ಜಗದ್ಗುರು ರೇಣುಕಾಚಾರ್ಯರ ತತ್ವ ಎಲ್ಲರೂ ಪಾಲಿಸೋಣ: ಡಾ.ಶೈಲೇಂದ್ರ ಬೆಲ್ದಾಳೆ

| Published : Mar 13 2025, 12:46 AM IST

ಜಗದ್ಗುರು ರೇಣುಕಾಚಾರ್ಯರ ತತ್ವ ಎಲ್ಲರೂ ಪಾಲಿಸೋಣ: ಡಾ.ಶೈಲೇಂದ್ರ ಬೆಲ್ದಾಳೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ, ಬೀದರ್‌

ಇಡೀ ಮಾನವ ಕುಲಕ್ಕೆ ಒಳಿತು ಮಾಡಿರುವ ಜಗದ್ಗುರು ರೇಣುಕಾಚಾರ್ಯರ ತತ್ವಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆ ಎಂದು ಬೀದರ್‌ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.ಅವರು ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ದೇಶವು ಸಾಧು ಸಂತರ, ಮಹಾತ್ಮರ, ಮಹಾನ್‌ ಜ್ಞಾನಿಗಳ, ದಾರ್ಶನಿಕರ, ಬಸವಾದಿ ಶರಣರ ದೇಶ ವಾಗಿದೆ. ಅನೇಕ ಮಹಾತ್ಮರ ಸಿದ್ಧಾಂತಗಳು, ತತ್ವ ಬೋಧನೆಗಳನ್ನು ಒಳಗೊಂಡ ದೇಶ ನಮ್ಮದಾಗಿದೆ. ಮಹಾನ್‌ ಜ್ಞಾನಿಗಳಲ್ಲಿ ಜ್ಞಾನಿಗಳಾದ ಜಗದ್ಗುರು ರೇಣುಕಾಚಾರ್ಯರ ಸಂದೇಶಗಳು ಎಲ್ಲಾ ಕಾಲಕ್ಕೂ ಅಜರಾಮರವಾಗಿವೆ ಎಂದರು. ಸಮಾಜವನ್ನು ಒಂದುಗೂಡಿಸಿ ಸಹಬಾಳ್ವೆಗೆ ಅನುವು ಮಾಡಿಕೊಟ್ಟಿದ್ದಾರೆ ಹಾಗೂ ಸಮಾಜದಲ್ಲಿ ಸಮಾನತೆ, ಶಾಂತಿ ಮತ್ತು ಉತ್ತಮವಾದ ಜೀವನ ನಡೆಸಲು ಇವರ ಬೋಧನೆ ಸಹಾಯಕವಾಗಿವೆ. ನಾವು ಕೂಡ ಸಮಾಜದಲ್ಲಿ ಒಂದಾಗಿ ಬದುಕಬೇಕು ಮತ್ತು ಭಾರತವನ್ನು ವಿಶ್ವಗುರುವನ್ನಾಗಿ ಮಾಡಬೇಕು ಎಂದು ಹೇಳಿದರು.ಬೇಮಳಖೇಡಾ ಗೋರ್ಟಾ ಹಿರೇಮಠದ ಸ್ವಾಮಿಗಳಾದ ಡಾ.ರಾಜಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಗುರು ಶಿಷ್ಯರ ನಡುವಿನ ಅವಿನಾನುಭಾವ ಸಂಬಂಧವೇ ವೀರಶೈವ ಲಿಂಗಾಯತ ಧರ್ಮದ ಪರಂಪರೆಯಾಗಿದೆ. ಸರ್ವರ ಕಲ್ಯಾಣಕ್ಕಾಗಿಯೇ ಜನ್ಮತಾಳಿದ ಜಗದ್ಗುರು ರೇಣುಕಾಚಾರ್ಯರ ಕೊಡುಗೆ ಈ ಸಮಾಜಕ್ಕೆ ಅಪಾರವಾಗಿದೆ. ರೇಣುಕಾಚಾರ್ಯರು ತಮ್ಮ ಶಿಷ್ಯರಾದ ಅಗಸ್ತ್ಯ ಮಹರ್ಷಿಗಳಿಗೆ ತಮ್ಮ ಬೋಧನೆಗಳನ್ನು ಭೋಧಿಸಿದರೆಂದು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಕಾಣಬಹುದು ಹಾಗೂ ಲಂಕೆಯಲ್ಲಿ 3 ಕೋಟಿ ಲಿಂಗಗಳನ್ನು ಸ್ಥಾಪಿಸಿರುವುದು ಈ ಗ್ರಂಥದಿಂದ ತಿಳಿದು ಬಂದಿದೆ ಎಂದರು. ಅಧ್ಯಯನ ಕೇಂದ್ರ ಸ್ಥಾಪಿಸಿ: ಕಲಬುರಗಿ ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ವೀರಶೈವ ಲಿಂಗಾಯತ ಅಧ್ಯಯನ ಕೇಂದ್ರ ಸ್ಥಾಪಿಸಬೇಕು ಮತ್ತು ಬೀದರ್‌ ನಗರದಲ್ಲಿ ರೇಣುಕಾಚಾರ್ಯರ ಸರ್ಕಲ್‌ ನಿರ್ಮಾಣಕ್ಕೆ ಜಾಗ ಮತ್ತು ಅನುಮತಿ ನೀಡಬೇಕೆಂದು ಅಪರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.ಕಾರ್ಯಕ್ರಮಕ್ಕೂ ಮುಂಚಿತವಾಗಿ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಗದ್ಗುರು ರೇಣುಕಾಚಾರ್ಯರ ಮೆರವಣಿಗೆಗೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಿಶೆಟ್ಟಿ, ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ, ನಿರಗುಡಿ ಹವಾ ಮಲ್ಲಿನಾಥ ಮಹಾರಾಜರು, ದಿಶಾ ಸಮಿತಿ ಸದಸ್ಯರಾದ ಶಿವಯ್ಯ ಸ್ವಾಮಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಸಿದ್ರಾಮಯ್ಯ ಸ್ವಾಮಿ, ನಗರಸಭೆ ಸದಸ್ಯರಾದ ದಿಗಂಬರ ಮಡಿವಾಳ, ಸಿಧು ಫುಲಾರಿ, ವಿಶ್ವಲಿಂಗ ಸ್ವಾಮಿ, ವೈಜಿನಾಥ ಕಮಠಾಣೆ, ಶಿವಶರಣಪ್ಪ ವಾಲಿ, ರಾಮಕೃಷ್ಣ ಸಾಳೆ, ಈಶ್ವರ ಸಿಂಗ ಠಾಕೂರ, ರವಿಂದ್ರ ಸ್ವಾಮಿ, ಮಹೇಶ್ವರ ಸ್ವಾಮಿ ಸೇರಿದಂತೆ ಸಮಾಜದ ಇತರೇ ಮುಖಂಡರು ಉಪಸ್ಥಿತರಿದ್ದರು.

