ಸಾರಾಂಶ
ಶ್ರೀಶೈಲ ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿ ಸಂಘಕ್ಕೆ ನೂತನ ಕಟ್ಟಡ ಹೊಂದಿರುವುದು ಸಂತಸ ತಂದಿದೆ ಎಂದಿ ಮಾಜಿ ಸಚಿವ ಎಸ್.ಆರ್. ಪಾಟೀಲ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಬಾದಾಮಿ
ನಗರದ ಶ್ರೀಶೈಲ ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿ ಸಂಘಕ್ಕೆ ನೂತನ ಕಟ್ಟಡ ಹೊಂದಿರುವುದು ಸಂತಸ ತಂದಿದೆ ಎಂದಿ ಮಾಜಿ ಸಚಿವ ಎಸ್.ಆರ್. ಪಾಟೀಲ ಅಭಿಪ್ರಾಯಪಟ್ಟರು.ಗುರುವಾರ ಪಟ್ಟಣದ ವಿದ್ಯಾನಗರದ ಶ್ರೀಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದ ಹತ್ತಿರ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬಾದಾಮಿ ನಗರದಲ್ಲಿ ಸಮಾಜದ ಸಮುದಾಯ ಭವನ, ಸೌಹಾರ್ದ ಸಹಕಾರಿ ಸಂಘ ಸ್ವಂತ ಕಟ್ಟಡ ಹೊಂದಿರುವುದು ಉತ್ತಮ ಬೆಳವಣಿಗೆಯಾಗಿದೆ. ಸಂಘ ಬಡವರ ಆರ್ಥಿಕ ಪ್ರಗತಿಗೆ ಊರುಗೋಲಾಗಲಿ. ಬರುವ ದಿನಗಳಲ್ಲಿ ಸಂಘ ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಇಂದು ಸಹಕಾರಿ ಸಂಘಗಳನ್ನು ನಡೆಸಿಕೊಂಡು ಹೋಗುವುದು ತುಂಬಾ ಸವಾಲಿನ ಕೆಲಸ. ಸಾಲ ಪಡೆದವರು ಸಕಾಲಕ್ಕೆ ಮರುಪಾವತಿ ಮಾಡಿ, ಸಹಕಾರಿ ಸಂಘಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕಿವಿಮಾತು ಹೇಳಿದರು.ಹರಿಹರ ತಾಲೂಕಿನ ಎರೆಹೊಸಳ್ಳಿ ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಂಘದ ಅಧ್ಯಕ್ಷ ವಿ.ಎಸ್. ದೇಸಾಯಿ ಅಧ್ಯಕ್ಷತೆ ವಹಿಸಿ ಸಂಘ ಬೆಳೆದು ಬಂದ ದಾರಿಯ ಕುರಿತು ಮೆಲಕು ಹಾಕಿದರು.
ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ, ಜಿ.ಎನ್. ಪಾಟೀಲ, ಎಂ.ಎಸ್. ಗೌಡರ, ಸಿ.ವಿ. ಪಾಟೀಲ, ಮಹಾಂತೇಶ ಮಮದಾಪೂರ, ಎಸ್.ಆರ್. ಮೆಳ್ಳಿ, ಕುಮಾರಗೌಡ ಜನಾಲಿ, ಎಸ್.ಟಿ. ಪಾಟೀಲ, ಬಿ.ಟಿ. ಬೆನಕಟ್ಟಿ, ಅಶೋಕ ಯಲಿಗಾರ, ಎಸ್.ಕೆ. ಬೆಳವಲದ, ಎಸ್.ಎಂ. ಕೆಲೂಡಿ, ಡಿ.ಎಂ. ಪೈಲ್ ವೇದಿಕೆ ಮೇಲಿದ್ದರು. ಎಸ್.ಎ. ಭರಮಗೌಡರ ಸ್ವಾಗತಿಸಿದರು. ಅಶೋಕ ಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಎಸ್. ಹೊಸಗೌಡರ ನಿರೂಪಿಸಿ, ವಂದಿಸಿದರು. ಸಂಘದ ನಿರ್ದೇಶಕರು, ಗಣ್ಯರು, ಸದಸ್ಯರು, ಗ್ರಾಹಕರು, ಮಹಿಳೆಯರು ಇದ್ದರು. ಸಂಘ ಬಡವರು, ಹಿಂದುಳಿದ ವರ್ಗದವರಿಗೆ ಆರ್ಥಿಕ ಸಹಾಯ ಮಾಡಬೇಕು. ಸಾರ್ವಜನಿಕರು ಸಂಘದ ಸದುಪಯೋಗ ಪಡೆದುಕೊಳ್ಳಬೇಕು. ಮಹಿಳಾ ಶಾಖೆ ಪ್ರಾರಂಭ ಮಾಡಿರುವುದು ಶ್ಲಾಘನೀಯ ಕಾರ್ಯ. ಮಹಿಳೆಯರು ಸಹ ಮುಂದೆ ಬಂದು ಸಂಘದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು.ಶಾಸಕ ಜೆ.ಟಿ. ಪಾಟೀಲ ಶಾಸಕರು ಬೀಳಗಿ