಯೆಗಳು ದೂರವಾಗಿ ಪರಸ್ಪರ ಪ್ರೀತಿ ವಿಶ್ವಾಸಗಳೊಂದಿಗೆ ಶಾಂತಿ ನೆಲೆಸುವಂತಾಗಬೇಕು ಎಂಬುದೇ ನಮ್ಮೆಲ್ಲರ ಆಶಯವಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಪಟ್ಟಣದ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ವರ ಹಿತವನ್ನು ಬಯಸಿ ಇಲ್ಲಿನ ಕೋದಂಡರಾಮನ ಕ್ಷೇತ್ರದಲ್ಲಿ ವಿಶೇಷ ಧಾರ್ಮಿಕ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದರು.

ದೇವಸ್ಥಾನದ ಅರ್ಚಕ ನಾಗೇಶ ಭಟ್ಟ ಮಾತನಾಡಿ, ದೇವರ ಪ್ರೇರಣೆಯಂತೆ ಈ ಶುಭ ಸಂದರ್ಭದಲ್ಲಿ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಒಂದು ಒಳ್ಳೆಯ ಪ್ರಯತ್ನ ನಡೆದಿದೆ. ಕಳೆದ 66 ವರ್ಷಗಳಿಂದ ಈ ದೇವಸ್ಥಾನದಲ್ಲಿ ರಾಮನ ಸೇವೆ ಮಾಡುತ್ತಿದ್ದೇನೆ. ಕಿಮ್ಮನೆ ರತ್ನಾಕರ್ ಭರವಸೆ ನೀಡಿರುವಂತೆ ಇದರ ಅಭಿವೃದ್ಧಿಗೆ ಸರ್ಕಾರದ ಅನುದಾನ ಬಂದರೆ ನಾನೂ ಕೂಡ ಕನಿಷ್ಠ ₹25 ಲಕ್ಷ ದೇಣಿಗೆ ನೀಡಲು ಸಿದ್ಧನಿದ್ದೇನೆ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಪಪಂ ಅಧ್ಯಕ್ಷೆ ಗೀತಾ ರಮೇಶ್, ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಪಕ್ಷದ ಮುಖಂಡರಾದ ಬಿ.ಕೆ.ವಾದಿರಾಜ್, ಡಿ.ಎಸ್. ವಿಶ್ವನಾಥ ಶೆಟ್ಟಿ, ಹಸಿರುಮನೆ ಮಹಾಬಲೇಶ್, ಎಚ್.ಬಿ. ಪದ್ಮನಾಭ್, ಬಿ.ಆರ್. ರಾಘವೇಂದ್ರ ಶೆಟ್ಟಿ, ಹಾಲಿಗೆ ನಾಗರಾಜ್, ಬಂಡೆ ವೆಂಕಟೇಶ್ ಮುಂತಾದವರು ಇದ್ದರು.

- - --22ಟಿಟಿಎಚ್02:

ತೀರ್ಥಹಳ್ಳಿ ಪಟ್ಟಣದ ಶ್ರೀ ಕೋದಂಡರಾಮ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಪಪಂ ಅಧ್ಯಕ್ಷೆ ಗೀತಾ ರಮೇಶ್, ಕೆಸ್ತೂರು ಮಂಜುನಾಥ್ ಮತ್ತಿತರರು ಇದ್ದರು.