ಪಂಚಾಚಾರ್ಯ ಪುಣ್ಯಾಶ್ರಮದಲ್ಲೂ ಜಯಂತಿ

ಬೀದರ್‌: ನಗರದ ಹೊರ ವಲಯದ ಬೀದರ್‌ ಭಾಲ್ಕಿ ರಸ್ತೆಯ ಮಾರ್ಗದಲ್ಲಿರುವ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮದಲ್ಲಿ ಬುಧವಾರ ಜಗದ್ಗುರು ರೇಣುಕಾ ಚಾರ್ಯರ ಜಯಂತಿ ಅದ್ಧೂರಿಯಾಗಿ ಜರುಗಿತು.

ಆಕಾಶ ಸ್ವಾಮಿ ಜಗದ್ಗುರು ರೇಣುಕಾಚಾರ್ಯರ ಮೂರ್ತಿಗೆ ರುದ್ರಾಭಿಷೇಕ ನಡೆಸಿಕೊಟ್ಟರು. ಕಾರ್ತಿಕ ಸ್ವಾಮಿ ಜ್ಯಾಂತಿ ಕುಟುಂಬಸ್ಥರು ಪೂಜಾ ಕಾರ್ಯಕ್ರಮ ನಡೆಸಿದರು.ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರು ರೇಣುಕಾಚಾರ್ಯರ ಮೂರ್ತಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು 18 ಪಂಗಡಗಳಿಗೆ ಗುರು ಪೂಜ್ಯರಾಗಿದ್ದವರು. ಅವರ ಮಂದಿರ ಇಷ್ಟು ಬೃಹತ್ತಾಗಿ ನಿರ್ಮಾಣ ಆಗಿರುವುದು ತುಂಬ ಸಂತೋಷ. ಇಂಥಹ ವಿಶಾಲ ವಾತಾವರಣದಲ್ಲಿ ನಿರ್ಮಾಣವಾದ ಈ ದೇವಸ್ಥಾನದಲ್ಲಿ ಇಂದು ಅವರ ಜಯಂತಿ‌ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾವಸುತ್ತೇನೆ. ಮಂದಿರದ ಜೀರ್ಣೋದ್ಧಾರಕ್ಕೆ ಕೈಲಾದಷ್ಟು ಸಹಕಾರ ಮಾಡುವುದಾಗಿ ಭರವಸೆ ನೀಡಿದರು.ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ, ರೇಣುಕಾಚಾರ್ಯರ ಮಂದಿರ ಜೀರ್ಣೋದ್ದಾರದಲ್ಲಿ ಹಲವರ ಪರಿಶ್ರಮ ಬಹಳಷ್ಟಿದೆ. ಇಲ್ಲಿಯ ಸಂಚಾಲಕರಾದ ವೇದಮೂರ್ತಿ ಷಣ್ಮುಖಯ್ಯ ಸ್ವಾಮಿ ಅವರು ವಿಶೇಷ ಚೇತನರಾಗಿದ್ದರೂ ಧೃಢಸಂಕಲ್ಪ ಮಾಡಿ ರೇಣುಕಾಚಾರ್ಯರ ಭವ್ಯ ಮಂದಿರ ನಿರ್ಮಾಣ ಮಾಡಿದರು. ಇದರ ಜೊತೆಗೆ ಇಲ್ಲಿ ಗುರುಭವನ ನಿರ್ಮಾಣ ಆಗುತ್ತಿದೆ ಶಕ್ತಿ ಇರುವಂಥ ನಾವೆಲ್ಲ ಸೇರಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸಬೇಕಾಗಿದೆ ಎಂದರು.ಬಿಜೆಪಿ ಸ್ಥಳೀಯ ಮುಖಂಡರಾದ ಈಶ್ವರಸಿಂಗ್‌ ಠಾಕೂರ್‌, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿದರು. ಪಂಚಾಚಾರ್ಯ ಪುಣ್ಯಾಶ್ರಮದ ಸಂಚಾಲಕರಾದ ವೇದಮೂರ್ತಿ ಷಣ್ಮುಖಯ್ಯಸ್ವಾಮಿ ಸಾನಿಧ್ಯ ವಹಿಸಿದ್ದರು. ವಿಶ್ವ ಹಿಂದು ಪರಿಷತ್‌ ಅಧ್ಯಕ್ಷ ರಾಮಕೃಷ್ಣ ಸಾಳೆ, ಸಮಾಜದ ಮುಖಂಡರಾದ ರವಿಂದ್ರ ಸ್ವಾಮಿ, ಕುಮಾರ ಸ್ವಾಮಿ ಹಿರೇಮಠ, ಅರುಣಾ ರವಿಂದ್ರ ಸ್ವಾಮಿ, ಅಕ್ಕಮಹಾದೇವಿ ಕಾಲೇಜಿನ ಪ್ರಾಚರ್ಯರಾದ ಶರಣಪ್ಪ, ನಿವೃತ್ತ ಉಪ ಪ್ರಾಚಾರ್ಯರಾದ ಪ್ರಭುಶೆಟ್ಟಿ, ಬಸವಕುಮಾರ ಸ್ವಾಮಿ ಹಾಗೂ ಇತರರು ಕಾರ್ಯಕ್ರಮದಲ್ಲಿದ್ದರು.ರೇಣುಕಾಚಾರ್ಯ ಮಂದಿರ ಹಾಗೂ ಜಗದ್ಗುರು ಪಂಚಾಚಾರ್ಯ ಎಜ್ಯುಕೇಶನ್‌ ಮತ್ತು ಚಾರಿಟೇಬಲ್‌ ಟ್ರಸ್ಟ್‌ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಸ್ವಾಗತಿಸಿ ನಿರೂಪಿಸಿದರು. ಖಜಾಂಚಿ ಶ್ರೀಕಾಂತ ಸ್ವಾಮಿ ಸೋಲಪುರ ವಂದಿಸಿದರು.

