ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಮೊದಲು ನಾವೆಲ್ಲರೂ ಭಾರತೀಯರು ಭೇದವಿಲ್ಲದೆ ಏಕ ಮನೋಭಾವದಿಂದ ಶಾಂತಿಯುತವಾಗಿ ಬದುಕೋಣ ಎಂದು ಎ ಎಸ್ ಐ ಕೆ.ಎನ್.ದೇವರಾಜ್ ಕರೆ ನೀಡಿದರು.ಜಾಮೀಯಾ ಮಸೀದಿಯಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಮಾತನಾಡಿ, ಮಹಾತ್ಮ ಗಾಂಧೀಜಿ, ನೆಹರು ಸೇರಿದಂತೆ ಅನೇಕ ಮಹನೀಯರು ಸ್ವಾತಂತ್ರ್ಯತಂದುಕೊಡಲು ಹೋರಾಡಿದ್ದಾರೆ. ನಾವುಗಳು ಒಂದೇ ಎಂಬ ಮನೋಭಾವದಿಂದ ಬದುಕೋಣ ಎಂದರು.
ಗ್ರಾಪಂ ಟಿ.ರಕ್ಷಿತಾ ಜೀವನ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಪಿಡಿಒ ರುದ್ರಯ್ಯ ಮಾತನಾಡಿ, ದೇಶದ ಹಿತಕ್ಕಾಗಿ ಹೋರಾಡಿದ ಮಹನೀಯರ ಬಗ್ಗೆ ತಿಳಿಸಿ ನಾವು ಸಹ ದೇಶದ ಏಳಿಗೆಗಾಗಿ ಶ್ರಮಿಸೋಣ ಎಂದು ಕರೆ ನೀಡಿದರು.ಈ ವೇಳೆ ಜಾಮೀಯಾ ಮಸೀದಿ ಗುರುಗಳಾದ ಜಬೇರ್ ಅಹಮದ್, ಮಸೀದಿ ಅಧ್ಯಕ್ಷ ಸಿಬ್ಗತ್ ಉಲ್ಲಾ, ಉಪಾಧ್ಯಕ್ಷ ಮುಜಾಹಿದ್ ಪಾಷಾ, ಕಾರ್ಯದರ್ಶಿ ಅಮಿರ್ ಪಾಷಾ, ಖಜಾಂಚಿ ಇಲಾಲುದ್ದಿನ್, ಗ್ರಾಪಂ ಉಪಾಧ್ಯಕ್ಷ ಲತಾ ಮಹಾದೇವ ಸೇರಿದಂತೆ ಸದಸ್ಯರು, ಹಿರಿಯರಾದ ಅಹಮದ್ ಪಾಷಾ, ಸಲೀಂ ಪಾಷಾ, ಓಬೇಧುಲ್ಲಾ ಹಾಗೂ ಮಸೀದಿ ಸದಸ್ಯರು ಹಾಜರಿದ್ದರು.
ಮಂಜುನಾಥ್ ಧ್ವಜಾರೋಹಣಹಲಗೂರು:ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ 78 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಾಂಶುಪಾಲ ಆಲಂಗೂರು ಮಂಜುನಾಥ್ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಎನ್ ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ.ಜಗದೀಶ್, ಕಚೇರಿ ಅಧ್ಯಕ್ಷ ಕುಮಾರಸ್ವಾಮಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಚಂದ್ರು, ಡಾಟಾ ಅಪರೇಟರ್ ಶ್ರೀಧರ್ ಮತ್ತು ಗೌರಮ್ಮ, ಇಂಜಿನೀಯರ್ ಸೂರ್ಯ, ಅಜಯ್, ರಾಜೇಶ್, ಜಬಿವುಲ್ಲಾ, ಆಕಾಶ್, ಈ ಯಶವಂತ್, ಶಿಲ್ಪಾ , ಪ್ರಜ್ವಲ್ ಇತರರು ಭಾಗವಹಿಸಿದರು.