ಬಾವಗಿಯಲ್ಲೂ ರೇಣುಕಾಚಾರ್ಯರ ಸಂಭ್ರಮದ ಜಯಂತಿಬೀದರ್‌: ತಾಲೂಕಿನ ಬಾವಗಿ ಗ್ರಾಮದ ಗುರು ಭದ್ರೆಶ್ವರ ದೇವಸ್ಥಾನದಲ್ಲಿ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.ಈ ಸಂದರ್ಭದಲ್ಲಿ ಸಂಸ್ಥಾನದ ಭದ್ರಯ್ಯ ಸ್ವಾಮಿ ಮಾತನಾಡಿ, ಮಾನವನನ್ನು ಮಹಾದೇವನನ್ನಾಗಿಸಿದ ಆದಿ ಜಗದ್ಗುರು ರೇವಣಸಿದ್ಧೇಶ್ವರರು ತಮ್ಮ ದಿವ್ಯ ಉಪದೇಶಗಳ ಮೂಲಕ ವಿಶ್ವ ಬಂಧುತ್ವ, ಪ್ರೀತಿ, ಪರೋಪಕಾರ ಹಾಗೂ ಮಾನವೀಯತೆಯ ಮಹಾ ಮೌಲ್ಯಗಳನ್ನು ಸಾರಿದರು ಎಂದರು.ಯುವ ಮುಖಂಡ ಲೋಕೇಶ ಕನಶಟ್ಟಿ ಮಾತನಾಡಿ, ರೇಣುಕಾಚಾರ್ಯರು ಬೋಧಿಸಿದ ಧರ್ಮದ ಹಾದಿಯನ್ನು ಅನುಸರಿಸಿ, ನಾವು ಸಹಾನುಭೂತಿ, ಸಹಕಾರ ಹಾಗೂ ಸೇವಾ ಮನೋಭಾವದ ಮೂಲಕ ಮಾನವೀಯತೆಯನ್ನು ಎತ್ತಿ ಹಿಡಿಯೋಣ ಎಂದು ಹೇಳಿದರು.ಈ ಸಂದರ್ಭದಲ್ಲಿ ಗುರು ಭದ್ರೆಶ್ವರ ಸಂಸ್ಥಾನದ ಶಾಂತಕುಮಾರ ಸ್ವಾಮಿ, ಮುಖಂಡರಾದ ರೇವಣಪ್ಪ ಭದ್ರಣ, ಬಸವರಾಜ ಖೌದಿ, ಸಂಗಮೇಶ ಹಜ್ಜರಗಿ, ನಾಗಶೆಟ್ಟಿ ಅಳ್ಳಿ, ಕಾಶಿನಾಥ ಪಕ್ಕಾ, ನಾಗೇಶ, ಶರಣಪ್ಪ, ಅವಿನಾಶ, ಬಾಬು, ಭೀಮಣ್ಣ ಮಂಜುನಾಥ ಸೇರಿದಂತೆ ಅನೇಕರಿದ್ದರು.

ರೇಣುಕಾಚಾರ್ಯರ ಭಾವಚಿತ್ರದ ಭವ್ಯ ಮೆರವಣಿಗೆಬೀದರ್‌: ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಅಂಗವಾಗಿ ನಗರದಲ್ಲಿ ಬುಧವಾರ ಪುಷ್ಪಾಲಂಕೃತ ರಥದಲ್ಲಿ ರೇಣುಕಾಚಾರ್ಯರ ಭಾವಚಿತ್ರ ಹಾಗೂ ಸಿದ್ಧಾಂತ ಶಿಖಾಮಣಿ ಗ್ರಂಥದ ಭವ್ಯ ಮೆರವಣಿಗೆ ನಡೆಯಿತು.ಡೊಳ್ಳು ಕುಣಿತ, ವೀರಗಾಸೆ, ನಗಾರಿ, ಪುರವಂತಿಕೆ, ಕೋಲಾಟ ಮತ್ತಿತರ ಕಲಾ ತಂಡಗಳು ಮೆರವಣಿಗೆಯ ವೈಭವ ಹೆಚ್ಚಿಸಿದವು. ಮೆರವಣಿಗೆಯಲ್ಲಿ ಪಾಲ್ಗೊಂಡವರು ತಲೆ ಮೇಲೆ ಪೇಟ, ಭಗವಾ ಟೊಪ್ಪಿಗೆ, ಕೊರಳಲ್ಲಿ ಶಲ್ಯ ಧರಿಸಿ ಗಮನ ಸೆಳೆದರು. ಧರ್ಮ ಧ್ವಜಗಳು ರಾರಾಜಿಸಿದವು. ಯುವಕರು ಕುಣಿದು ಕುಪ್ಪಳಿಸಿದರು. ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಇತರ ಗಣ್ಯರು ಕೂಡ ಹೆಜ್ಜೆ ಹಾಕಿ ಪುಳಕಿತಗೊಳಿಸಿದರು.ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಗೊಂಡ ಮೆರವಣಿಗೆ ತಹಶೀಲ್ದಾರ್‌ ಕಚೇರಿ, ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಭಗತ್‌ ಸಿಂಗ್‌ ವೃತ್ತ, ಡಾ. ಅಂಬೇಡ್ಕರ್‌ ವೃತ್ತ, ಜನರಲ್‌ ಕಾರ್ಯಪ್ಪ ವೃತ್ತ, ರೋಟರಿ ಕನ್ನಡಾಂಬೆ ವೃತ್ತದ ಮೂಲಕ ಹಾಯ್ದು ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರಕ್ಕೆ ತಲುಪಿ ಸಮಾರೋಪಗೊಂಡಿತು.ಪ್ರಸಾದ ವಿತರಣೆ : ಜಗದ್ಗುರು ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ ಪ್ರಯುಕ್ತ ಶಾಂತೀಶ್ವರಿ ಸಂಸ್ಥೆಗಳ ಸಮೂಹದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಪ್ರಸಾದ ರೂಪದಲ್ಲಿ ಉಪ್ಪಿಟ್ಟು, ಶಿರಾ, ಮಜ್ಜಿಗೆ ಹಾಗೂ ಬಾಳೆಹಣ್ಣು ವಿತರಿಸಲಾಯಿತು.

ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಡಾ. ರಾಜಶೇಖರ ಶಿವಾಚಾರ್ಯ, ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ, ರೇಣುಕಾಚಾರ್ಯ ಜಯಂತಿ ಆಚರಣೆ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ, ಮುಖಂಡರಾದ ವೈಜಿನಾಥ ಕಮಠಾಣೆ, ಬಾಬುವಾಲಿ, ಶಿವಶರಣಪ್ಪ ವಾಲಿ, ರವೀಂದ್ರ ಸ್ವಾಮಿ, ರಾಮಕೃಷ್ಣ ಸಾಳೆ, ಈಶ್ವರಸಿಂಗ್‌ ಠಾಕೂರ್‌, ಶಕುಂತಲಾ ಬೆಲ್ದಾಳೆ, ತರುಣ ಸೂರ್ಯಕಾಂತ ನಾಗಮಾರಪಳ್ಳಿ, ಓಂಪ್ರಕಾಶ್ ರೊಟ್ಟೆ, ಶ್ರೀಕಾಂತ ಸ್ವಾಮಿ, ರೂಪಾ ಸ್ವಾಮಿ, ಪಪ್ಪು ಪಾಟೀಲ ಖಾನಾಪುರ ಸೇರಿದಂತೆ ಸಮಾಜದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.